ಹಾಸನದಲ್ಲಿ ಡೇರಿ ಸ್ಥಳಾಂತರ ವಿಚಾರಕ್ಕೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ.. ಕಾರ್ಯದರ್ಶಿ ಸೇರಿ ಹಲವರಿಗೆ ಗಾಯ

|

Updated on: Mar 11, 2021 | 12:21 PM

ಡೇರಿ ಸ್ಥಳಾಂತರ ಮಾಡುವ ವಿಚಾರಕ್ಕೆ JDS, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿರುವ ಘಟನೆ ಹಾಸನ ತಾಲೂಕಿನ ಶಂಖ ಗ್ರಾಮದಲ್ಲಿ ನಡೆದಿದೆ.

ಹಾಸನದಲ್ಲಿ ಡೇರಿ ಸ್ಥಳಾಂತರ ವಿಚಾರಕ್ಕೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ.. ಕಾರ್ಯದರ್ಶಿ ಸೇರಿ ಹಲವರಿಗೆ ಗಾಯ
JDS, BJP ಕಾರ್ಯಕರ್ತರ ನಡುವೆ ಮಾರಾಮಾರಿ
Follow us on

ಹಾಸನ: ಡೇರಿ ಸ್ಥಳಾಂತರ ಮಾಡುವ ವಿಚಾರಕ್ಕೆ JDS, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿರುವ ಘಟನೆ ಹಾಸನ ತಾಲೂಕಿನ ಶಂಖ ಗ್ರಾಮದಲ್ಲಿ ನಡೆದಿದೆ. ಗಲಾಟೆಯಲ್ಲಿ ಡೇರಿ ಕಾರ್ಯದರ್ಶಿ ಉಮೇರಾ ಭಾನು, ಸಹಕಾರ ಸಂಘ ಸಹಾಯಕ ಅಭಿವೃದ್ಧಿ ಅಧಿಕಾರಿ ಸುನಿಲ್, ಬಿಜೆಪಿ ಬೆಂಬಲಿತ ಜಬಿಉಲ್ಲಾ ಷರೀಫ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

5 ವರ್ಷದಿಂದ ಖಾಸಗಿ ಕಟ್ಟಡದಲ್ಲಿ ಮಹಿಳಾ ಹಾಲಿನ ಡೇರಿ ನಡೆಸಲಾಗುತ್ತಿತ್ತು. ಈ ಕಟ್ಟಡ ಜೆಡಿಎಸ್ ಬೆಂಬಲಿತ ಉಮೇರಾ ಭಾನುಗೆ ಸೇರಿದ ಕಟ್ಟಡವಾಗಿದೆ. ಮಹಿಳಾ ಹಾಲಿನ ಡೇರಿಯನ್ನು ಖಾಸಗಿ ಕಟ್ಟಡದಿಂದ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸ್ಥಳಾಂತರಿಸಲು ಬಿಜೆಪಿ ಕಾರ್ಯಕರ್ತರ ಒತ್ತಾಯಿಸಿದ್ದರು. ಜಿಲ್ಲಾ ಸಹಕಾರ ಸಂಘಗಳ ಸಹಾಯಕ ಅಭಿವೃದ್ಧಿ ಅಧಿಕಾರಿ ಸುನೀಲ್ ಮೂಲಕ ಕಟ್ಟಡ ವರ್ಗಾವಣೆ ಮಾಡಿಸಲು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ. ಈ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಗಲಾಟೆ ಶುರುವಾಗಿದ್ದು ಕೊನೆಗೆ ದೊಣ್ಣೆ, ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಬಳಿಕ ಕೊನೆಗೂ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಕಚೇರಿಗೆ ಡೇರಿಯನ್ನು ಸ್ಥಳಾಂತರ ಮಾಡಿದ್ದಾರೆ.

ಈ ಮಾರಾಮಾರಿಯಲ್ಲಿ ಡೇರಿ ಕಾರ್ಯದರ್ಶಿ ಉಮೇರಾ ಭಾನು, ಸಹಕಾರ ಸಂಘ ಸಹಾಯಕ ಅಭಿವೃದ್ಧಿ ಅಧಿಕಾರಿ ಸುನಿಲ್, ಬಿಜೆಪಿ ಬೆಂಬಲಿತ ಜಬಿಉಲ್ಲಾ ಷರೀಫ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಕಾರ್ಯಕರ್ತರ ಮೇಲೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ರೇವಣ್ಣ, ಪ್ರೀತಂಗೌಡ ಮಧ್ಯೆ ಕೋಲ್ಡ್ ವಾರ್
ಇನ್ನು ಶಂಖ ಗ್ರಾಮದಲ್ಲಿನ ಡೇರಿ ಸ್ಥಳಾಂತರಕ್ಕೆ ಬಿಜೆಪಿ ಶಾಸಕ ಪ್ರೀತಂಗೌಡ ಸೂಚಿಸಿದ್ದರು. ಶಾಸಕರ ಸೂಚನೆ ಮೇರೆಗೆ ಡೇರಿ ಸ್ಥಳಾಂತರಿಸಲಾಗಿತ್ತು ಎಂದು ತಿಳಿದು ಬಂದಿದೆ. ಕಾನೂನು ಬಾಹಿರವಾಗಿ ಡೇರಿ ಸ್ಥಳಾಂತರಿಸಲಾಗಿದೆ ಎಂದು ಶಂಖ ಗ್ರಾಮದ ಕೆಲವರು ಆರೋಪಿಸಿದ್ದಾರೆ. ಜೊತೆಗೆ ಡೇರಿ ಸ್ಥಳಾಂತರ ಬೆನ್ನಲ್ಲೇ ಹಾಲು ಪಡೆಯದಂತೆ ಹಾಸನ ಹಾಲು ಒಕ್ಕೂಟದಿಂದ ಆದೇಶ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಹೆಚ್​.ಡಿ.ರೇವಣ್ಣ ಒತ್ತಡದಿಂದ ಹಾಲು ಖರೀದಿಸುತ್ತಿಲ್ಲ ಎಂದು ಶಂಖ ಗ್ರಾಮದ ಕೆಲವರು ರೇವಣ್ಣ ವಿರುದ್ಧ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಜೈಶ್ರೀರಾಮ್ ಘೋಷಣೆ ಕೂಗಿದಕ್ಕೆ ಉಂಟಾಯ್ತು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ, ಪೊಲೀಸರಿಂದ ಲಾಠಿ ಚಾರ್ಜ್

Published On - 11:44 am, Thu, 11 March 21