‘ಗಂಗಾ ಕುಲಕರ್ಣಿ ನಮ್ಮ ಮನೆಗೆ ಬಂದ ಬಳಿಕ ನನ್ನ ಪತ್ನಿ ಅಶ್ವಿನಿ ಡಲ್ ಆಗಿಬಿಟ್ರು’

ಬೆಳಗಾವಿ: K ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರವಾಗಿ ಖುದ್ದು ಚಿತ್ರಸಾಹಿತಿಯೇ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಈ ಬಿರುಕಿಗೆ ಕಾರಣವಾದ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ನಾನು, ನನ್ನ ಪತ್ನಿ ಇಬ್ಬರೂ ಚೆನ್ನಾಗಿ ಇದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಮ್ಮ ಕುಟುಂಬದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನಮಗೆ ಮದುವೆಯಾಗಿ 14 ವರ್ಷ ಪೂರ್ತಿಯಾಗಿದೆ.ನಮ್ಮ ಕುಟುಂಬದಲ್ಲೂ ಸಣ್ಣಪುಟ್ಟ ಸಮಸ್ಯೆಗಳು ಇವೆ. ನಮ್ಮ ಮನೆಗೆ ಗಂಗಾ ಕುಲಕರ್ಣಿ ಎಂಬ ಮಹಿಳೆ ಕೆಲಸಕ್ಕೆ ಬಂದಿದ್ದರು. ಅವರ ಕೆಲಸ […]

‘ಗಂಗಾ ಕುಲಕರ್ಣಿ ನಮ್ಮ ಮನೆಗೆ ಬಂದ ಬಳಿಕ ನನ್ನ ಪತ್ನಿ ಅಶ್ವಿನಿ ಡಲ್ ಆಗಿಬಿಟ್ರು’
Follow us
ಆಯೇಷಾ ಬಾನು
|

Updated on:Oct 04, 2020 | 11:42 AM

ಬೆಳಗಾವಿ: K ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರವಾಗಿ ಖುದ್ದು ಚಿತ್ರಸಾಹಿತಿಯೇ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಈ ಬಿರುಕಿಗೆ ಕಾರಣವಾದ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ನಾನು, ನನ್ನ ಪತ್ನಿ ಇಬ್ಬರೂ ಚೆನ್ನಾಗಿ ಇದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಮ್ಮ ಕುಟುಂಬದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ನಮಗೆ ಮದುವೆಯಾಗಿ 14 ವರ್ಷ ಪೂರ್ತಿಯಾಗಿದೆ.ನಮ್ಮ ಕುಟುಂಬದಲ್ಲೂ ಸಣ್ಣಪುಟ್ಟ ಸಮಸ್ಯೆಗಳು ಇವೆ. ನಮ್ಮ ಮನೆಗೆ ಗಂಗಾ ಕುಲಕರ್ಣಿ ಎಂಬ ಮಹಿಳೆ ಕೆಲಸಕ್ಕೆ ಬಂದಿದ್ದರು. ಅವರ ಕೆಲಸ ಇಷ್ಟವಾಗದೆ ನಮಗೆ ಅಸಮಾಧಾನವಿತ್ತು. ಆದರೂ ನಮ್ಮ ಅತ್ತೆ ಕಡೆಯವರೆಂದು ಸುಮ್ಮನಿದ್ದೆವು. ಗಂಗಾ ಕುಲಕರ್ಣಿ ಬಂದ ಬಳಿಕ ನನ್ನ ಪತ್ನಿ ಅಶ್ವಿನಿ ಡಲ್ ಆದರು. ದೇವರ ಮನೆಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಪೂಜೆ ಮಾಡ್ತಿದ್ರು. ಇದು ಏನೆಂದು ವಿಚಾರಿಸಿದಾಗ ನಮ್ಮ ಅತ್ತೆ ಹೇಳಿದ್ರು ಎಂದು ಗಂಗಾ ಕುಲಕರ್ಣಿಯವರ ಕಡೆಯವರು ಹೇಳಿದರು. ಶಿವಾನಂದ ವಾಲಿ ಹೇಳಿದಂತೆ ಗಂಗಾ ಕುಲಕರ್ಣಿ ಪೂಜೆ ಮಾಡುತ್ತಿದ್ದರು.

ಏನೋ ನಡೆಯುತ್ತಿದೆ ಎಂದು ನಾನು ಸುಮ್ಮನೆ ಇದ್ದೆ. ಬೆಳಗಾವಿಗೆ ಹೋಗಿ ಬರುವುದಾಗಿ ಹೇಳಿ ವಾಪಸಾಗಿದ್ದರು. ಬೆಳಗಾವಿಗೆ ಬಂದ ಬಳಿಕ ಜನವರಿಯಲ್ಲಿ ಫೋನ್ ಸ್ವಿಚ್ಡ್ ಆಫ್ ಆಯ್ತು. ಆಗ ನನ್ನ ಪತ್ನಿಯನ್ನು ಭೇಟಿಯಾಗುವುದಕ್ಕೂ ನನ್ನನ್ನ ಬಿಡಲಿಲ್ಲ. ಸಂಬಂಧಿಕರ ಮನೆಯಲ್ಲೂ ನಮ್ಮ ಅತ್ತೆಯವರು ವಿಚಿತ್ರ ಪೂಜೆ ಮಾಡುತ್ತಿದ್ದರು ಎಂದು ತಮ್ಮ ಹೆಂಡತಿಯನ್ನು ದೂರು ಮಾಡಿಸಿರುವ ಬಗ್ಗೆ ಕೆ.ಕಲ್ಯಾಣ್ ಮಾತನಾಡಿದ್ದಾರೆ.

ಏನು ಎಂಬುದು ನನಗೆ ಅದು ಅರ್ಥವಾಗುತ್ತಿರಲಿಲ್ಲ: ಬೆಳಗಾವಿಯಲ್ಲಿ ಮತ್ತೊಂದು ಮನೆ ಮಾಡಿಕೊಂಡಿದ್ದರು. ಅಲ್ಲಿ ನಮ್ಮ ಅತ್ತೆ, ಮಾವ, ಗಂಗಾ ಕುಲಕರ್ಣಿ, ಶಿವಾನಂದ ವಾಲಿ ಪೂಜೆ ಮಾಡುತ್ತಿದ್ದ ವಿಷಯ ತಿಳಿಯಿತು. ಅಲ್ಲಿಗೆ ಹೋಗಲು ಪ್ರಯತ್ನಿಸಿದ ಅಲ್ಲೂ ಖಾಲಿ ಮಾಡಿದ್ದರು. ಬಳಿಕ ನಾನು ಬೆಂಗಳೂರಿಗೆ ವಾಪಸಾಗಿದ್ದೆ. ಬೆಂಗಳೂರಿಗೆ ಬಂದು ನನ್ನ ಅತ್ತೆ ಕಾಲಿಗೆ ನಮಸ್ಕರಿಸಿದೆ. ಆಗಲೂ ನನ್ನ ಪತ್ನಿ ನನ್ನ ಜತೆ ಮಾತಾಡಲು ಬಿಡಲಿಲ್ಲ. ನನ್ನ ಪತ್ನಿ ಕತ್ತಿಗೆ ತಾಳಿ ಇರಲಿಲ್ಲ, ಕಾಲುಂಗುರ ಇರಲಿಲ್ಲ. ಏನೆಂದು ಕೇಳಿದರೆ ಅದು ಇದ್ದರೆ ಮಾತ್ರ ಪತ್ನಿನಾ ಎಂದರು. ಹೋಗಲಿ ಬಿಡು ನಿನಗೆ ಅಂಥಾ ಭಾವನೆ ಇದ್ದರೆ ಸಾಕು ಎಂದು ನಾನು ಆಗಲೂ ಸುಮ್ಮನಿದ್ದೆ ಎಂದ ಕೆ.ಕಲ್ಯಾಣ್ ಹೇಳಿದ್ರು.

15 ವರ್ಷದಿಂದ ಬೇಡವಾದದ್ದ ಆಸ್ತಿ ನನಗೆ ಈಗೇಕೆ ಬೇಕು: ನಾನು ನನ್ನ ಪತ್ನಿಗೆ ಯಾವುದೇ ಮಾನಸಿಕ ಹಿಂಸೆ ಕೊಟ್ಟಿಲ್ಲ. ಇಷ್ಟು ದಿನ ಹಿಂಸೆ ಕೊಡದ ನಾನು ಈಗ ಮಾತ್ರ ಕೊಟ್ಟಿದ್ದೇನಾ? 15 ವರ್ಷದಿಂದ ಬೇಡವಾದದ್ದ ಆಸ್ತಿ ನನಗೆ ಈಗೇಕೆ ಬೇಕು ಎಂದು ಬೆಳಗಾವಿಯಲ್ಲಿ ಚಿತ್ರಸಾಹಿತಿ ಕೆ.ಕಲ್ಯಾಣ್ ಪ್ರಶ್ನಿಸಿದ್ರು. ಶಿವಾನಂದ ವಾಲಿ ನನಗೆ ಗೊತ್ತಾಗಿದ್ದು ನವೆಂಬರ್‌ನಲ್ಲಿ. ನಮ್ಮ ಅತ್ತೆ 800 ಬಾರಿ ಕರೆ ಮಾಡಿ ಶಿವಾನಂದ ವಾಲಿ ಜತೆ ಮಾತನಾಡಿದ್ದಾರೆ. ಶಿವಾನಂದ ವಾಲಿಗೂ ನಮಗೆ ಯಾವುದೇ ಸಂಬಂಧವಿಲ್ಲ. ನನ್ನನ್ನು ಬಿಟ್ಟು ನನ್ನ ಪತ್ನಿ ಅರ್ಧ ಗಂಟೆಯೂ ಇರುತ್ತಿರಲಿಲ್ಲ. ಈಗ ಅವರು ನನ್ನ ಜತೆ ಮಾತಾಡಲು ಇಷ್ಟಪಡುತ್ತಿಲ್ಲ. 8-9 ತಿಂಗಳಿಂದ ಸರಿಯಾಗಿ ಮಾತನಾಡುತ್ತಿಲ್ಲ. ಹೀಗಾಗಿ ನನ್ನ ಪತ್ನಿ ಬ್ರೈನ್ ವಾಶ್ ಮಾಡಿರುವ ಸಾಧ್ಯತೆ ಇದೆ. ನನ್ನ ಪತ್ನಿ ಸಂಬಂಧಿಕರು ನನ್ನ ಜತೆ ಚೆನ್ನಾಗಿಯೇ ಇದ್ದಾರೆ. ಅವರಿಗೆ ತೊಂದರೆ ನೀಡಿದ್ದರೆ ಮೊದಲೇ ಆರೋಪಿಸಬಹುದಿತ್ತು. ಇಷ್ಟು ದಿನ ಇಲ್ಲದ ಆರೋಪ ಈಗ ಏಕೆ ಮಾಡುತ್ತಿದ್ದಾರೆ ಎಂದಿದ್ದಾರೆ.

Published On - 11:19 am, Sun, 4 October 20

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ