TV9 Big Impact​: ನಾಳೆಯಿಂದ BMTC Bus Pass ದರ ಇಳಿಕೆ

| Updated By:

Updated on: May 25, 2020 | 1:13 PM

ಬೆಂಗಳೂರು: ಕೊನೆಗೂ ಟಿವಿ9 ಅಭಿಯಾನಕ್ಕೆ ಮಣಿದ ಬಿಎಂಟಿಸಿ ದಿನದ ಬಸ್​ ಪಾಸ್ ದರ ಇಳಿಕೆಗೆ ನಿರ್ಧರಿಸಿದೆ. ನಾಳೆಯಿಂದ ಬಿಎಂಟಿಸಿಯಲ್ಲಿ 6 ಬಗೆಯ ಪಾಸ್ ವಿತರಣೆ ಮಾಡುತ್ತಿದ್ದು, ದಿನದ ಪಾಸ್‌ ದರ 70ರೂ. ನಿಂದ 50 ರೂಪಾಯಿಗೆ ಇಳಿಕೆ ಮಾಡಿದೆ. ಒಂದು ಕಡೆ ಜನ ಕೊರೊನಾ ಕಾಟದಿಂದ ತತ್ತರಿಸಿರುವಾಗ ರಾಜ್ಯ ಸಾರಿಗೆ ವ್ಯವಸ್ಥೆ ಹಗಲು ದರೋಡೆಗೆ ಇಳಿದಿತ್ತು. ಅವೈಜ್ಞಾನಿಕ ರೀತಿಯಲ್ಲಿ ಬಸ್ ಪಾಸ್ ದರ ನಿಗದಿಪಡಿಸಿತ್ತು. ಇದರಿಂದ ಜನ ಕಂಗೆಟ್ಟಿದ್ದರು. ಜನರ ಆಕ್ರೋಶಕ್ಕೆ ದನಿಯಾದ ಟಿವಿ9 ದೊಡ್ಡ ಅಭಿಯಾನವನ್ನೇ […]

TV9 Big Impact​: ನಾಳೆಯಿಂದ BMTC Bus Pass ದರ ಇಳಿಕೆ
Follow us on

ಬೆಂಗಳೂರು: ಕೊನೆಗೂ ಟಿವಿ9 ಅಭಿಯಾನಕ್ಕೆ ಮಣಿದ ಬಿಎಂಟಿಸಿ ದಿನದ ಬಸ್​ ಪಾಸ್ ದರ ಇಳಿಕೆಗೆ ನಿರ್ಧರಿಸಿದೆ. ನಾಳೆಯಿಂದ ಬಿಎಂಟಿಸಿಯಲ್ಲಿ 6 ಬಗೆಯ ಪಾಸ್ ವಿತರಣೆ ಮಾಡುತ್ತಿದ್ದು, ದಿನದ ಪಾಸ್‌ ದರ 70ರೂ. ನಿಂದ 50 ರೂಪಾಯಿಗೆ ಇಳಿಕೆ ಮಾಡಿದೆ.

ಒಂದು ಕಡೆ ಜನ ಕೊರೊನಾ ಕಾಟದಿಂದ ತತ್ತರಿಸಿರುವಾಗ ರಾಜ್ಯ ಸಾರಿಗೆ ವ್ಯವಸ್ಥೆ ಹಗಲು ದರೋಡೆಗೆ ಇಳಿದಿತ್ತು. ಅವೈಜ್ಞಾನಿಕ ರೀತಿಯಲ್ಲಿ ಬಸ್ ಪಾಸ್ ದರ ನಿಗದಿಪಡಿಸಿತ್ತು. ಇದರಿಂದ ಜನ ಕಂಗೆಟ್ಟಿದ್ದರು. ಜನರ ಆಕ್ರೋಶಕ್ಕೆ ದನಿಯಾದ ಟಿವಿ9 ದೊಡ್ಡ ಅಭಿಯಾನವನ್ನೇ ಕೈಗೊಂಡಿತ್ತು. ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ಪ್ರಶ್ನಿಸಿತ್ತು. ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡು ತನ್ನ ನಿರ್ಧಾರದಿಂದ ಹಿಂದೆಸರಿದಿದೆ.

 

ಪ್ರಯಾಣಿಕರ ಅಕ್ರೋಶಕ್ಕೆ ಮಣಿದು ಹೊಸ ಪಾಸ್ ವಿತರಣೆಗೆ ಮುಂದಾಗಿದೆ. ಹೊಸದಾಗಿ 5 ರೂ. 10 ರೂ. 15, 20 ಹಾಗೂ 30 ರೂ. ಪಾಸ್ ಪರಿಚಯ ಮಾಡೋಕೆ ಬಿಎಂಟಿಸಿ ಮುಂದಾಗಿದೆ. ಟಿಕೆಟ್ ಬದಲಾಗಿ ಪಾಸ್ ವಿತರಣೆ ಮಾಡಲಾಗುತ್ತೆ ಎಂದೂ ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಸತೀಶ್ ಬಾಬು ಟಿವಿ9ಗೆ ಮಾಹಿತಿ ನೀಡಿದ್ದಾರೆ. ಟಿವಿ9 ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಲಕ್ಷಣ ಸವದಿ ಸಹ ಇದನ್ನು ಖಚಿತಪಡಿಸಿದ್ದಾರೆ.

ನಾಳೆಯಿಂದ 4 ಸಾವಿರ ಬಸ್‌ಗಳ ಸಂಚಾರ:
ನಾಳೆಯಿಂದ ಬೆಂಗಳೂರಿನಲ್ಲಿ 4 ಸಾವಿರ ಬಸ್‌ಗಳ ಸಂಚರಿಸಲಿವೆ. ಈ ಹಿಂದೆ 2,100 ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಅಲ್ಲದೆ ಹಲವು ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳೇ ಇರಲಿಲ್ಲ. ಬಸ್ ಸೌಲಭ್ಯವಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದರು. ಈ ಬಗ್ಗೆ ನಿರಂತರವಾಗಿ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು.

Published On - 12:17 pm, Mon, 25 May 20