ಶಿವಮೊಗ್ಗ: 2 ಹಸುಗಳನ್ನು ಕದ್ದು ಪರಾರಿಯಾಗುತ್ತಿದ್ದಾಗ ಕಾರು ಪಲ್ಟಿಯಾಗಿರುವ ಘಟನೆ ಉಂಬ್ಳೆಬೈಲು ಸಮೀಪದ ಮರಾಠಾ ಕ್ಯಾಂಪ್ ಬಳಿ ನಡೆದಿದೆ. ಖದೀಮರು ಬೆಳಗಿನ ಜಾವ ಎರಡು ಹಸುಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಈ ವೇಳೆ ಭಯಕ್ಕೂ, ನಿಯಂತ್ರಣ ತಪ್ಪಿಯೂ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಪಲ್ಟಿಯಾದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ 2 ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಕಳ್ಳರು ಗೋಮಾತೆಯನ್ನು ಕದ್ದು ಭಾರಿ ಅನಾಹುತಕ್ಕೆ ಕಾರಣರಾಗಿದ್ದಾರೆ. ಇನ್ನು ಕಾರಿನಲ್ಲಿ ಮಚ್ಚು, ಲಾಂಗ್ ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ.
ಕಾರ್ ಪಲ್ಟಿಯಾದ ವೇಳೆ ಮೂವರು ಹಸು ಕಳ್ಳರು ಕಾರ್ನಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರೇ ಕಾರಿನಿಂದ ಅವರನ್ನು ಹೊರಗೆ ತೆಗೆದು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ರು. ಗ್ರಾಮಸ್ಥರ ಮಾನವೀಯತೆಯಿಂದ ಮೂವರ ಜೀವ ಉಳಿಸಿದಿದೆ. ಆದರೆ ಏನೂ ತಿಳಿಯದ ಮೂಕ ಪ್ರಾಣಿಗಳು ಜೀವ ಕಳೆದುಕೊಂಡಿವೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 9:10 am, Tue, 16 June 20