Hunsur Road Accident | ಹುಣಸೂರಿನಲ್ಲಿ ಪ್ರತ್ಯೇಕ ಮೂರು ಕಡೆ ಅಪಘಾತ ಮೂವರ ಸಾವು

|

Updated on: Feb 16, 2021 | 8:36 AM

ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ವಿವಿಧೆಡೆ ನಡೆದಿದೆ. ವಕೀಲ ವಿನೋದ್ ರಾಜ್, ಸಂಪತ್ ಪವಾರ್, ರೈತ ಮಹಿಳೆ ಜಯಮ್ಮ ಮೃತರು.

Hunsur Road Accident | ಹುಣಸೂರಿನಲ್ಲಿ ಪ್ರತ್ಯೇಕ ಮೂರು ಕಡೆ ಅಪಘಾತ ಮೂವರ ಸಾವು
ವಕೀಲ ವಿನೋದ್ ರಾಜ್, ಸಂಪತ್ ಪವಾರ್, ರೈತ ಮಹಿಳೆ ಜಯಮ್ಮ
Follow us on

ಮೈಸೂರು: ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ವಿವಿಧೆಡೆ ನಡೆದಿದೆ. ವಕೀಲ ವಿನೋದ್ ರಾಜ್, ಸಂಪತ್ ಪವಾರ್, ರೈತ ಮಹಿಳೆ ಜಯಮ್ಮ ಮೃತರು. ಆಯರಹಳ್ಳಿಯಲ್ಲಿ ಬೈಕ್‌ನಿಂದ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಬೈಕ್ ಸವಾರ ವಿನೋದ್ ರಾಜ್(43) ಮೃತ ದುರ್ದೈವಿ. ವಕೀಲ ವಿನೋದ್ ರಾಜ್ ಬೈಕ್​ನಲ್ಲಿ ತೆರಳುತಿದ್ದಾಗ ಆಯತಪ್ಪಿ ಬೈಕ್‌ ಮೇಲಿಂದ ರಸ್ತೆ ಮೇಲೆ ಬಿದ್ದು ಮೃತಪಟ್ಟಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಣ್ಣೇಗೌಡರ ಕಾಲೋನಿಯ ಬಳಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಂಪತ್ ಪವಾರ್(34) ಮೃತಪಟ್ಟಿದ್ದಾರೆ. ಇನ್ನು ಬೀಜಗನಹಳ್ಳಿ ಬಳಿ ಗೂಡ್ಸ್ ವಾಹನ ಡಿಕ್ಕಿಯಾಗಿ ರೈತ ಮಹಿಳೆ ಜಯಮ್ಮ(54) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವೆರಡು ಪ್ರಕರಣಗಳು ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ರೀತಿ ಹುಣಸೂರಿನಲ್ಲಿ ಮೂರು ಕಡೆ ರಸ್ತೆ ಅಪಘಾತಗಳು ಸಂಭವಿಸಿದ್ದು ಮೂವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Mishaps ಕರ್ನಾಟಕಕ್ಕೆ ಇಂದು ಕರಾಳ ಸೋಮವಾರ: ರಾಜ್ಯದ 4 ಜಿಲ್ಲೆಗಳಲ್ಲಿ ಅವಘಡ, ಅಪಘಾತ, ದುರಂತ..