JDS ಟಿಕೆಟ್ ಆಕಾಂಕ್ಷಿ ಕಲ್ಕೆರೆ ರವಿಕುಮಾರ್ ಕಾಂಗ್ರೆಸ್‌ಗೆ ಸೇರ್ಪಡೆ

|

Updated on: Oct 04, 2020 | 3:16 PM

ತುಮಕೂರು: ನವೆಂಬರ್‌ 3ರಂದು ನಡೆಯಲಿರುವ ಶಿರಾ ಕ್ಷೇತ್ರದ ಉಪಚುನಾವಣೆಗೆ ಮೂರು ಪಕ್ಷಗಳು ತಮ್ಮ ರಣನೀತಿಯನ್ನು ತಯಾರಿಸಿವೆ. ಹೇಗಾದರೂ ಮಾಡಿ ಶಿರಾ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಈ ನಡುವೆ, ‘ಕೈ’ ನಿಯೋಜಿತ ಅಭ್ಯರ್ಥಿ TB .ಜಯಚಂದ್ರಗೆ ಮತ್ತಷ್ಟು ಬಲ ಸಿಕ್ಕಿದೆ. ಜೆ‌ಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಲ್ಕೆರೆ ರವಿಕುಮಾರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ರವಿಕುಮಾರ್ ತುಮಕೂರು ಜಿ.ಪಂ ಅಧ್ಯಕ್ಷೆ ಲತಾ ಪತಿ. ಕಾಂಗ್ರೆಸ್‌ಗೆ ಸೇರುವ ಮುಖಾಂತರ ಜೆಡಿಎಸ್‌ ಪಕ್ಷಕ್ಕೆ ರವಿಕುಮಾರ್ ಶಾಕ್‌ ನೀಡಿದ್ದಾರೆ. ರವಿಕುಮಾರ್ […]

JDS ಟಿಕೆಟ್ ಆಕಾಂಕ್ಷಿ ಕಲ್ಕೆರೆ ರವಿಕುಮಾರ್ ಕಾಂಗ್ರೆಸ್‌ಗೆ ಸೇರ್ಪಡೆ
Follow us on

ತುಮಕೂರು: ನವೆಂಬರ್‌ 3ರಂದು ನಡೆಯಲಿರುವ ಶಿರಾ ಕ್ಷೇತ್ರದ ಉಪಚುನಾವಣೆಗೆ ಮೂರು ಪಕ್ಷಗಳು ತಮ್ಮ ರಣನೀತಿಯನ್ನು ತಯಾರಿಸಿವೆ. ಹೇಗಾದರೂ ಮಾಡಿ ಶಿರಾ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಈ ನಡುವೆ, ‘ಕೈ’ ನಿಯೋಜಿತ ಅಭ್ಯರ್ಥಿ TB .ಜಯಚಂದ್ರಗೆ ಮತ್ತಷ್ಟು ಬಲ ಸಿಕ್ಕಿದೆ. ಜೆ‌ಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಲ್ಕೆರೆ ರವಿಕುಮಾರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ರವಿಕುಮಾರ್ ತುಮಕೂರು ಜಿ.ಪಂ ಅಧ್ಯಕ್ಷೆ ಲತಾ ಪತಿ. ಕಾಂಗ್ರೆಸ್‌ಗೆ ಸೇರುವ ಮುಖಾಂತರ ಜೆಡಿಎಸ್‌ ಪಕ್ಷಕ್ಕೆ ರವಿಕುಮಾರ್ ಶಾಕ್‌ ನೀಡಿದ್ದಾರೆ.

ರವಿಕುಮಾರ್ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತುಮಕೂರಿನ ಹಿರಿಯ ಕಾಂಗ್ರೆಸ್​ ಮುಖಂಡರು ಬರಮಾಡಿಕೊಂಡರು.