ಡ್ರಗ್ಸ್ ಮಾರಾಟ‌ ಮಾಡಲು ಯತ್ನಿಸಿದ ನೈಜೀರಿಯಾ ಪ್ರಜೆಗಳು ಅಂದರ್..

|

Updated on: Oct 04, 2020 | 10:10 AM

ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ಮಾರಾಟ‌ ಮಾಡಲು ಯತ್ನಿಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರೈಕ್ ಅಂಥೋನಿ ಅಕುಚುಕುವ, ಎಜೋಫೋಮ ಎಲೋಚುಕುವ, ಒಗ್ ಒಗ್ ಚುಕುವ ಫ್ರಾನ್ಸಿಸ್ ಬಂಧಿತ ಆರೋಪಿಗಳು. ಐಟಿ ಬಿಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅವರಿಗೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಸದಾನದಂದ ನಗರದ ಪಾರ್ಕ್ ಬಳಿ ಸಾರ್ವಜನಿಕವಾಗಿ ಡ್ರಗ್ಸ್ ಸಪ್ಲೈ ಮಾಡಲು ಯತ್ನಿಸುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆಫ್ರಿಕನ್ ಮೂಲದ ಮೂವರು ನೈಜೀರಿಯಾ ಪ್ರಜೆಗಳನ್ನು ಅರೆಸ್ಟ್ […]

ಡ್ರಗ್ಸ್ ಮಾರಾಟ‌ ಮಾಡಲು ಯತ್ನಿಸಿದ ನೈಜೀರಿಯಾ ಪ್ರಜೆಗಳು ಅಂದರ್..
Follow us on

ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ಮಾರಾಟ‌ ಮಾಡಲು ಯತ್ನಿಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರೈಕ್ ಅಂಥೋನಿ ಅಕುಚುಕುವ, ಎಜೋಫೋಮ ಎಲೋಚುಕುವ, ಒಗ್ ಒಗ್ ಚುಕುವ ಫ್ರಾನ್ಸಿಸ್ ಬಂಧಿತ ಆರೋಪಿಗಳು.

ಐಟಿ ಬಿಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅವರಿಗೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಸದಾನದಂದ ನಗರದ ಪಾರ್ಕ್ ಬಳಿ ಸಾರ್ವಜನಿಕವಾಗಿ ಡ್ರಗ್ಸ್ ಸಪ್ಲೈ ಮಾಡಲು ಯತ್ನಿಸುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆಫ್ರಿಕನ್ ಮೂಲದ ಮೂವರು ನೈಜೀರಿಯಾ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ.

ಪ್ರಕರಣದ ಮತ್ತೋರ್ವ ಆರೋಪಿ‌ ಮೈನ್ ಡ್ರಗ್ ಪೇಡ್ಲರ್ ಜೋ ವಿರುದ್ಧ ಸಹ ದೂರು ದಾಖಲಾಗಿದೆ. ಪ್ರಕರಣದ ಆರೋಪಿ ಜೋ ನೈಜೀರಿಯಾದ ತಿರುಪುರ್​ನಿಂದ ಡ್ರಗ್ ಸಪ್ಲೈ ಮಾಡ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬಂಧಿತ ಆರೋಪಿಗಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ123 ಗ್ರಾಂ ಕೊಕೇನ್, 15 ಎಕ್ಸ್ಟಾಸಿ ಟ್ಯಾಬ್ಲೆಟ್, ಕೃತ್ಯಕ್ಕೆ ಬಳಸಿದ್ದ ದ್ವಿ ಚಕ್ರ ವಾಹನಗಳು ಹಾಗೂ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳು ವಿದ್ಯಾರ್ಥಿ ಹಾಗೂ ವ್ಯಾಪಾರದ ವೀಸಾ ಪಾಸ್‌ಪೋರ್ಟ್ ಅಡಿ ಭಾರತಕ್ಕೆ ಬಂದಿರುವ ಮಾಹಿತಿ ಇದೆ. ಅಲ್ಲದೆ ವೀಸಾ, ಪಾಸ್‌ಪೋರ್ಟ್ ಅವಧಿ ಮುಗಿದಿದ್ದರು ಅಕ್ರಮವಾಗಿ ಭಾರತದಲ್ಲೇ ನೆಲೆಸಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದಿರುವ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.