ಮದ್ದೂರು ಮಹಿಳೆ ಅತ್ಯಾಚಾರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Rape ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಮಹಿಳೆ ಅತ್ಯಾಚಾರಗೈದು ಹತ್ಯೆ ಮಾಡಿದ್ದ ಇಬ್ಬರನ್ನು ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮದ್ದೂರು ಮಹಿಳೆ ಅತ್ಯಾಚಾರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮನುಕುಮಾರ್ (ಎಡ) ರಮೇಶ್ (ಬಲ)
Edited By:

Updated on: Feb 09, 2021 | 10:59 AM

ಮಂಡ್ಯ: ಮಹಿಳೆ ಅತ್ಯಾಚಾರಗೈದು ಹತ್ಯೆ ಮಾಡಿದ್ದ ಇಬ್ಬರನ್ನು ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ಮನುಕುಮಾರ್, ರಮೇಶ್ ಬಂಧಿತ ಆರೋಪಿಗಳು. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಫೆಬ್ರವರಿ 01ರಂದು ಪೂರ್ಣಿಮಾ ಎಂಬ ಮಹಿಳೆಯನ್ನು ಅತ್ಯಾಚಾರವೆಸಗಿ ಬಳಿಕ ಹತ್ಯೆಗೈಯ್ಯಲಾಗಿತ್ತು. ಮಂಚಕ್ಕೆ ಮಹಿಳೆಯ ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ, ಬಳೆ, ನಗದು ದೋಚಿ ಪರಾರಿಯಾಗಿದ್ದರು.

ರಾಮನಗರದಲ್ಲಿ ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಬಗ್ಗೆ ತನಿಖೆ ಶುರು ಮಾಡಿದ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚನೆ ಮಾಡಿತ್ತು. ಸದ್ಯ ಕಾರ್ಯಾಚರಣೆ ಯಶಸ್ವಿಯಾಗಿದ್ದು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, ಕದ್ದಿದ್ದ ಚಿನ್ನಾಭರಣ, ಹಣ ಜಪ್ತಿ ಮಾಡಲಾಗಿದೆ.

‘5ನೇ ವಯಸ್ಸಿನಲ್ಲೇ ರೇಪ್​ ಆಗಿತ್ತು.. ನನ್ನನ್ನು ಹೆಣ್ಣುಮಕ್ಕಳೂ ಬಿಟ್ಟಿರಲಿಲ್ಲಮ್ಮಾ..’: ಜಯಶ್ರೀ ರಾಮಯ್ಯ ಅಂತರಾಳದ ನೋವು ರೇಖಾರಾಣಿ ಮಾತಿನಲ್ಲಿ

Published On - 10:00 am, Tue, 9 February 21