ಬೆಂಗಳೂರು: ನ್ಯೂ ಇಯರ್ ಸೆಲೆಬ್ರೆಷನ್ ಕಿಕ್ಕೇರಿಸಲು ಅಕ್ರಮ ಮದ್ಯ ಮಾರಾಟಕ್ಕೆ ಯತ್ನಿಸಿದವರನ್ನು ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ಅಂಡ್ ಟೀಂನ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬಂಧಿಸಲಾಗಿದೆ.
ಮಿಲ್ಟ್ರಿ ಕ್ಯಾಂಟಿನ್ನಲ್ಲಿ ಬೇರೆಯವರ ಕಾರ್ಡ್ ಬಳಸಿ ಮದ್ಯ ಖರೀದಿಸಿದ ಕಿರಾತಕರ ತಂಡ ಬಳಿಕ ಪಾರ್ಟಿಗಳಿಗೆ ಬಾರ್ ರೇಟ್ಗಿಂತ ಕಡಿಮೆ ರೇಟ್ಗೆ ಡ್ರಿಂಕ್ಸ್ ಮಾರಾಟಕ್ಕೆ ಯತ್ನ ನಡೆಸಿದ್ದರು. ವಿಚಾರದ ತಿಳಿದ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಅಕ್ರಮ ಮಾರಾಟ ಜಾಲದಲ್ಲಿ ಮತ್ತಷ್ಟು ಆರೋಪಿಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
Published On - 8:22 am, Wed, 30 December 20