ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಸ್ಥಳದಲ್ಲಿಯೇ ಹಾರಿಹೋಯ್ತು ಇಬ್ಬರ ಪ್ರಾಣಪಕ್ಷಿ
ಬೆಂಗಳೂರು: ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದರ ಪರಿಣಾಮದಿಂದಾಗಿ ಇಬ್ಬರು ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ನಡೆದಿದೆ. ಲಾರಿ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ ಹಿನ್ನೆಲೆಯಿಂದಾಗಿ ಲಾರಿಗೆ ಹಿನ್ನೆಲೆಯಲ್ಲಿದ್ದ ಓಮ್ನಿ ಡಿಕ್ಕಿ ಹೊಡೆದಿದೆ. ಅದಾದನಂತರ ಓಮ್ನಿ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಓಮ್ನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದಾಗಿ ಬೈಕ್ನಲ್ಲಿದ್ದ ಸವಾರ ಹಾಗೂ ಓಮ್ನಿ ಕಾರಿನ ಚಾಲಕ ಸುನೀಲ್ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ವೇಗವಾಗಿ ಓಮ್ನಿ ಕಾರು […]
Follow us on
ಬೆಂಗಳೂರು: ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದರ ಪರಿಣಾಮದಿಂದಾಗಿ ಇಬ್ಬರು ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ನಡೆದಿದೆ.
ಲಾರಿ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ ಹಿನ್ನೆಲೆಯಿಂದಾಗಿ ಲಾರಿಗೆ ಹಿನ್ನೆಲೆಯಲ್ಲಿದ್ದ ಓಮ್ನಿ ಡಿಕ್ಕಿ ಹೊಡೆದಿದೆ. ಅದಾದನಂತರ ಓಮ್ನಿ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಓಮ್ನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದಾಗಿ ಬೈಕ್ನಲ್ಲಿದ್ದ ಸವಾರ ಹಾಗೂ ಓಮ್ನಿ ಕಾರಿನ ಚಾಲಕ ಸುನೀಲ್ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ವೇಗವಾಗಿ ಓಮ್ನಿ ಕಾರು ಲಾರಿಗೆ ಡಿಕ್ಕಿ ಹೊಡೆದುದರಿಂದ ಓಮ್ನಿ ಕಾರಿನಲ್ಲಿದ್ದ ಚಾಲಕನಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಾಗೂ ಕಾರಿನ ಹಿಂದೆಯೇ ಬರುತಿದ್ದ ಬೈಕ್ ಸವಾರ ಸಹ ಓಮ್ನಿ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದುದರಿಂದ ಆತನು ಸಹ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆಯ ಬಳಿಕ ಲಾರಿ ಚಾಲಕ ಸ್ಥಳದಲ್ಲೇ ಲಾರಿ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.