VV Puram ಸಂಚಾರಿ ಪೊಲೀಸ್ ಠಾಣೆಯ ಹಿರಿಯ ASI ಸಾವು, ಕೊರೊನಾ ಸೋಂಕಿಗೆ ಬಲಿ
ಬೆಂಗಳೂರು: ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಹಿರಿಯ ಎಎಸ್ಐ ಅನಾರೋಗ್ಯದಿಂದ ಜೂನ್ 13ರಂದು ಮೃತಪಟ್ಟಿದ್ದಾರೆ. ಅರೋಗ್ಯ ಸರಿಯಿಲ್ಲಾ ಎಂದು ಅವರು ರಜೆಯಲ್ಲಿ ಇದ್ದರು. ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ವಾರಿಯರ್ ಸಾವು ಎರಡು ದಿನದ ಹಿಂದೆ ಅರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಮರಣ ನಂತ್ರ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಕೋವಿಡ್ ಟೆಸ್ಟ್ ನಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದ್ರೆ ಇದುವರೆಗೆ ಅಧಿಕೃತ ವರದಿ ಅರೋಗ್ಯ ಇಲಾಖೆಯಿಂದ […]
ಬೆಂಗಳೂರು: ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಹಿರಿಯ ಎಎಸ್ಐ ಅನಾರೋಗ್ಯದಿಂದ ಜೂನ್ 13ರಂದು ಮೃತಪಟ್ಟಿದ್ದಾರೆ. ಅರೋಗ್ಯ ಸರಿಯಿಲ್ಲಾ ಎಂದು ಅವರು ರಜೆಯಲ್ಲಿ ಇದ್ದರು. ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾ ವಾರಿಯರ್ ಸಾವು ಎರಡು ದಿನದ ಹಿಂದೆ ಅರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಮರಣ ನಂತ್ರ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಕೋವಿಡ್ ಟೆಸ್ಟ್ ನಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದ್ರೆ ಇದುವರೆಗೆ ಅಧಿಕೃತ ವರದಿ ಅರೋಗ್ಯ ಇಲಾಖೆಯಿಂದ ಪೊಲೀಸ್ ಇಲಾಖೆಗೆ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.
ಮೃತ ASI ನಿವೃತ್ತಿಯ ಅಂಚಿನಲ್ಲಿದ್ದರು. ಎಪ್ರಿಲ್ ತಿಂಗಳ ಪೂರ್ತಿ ರಜೆ ಇದ್ದರು. ಮೇ ತಿಂಗಳಿನಲ್ಲಿ ಒಂದರಿಂದ ಹದಿನೈದರ ವರೆಗೆ ಕೆಲಸಕ್ಕೆ ಹಾಜರಾಗಿದ್ದಾರೆ. ನಂತ್ರ ಜೂನ್ ಒಂದಕ್ಕೆ ಪೊಲೀಸ್ ಠಾಣೆ ಗೆ ಹಾಜರಾಗಿದ್ದರು. ಮತ್ತೆ ಜೂನ್ ಹನ್ನೊಂದರಂದು ರಜೆ ಮೇರೆಗೆ ತೆರಳಿದ್ದರು.
ಮತ್ತೊಬ್ಬ ASI ಗೆ ಕೊರೊನಾ ದೃಢ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಮತ್ತೊಬ್ಬ ASI ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅವರನ್ನು ಖಾಸಗಿ ಠಾಣೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಆದ್ರೆ ಅರೋಗ್ಯ ಇಲಾಖೆಯಿಂದ ಇದುವರೆಗೆ ಅಧಿಕೃತ ವರದಿ ಬಂದಿಲ್ಲ.
Published On - 11:01 am, Tue, 16 June 20