ಶುರುವಾಯ್ತು ಧಾರಾವಾಹಿ ಚಿತ್ರೀಕರಣ.. ಹೇಗಿದೆ ವಾತಾವರಣ? Photos ನೋಡಿ!
ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್ಡೌನ್ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್ಗಳು ಸಜ್ಜಾಗತೊಡಗಿವೆ. ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ. ಹಾಗಾಗಿ […]
ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್ಡೌನ್ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್ಗಳು ಸಜ್ಜಾಗತೊಡಗಿವೆ.
ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ.
ಹಾಗಾಗಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಶೂಟಿಂಗ್ ಸ್ಪಾಟ್ನಲ್ಲಿ 20ಕ್ಕೂ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಬೇಕು. ಮೇಕಪ್ ಕಿಟ್‌ಗಳನ್ನು ಕಲಾವಿದರೇ ತರಬೇಕು ಎಂಬ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ ಪ್ರತಿ 2 ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್ ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು. ಈ ಸೂಚನೆಗಳಿಗೆ ಅನ್ವಯಪಟ್ಟು ಕಲಾವಿದರು ಮತ್ತು ತಾಂತ್ರಕವರ್ಗ ಇಂದಿನಿಂದ ಶೂಟಿಂಗ್ ಆಕ್ಷನ್ ಕಟ್ ಹೇಳಿದೆ.
ಕೊರೊನಾ ಸಂಕಷ್ಟದಿಂದ ನಲುಗಿದ್ದ ಕನ್ನಡ ಕಿರುತೆರೆಯಲ್ಲಿ ಚಟುವಟಿಕೆ ಗರಿಗೆದರಿದೆ. 2,000 ದಿಂದ 3,000 ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ್ದಾರೆ. ಜೂನ್ 1 ರಿಂದ ವಿವಿಧ ಧಾರಾವಾಹಿಗಳು ಹೊಸ ರೂಪದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಉದ್ಯಮದ ಮೂಲಗಳು ಟಿವಿ9 ಗೆ ತಿಳಿಸಿವೆ.