ಚಿಕ್ಕ ತಿರುಪತಿಯಲ್ಲಿ ದೊಡ್ಡದೇ ಉಂಡೆನಾಮ ತಿಕ್ಕಿದ ಭೂಪ!
ಕೋಲಾರ: ಮೋಸ ಹೋಗುವವರಿಗೆ ಯಾವ ಕಾಲವಾದರೇನು? ಕೊರೊನಾ ಸಂಕಷ್ಟ ಇದ್ದರೇನು? ಯಾವಾಗಾದರೇನು? ಮೋಸ ಹೋಗೋಕ್ಕೆ ನಾವು ಸಿದ್ಧವಿದ್ದೇವೆ ಅನ್ನುವವವರು ಇರುವಾಗ ದೊಡ್ಡದಾಗಿ ಪಂಗನಾಮ ತಿಕ್ಕುವ ಜನರೂ ಹೊಂಚುಹಾಕಿ ಕುಳಿತಿರುತ್ತಾರೆ! ಅಲ್ವಾ? ಚಿಕ್ಕ ತಿರುಪತಿಯಲ್ಲಿ ದೊಡ್ಡದೇ ಉಂಡೆನಾಮ ತಿಕ್ಕಿದ ಆಸಾಮಿ! ಚಿಕ್ಕತಿರುಪತಿಯ ಶ್ರೀನಿವಾಸಯ್ಯ ಎಂಬ ಐನಾತಿ ಆಸಾಮಿ ಚೀಟಿ ವ್ಯವಹಾರದಲ್ಲಿ ಇತ್ತೀಚೆಗೆ 4 ಕೋಟಿ ರೂಪಾಯಿ ವಂಚನೆ ಎಸಗಿದ್ದಾನೆ ಎನ್ನಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿಯಲ್ಲಿ ಈ ಉಂಡೆನಾಮ ಪ್ರಕರಣ ನಡೆದಿದೆ. ಇಲ್ಲಿನ ಜನ 2, […]
ಕೋಲಾರ: ಮೋಸ ಹೋಗುವವರಿಗೆ ಯಾವ ಕಾಲವಾದರೇನು? ಕೊರೊನಾ ಸಂಕಷ್ಟ ಇದ್ದರೇನು? ಯಾವಾಗಾದರೇನು? ಮೋಸ ಹೋಗೋಕ್ಕೆ ನಾವು ಸಿದ್ಧವಿದ್ದೇವೆ ಅನ್ನುವವವರು ಇರುವಾಗ ದೊಡ್ಡದಾಗಿ ಪಂಗನಾಮ ತಿಕ್ಕುವ ಜನರೂ ಹೊಂಚುಹಾಕಿ ಕುಳಿತಿರುತ್ತಾರೆ! ಅಲ್ವಾ?
ಚಿಕ್ಕ ತಿರುಪತಿಯಲ್ಲಿ ದೊಡ್ಡದೇ ಉಂಡೆನಾಮ ತಿಕ್ಕಿದ ಆಸಾಮಿ! ಚಿಕ್ಕತಿರುಪತಿಯ ಶ್ರೀನಿವಾಸಯ್ಯ ಎಂಬ ಐನಾತಿ ಆಸಾಮಿ ಚೀಟಿ ವ್ಯವಹಾರದಲ್ಲಿ ಇತ್ತೀಚೆಗೆ 4 ಕೋಟಿ ರೂಪಾಯಿ ವಂಚನೆ ಎಸಗಿದ್ದಾನೆ ಎನ್ನಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿಯಲ್ಲಿ ಈ ಉಂಡೆನಾಮ ಪ್ರಕರಣ ನಡೆದಿದೆ.
ಇಲ್ಲಿನ ಜನ 2, 3, 5 ಲಕ್ಷ ರೂ. ಚೀಟಿ ವ್ಯವಹಾರ ಮಾಡುತ್ತಿದ್ದರು. ಹೀಗೆ ಸುಮಾರು 200-300 ಜನರಿಂದ ಹಣ ಪಡೆದು ಆ ವ್ಯಕ್ತಿ ಪರಾರಿಯಾಗಿದ್ದಾನೆ. ಶ್ರೀನಿವಾಸಯ್ಯ ಮನೆ ಮುಂದೆ ಹಣ ಕಳೆದುಕೊಂಡವರು ಪ್ರತಿಭಟನೆ ನಡೆಸಿ, ಮಾಲೂರು ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ.
Published On - 2:15 pm, Mon, 25 May 20