ಬೆಂಗಳೂರು: ಸರ್ಕಾರದ ವಿರುದ್ಧ ಮತ್ತೆ ಸಿಡಿದೇಳಲು ಸಾರಿಗೆ ಸಿಬ್ಬಂದಿ ಮುಂದಾಗಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆಗೆ ಸಾರಿಗೆ ಸಿಬ್ಬಂದಿಯಿಂದ ಬೆಂಗಳೂರಿನ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ಅರ್ಧವೇತನ, ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ರಜೆಗಳ ಸಮಸ್ಯೆ ಪರಿಹರಿಸಲು ಕೋರಿ ನಾಳೆ ಪ್ರತಿಭಟನೆ ನಡೆಸಲಿದ್ದಾರೆ. ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಎಲ್ಲ ಸಂಘಟನೆಗಳಿಂದ ಸಾರಿಗೆ ನಿಗಮದ ವಿರುದ್ಧ ಹೋರಾಟ ನಡೆಯಲಿದೆ.
ಈ ಹಿಂದೆ ಕೇವಲ ಒಂದೇ ಒಂದು ಸಂಘಟನೆ ಪ್ರತಿಭಟನೆ ನಡೆಸಿತ್ತು. ಈಗ ಎಲ್ಲಾ ಸಂಘಟನೆಗಳು ಸಾರಿಗೆ ನಿಗಮದ ವಿರುದ್ಧ ಒಂದಾಗಿ ಪ್ರತಿಭಟಿಸಲು ನಿರ್ಧಾರ ಮಾಡಿವೆ. ಸಿಐಟಿಯು ಸಂಘಟನೆ ಪ್ರತಿಭಟನೆಯ ನೇತೃತ್ವ ವಹಿಸಲಿದೆ. ಅರ್ಧವೇತನ ಪಾವತಿ, ಅಧಿಕಾರಿಗಳ ಕಿರುಕುಳ, ರಜೆಗಳ ಸಮಸ್ಯೆ ವಿರುದ್ಧ ರೋಸಿಹೋಗಿರೋ ಸಾರಿಗೆ ಸಿಬ್ಬಂದಿ ಮತ್ತೆ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಆದರೆ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಎಂದಿನಂತೆ ಬಸ್ಸುಗಳು ಸಂಚಾರ ಮಾಡಲಿವೆ ಎಂಬ ಮಾಹಿತಿ ಸಿಕ್ಕಿದೆ.
ನಾಳಿನ ಧರಣಿಯಿಂದ ಬಸ್ ಸಂಚಾರಕ್ಕೆ ತೊಂದರೆಯಿಲ್ಲ
ನಾಳೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲ್ಲ. ಸಾರಿಗೆ ಸಿಬ್ಬಂದಿ ವೇತನಕ್ಕೆ ಯಾವುದೇ ತೊಂದರೆ ಇಲ್ಲ. ಸಿಬ್ಬಂದಿಗೆ ನಾವು ಕೊಟ್ಟಿರುವ ಭರವಸೆ ಈಡೇರಿಸುತ್ತೇವೆ. ನಾಳಿನ ಧರಣಿಯಿಂದ ಬಸ್ ಸಂಚಾರಕ್ಕೆ ತೊಂದರೆಯಿಲ್ಲ ಎಂದು ಟಿವಿ9ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ನಷ್ಟದಲ್ಲಿರುವ ಬಿಎಂಟಿಸಿಯ ಆರ್ಥಿಕ ಹೊರೆ ತಪ್ಪಿಸಲು ಕಸರತ್ತು
ಬಿಎಂಟಿಸಿ ಆಡಳಿತ ಮಂಡಳಿ ಅಕ್ಷರಶಃ ಮುಳುಗುವ ಹಡಗಾಗಿದೆ. ನಷ್ಟದ ಸವಾರಿಗೆ ಬ್ರೇಕ್ ಹಾಕಲು ಅಧಿಕಾರಿಗಳ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಸಾರಿಗೆ ಸಚಿವ ಸವದಿ ಅವಧಿಯಲ್ಲಿ BMTCಗೆ ದಯನೀಯ ಸ್ಥಿತಿ? ಎದುರಾದಂತಿದೆ. ಬಿಎಂಟಿಸಿಯಲ್ಲಿ ಸಾರಿಗೆ ಸಿಬ್ಬಂದಿಗೆ ಸಂಬಳ, ಇಂಧನ ಖರೀದಿ, ಸ್ಪೇರ್ ಪಾರ್ಟ್ಸ್ ಖರೀದಿಗೂ ಹಣವಿಲ್ಲದೆ ಭಾರಿ ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
ಆರ್ಥಿಕ ನಿರ್ವಹಣೆಗೆ ಬಿಎಂಟಿಸಿಯಿಂದ ಸಾಲದ ಮೇಲೆ ಸಾಲ ಹೆಚ್ಚುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಸಚಿವರ ಅನಗತ್ಯ ನಿರ್ಧಾರದಿಂದ ಸಾರಿಗೆ ಸಂಸ್ಥೆಯ ನಷ್ಟದಿಂದ ಅಡಮಾನ ಇಡುವ ದುಸ್ಥಿತಿ ಉಂಟಾಗಿದೆ. ಆರ್ಥಿಕ ಸಂಕಷ್ಟದಿಂದ ಸಾಲಕ್ಕಾಗಿ ಶಾಂತಿನಗರ ಟಿಟಿಎಂಸಿ ಅಡಮಾನ ಇಡಲಾಗಿದೆ. TTMC ಅಡಮಾನ ಇಟ್ಟು 160 ಕೋಟಿ ರೂಪಾಯಿ ಸಾಲ ಆಗಿದೆ. 160 ಕೋಟಿಗೆ ಪ್ರತಿ ತಿಂಗಳು 1 ಕೋಟಿ ರೂ. ಬಡ್ಡಿ ಪಾವತಿ. ನಿಗಮ, ಕೆನರಾ ಬ್ಯಾಂಕ್ನಿಂದ ₹160 ಕೋಟಿ ಸಾಲ ಪಡೆಯಲಾಗಿದೆ.
ಮನೆಯಿಂದ ಹೊರಡುವಾಗ ರಾಜಧಾನಿ ಜನರೇ ಎಚ್ಚರ.. ಎಲ್ಲೆಲ್ಲಿ ಸಾರಿಗೆ ಪ್ರತಿಭಟನೆ ಬಿಸಿ ಹೇಗಿದೆ?
Published On - 9:26 am, Tue, 9 February 21