ರಾಮನಗರ: ಜಿಲ್ಲೆಯ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ಲಾಕೌಟ್ ಆಗಿದೆ. ಕಂಪನಿಯ ಕಾರ್ಮಿಕರು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿ ಲಾಕೌಟ್ ಅಗಿದೆ.
ಕಂಪನಿಯ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ ಮಾಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಕಾರ್ಮಿಕರು ಕಂಪನಿ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಂಪನಿಯ್ನು ತಾತ್ಕಾಲಿಕವಾಗಿ ಲಾಕೌಟ್ ಮಾಡಲಾದಿದೆ. ಸುಮಾರು 3500 ಕಾರ್ಮಿಕರು ಕೆಲಸ ನಿರ್ವಸ್ತಿರುವ ಕಂಪನಿಗೆ ಪೊಲೀಸ್ ಭದ್ರತೆ ಸಹ ಒದಗಿಸಲಾದಿದೆ.
Published On - 5:19 pm, Tue, 10 November 20