ಮತ್ತೆ ಹರಿದಾಡುತ್ತಿವೆ ರಸ್ತೆ ಮೇಲೆ ಹರಿದ ನೋಟುಗಳು! ಆತಂಕದಲ್ಲಿ ಮೈಸೂರು
ಮೈಸೂರು: ಮೈಸೂರಿನಲ್ಲಿ ಮತ್ತೆ ಹರಿದ ನೋಟುಗಳ ಹಾವಳಿ ಶುರುವಾಗಿದೆ. ಆದ್ರೆ ಈ ಬಾರಿ ರಸ್ತೆೆ ಮೇಲೆ ಬಿದ್ದ ಹರಿದ ನೋಟುಗಳು ಜನರನ್ನ ಕಂಗೆಡಿಸಿವೆ. ಹೌದು, ಸಾಂಸ್ಕೃತಿಕ ನಗರಿ ಮೈಸೂರು ಮೊದಲೇ ಕೊರೊನಾ ಹೆಮ್ಮಾರಿಯ ಆತಂಕದಲ್ಲಿದೆ. ಅಂತಹದ್ರಲ್ಲಿ ಹರಿದ ನೋಟುಗಳು ಅಗ್ರಹಾರ ಬಡಾವಣೆಯ ರಸ್ತೆ ಮೇಲೆ ಬಿದ್ದಿವೆ. ಅದೂ 500, 200 ಮತ್ತು 100ರ ನೋಟುಗಳು. ಹೀಗಾಗಿ ಜನರು ಕೊರೊನಾ ಹರಡುವ ಭೀತಿಯಿಂದ ಆತಂಕಕ್ಕೊಳಗಾಗಿದ್ದಾರೆ. ಈ ಮೊದಲು ಸಹ ಮೈಸೂರಿನ ನಜರ್‌ಬಾದ್ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ 100 […]
ಮೈಸೂರು: ಮೈಸೂರಿನಲ್ಲಿ ಮತ್ತೆ ಹರಿದ ನೋಟುಗಳ ಹಾವಳಿ ಶುರುವಾಗಿದೆ. ಆದ್ರೆ ಈ ಬಾರಿ ರಸ್ತೆೆ ಮೇಲೆ ಬಿದ್ದ ಹರಿದ ನೋಟುಗಳು ಜನರನ್ನ ಕಂಗೆಡಿಸಿವೆ.
ಹೌದು, ಸಾಂಸ್ಕೃತಿಕ ನಗರಿ ಮೈಸೂರು ಮೊದಲೇ ಕೊರೊನಾ ಹೆಮ್ಮಾರಿಯ ಆತಂಕದಲ್ಲಿದೆ. ಅಂತಹದ್ರಲ್ಲಿ ಹರಿದ ನೋಟುಗಳು ಅಗ್ರಹಾರ ಬಡಾವಣೆಯ ರಸ್ತೆ ಮೇಲೆ ಬಿದ್ದಿವೆ. ಅದೂ 500, 200 ಮತ್ತು 100ರ ನೋಟುಗಳು. ಹೀಗಾಗಿ ಜನರು ಕೊರೊನಾ ಹರಡುವ ಭೀತಿಯಿಂದ ಆತಂಕಕ್ಕೊಳಗಾಗಿದ್ದಾರೆ.
ಈ ಮೊದಲು ಸಹ ಮೈಸೂರಿನ ನಜರ್‌ಬಾದ್ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ 100 ರೂಪಾಯಿಗಳ ನೋಟುಗಳನ್ನ ಸುಟ್ಟು ಹಾಕಲಾಗಿತ್ತು. ಈಗ ಮತ್ತೆ ಅಂತಹದ್ದೇ ಘಟನೆ ಸಂಭವಿಸಿರೋದು ಮೈಸೂರಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ.