ಗಡಿಯಲ್ಲಿ ಚೀನಾದ ಅಟ್ಟಹಾಸ: ಭಾರತದ ಮೂವರು ಯೋಧರು ಹುತಾತ್ಮ

ದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ನಿನ್ನೆ ರಾತ್ರಿ ನಡೆದ ಸಂಘರ್ಷದಲ್ಲಿ ದೇಶದ ಮೂವರು ಯೋಧರು ಹುತಾತ್ಮರಾಗಿರುವುದಾಗಿ ವರದಿಯಾಗಿದೆ. ಮೃತಪಟ್ಟವರನ್ನು ಓರ್ವ ಕರ್ನಲ್​ ಮತ್ತು ಇಬ್ಬರು ಸೈನಿಕರೆಂದು ಗುರುತಿಸಲಾಗಿದೆ. ಭಾರತ-ಚೀನಾ ಗಡಿಯಲ್ಲಿರುವ ಲಡಾಕ್​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಮೂವರನ್ನು ಚೀನಾದ ಸೈನಿಕರು ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಚೀನಾ ಪಾಳಯದಲ್ಲೂ ಸೈನಿಕರು ಮೃತಪಟ್ಟಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಹಾಗಾಗಿ ಸದ್ಯದ ಉದ್ವಿಗ್ನ ಪರಿಸ್ಥಿತಿಯನ್ನು ತಣ್ಣಗಾಗಿಸಲು ಉಭಯ ರಾಷ್ಟ್ರಗಳ ಹಿರಿಯ ಸೇನಾಧಿಕಾರಿಗಳ ಸಭೆ ನಡೆಯುತ್ತಿದೆ. ಸಂಘರ್ಷದಲ್ಲಿ ಗುಂಡಿನ […]

ಗಡಿಯಲ್ಲಿ ಚೀನಾದ ಅಟ್ಟಹಾಸ: ಭಾರತದ ಮೂವರು ಯೋಧರು ಹುತಾತ್ಮ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 17, 2020 | 1:46 PM

ದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ನಿನ್ನೆ ರಾತ್ರಿ ನಡೆದ ಸಂಘರ್ಷದಲ್ಲಿ ದೇಶದ ಮೂವರು ಯೋಧರು ಹುತಾತ್ಮರಾಗಿರುವುದಾಗಿ ವರದಿಯಾಗಿದೆ. ಮೃತಪಟ್ಟವರನ್ನು ಓರ್ವ ಕರ್ನಲ್​ ಮತ್ತು ಇಬ್ಬರು ಸೈನಿಕರೆಂದು ಗುರುತಿಸಲಾಗಿದೆ. ಭಾರತ-ಚೀನಾ ಗಡಿಯಲ್ಲಿರುವ ಲಡಾಕ್​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಮೂವರನ್ನು ಚೀನಾದ ಸೈನಿಕರು ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಚೀನಾ ಪಾಳಯದಲ್ಲೂ ಸೈನಿಕರು ಮೃತಪಟ್ಟಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಹಾಗಾಗಿ ಸದ್ಯದ ಉದ್ವಿಗ್ನ ಪರಿಸ್ಥಿತಿಯನ್ನು ತಣ್ಣಗಾಗಿಸಲು ಉಭಯ ರಾಷ್ಟ್ರಗಳ ಹಿರಿಯ ಸೇನಾಧಿಕಾರಿಗಳ ಸಭೆ ನಡೆಯುತ್ತಿದೆ.

ಸಂಘರ್ಷದಲ್ಲಿ ಗುಂಡಿನ ಚಕಮಕಿಯಾಗಿಲ್ಲ, ಶಸ್ತ್ರಾಸ್ತ್ರಗಳನ್ನ ಬಳಸಿಲ್ಲ ಭಾರತೀಯ ಸೇನೆ ನೀಡಿರುವ ಸ್ಪಷ್ಟನೆಯ ಪ್ರಕಾರ ಗಡಿಯಲ್ಲಿ ಕೇವಲ ಪರಸ್ಪರ ಹೊಡೆದಾಡಿಕೊಂಡಿದ್ದಾರೆಯೇ ಹೊರತು ಯಾವುದೇ ಶಸ್ತ್ರಾಸ್ತ್ರಗಳನ್ನ ಬಳಸಿಲ್ಲ ಎಂದು ಉಲ್ಲೇಖಿಸಲಾಗಿದೆ. ಎರಡೂ ದೇಶದ ಸೈನಿಕರು ಈ ಹಿಂದೆಯೂ ಹಲವು ಬಾರಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಆದರೆ ಈ ಬಾರಿ ತೀವ್ರ ಪ್ರಮಾಣದಲ್ಲಿ ನಡೆದಿದೆ ಎಂದು ಸೇನೆ ಸ್ಪಷ್ಟೀಕರಣ ನೀಡಿದೆ.

ಮಾತುಕತೆ ಸಂಘರ್ಷವಾಗಿ ಬದಲಾಗಲು ಕಾರಣವೇನು? ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ಉಂಟಾಗಿದ್ದ ವಿವಾದವನ್ನು ಬಗೆಹರಿಸಲು ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳು ನಿರಂತರ ಮಾತುಕತೆಯಲ್ಲಿ ತೊಡಗಿದ್ದರು. ಇದೇ ವೇಳೆ ಭಾರತದ ಭೂಭಾಗದಿಂದ ಸೇನೆಯನ್ನು ಹಿಂದಕ್ಕೆ ಸರಿಯಲು ಚೀನಾದ ಸೇನಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಇದಕ್ಕೆ ಅವರು ನಿರಾಕರಿಸಿದ್ದಾರೆ ಎಂದು ಹೇಳಲಾಗ್ತಿದೆ. ಹಾಗಾಗಿ ನಿನ್ನೆ ರಾತ್ರಿ ಎರಡೂ ದೇಶಗಳ 100ಕ್ಕೂ ಹೆಚ್ಚು ಸೈನಿಕರ ಮಧ್ಯೆ ಸಂಘರ್ಷ ಉಂಟಾಗಿದೆ ಎಂದು ಹೇಳಲಾಗಿದೆ.

ಚೀನಾ ಹೇಳೋದೇನು? ಭಾರತ- ಚೀನಾ ಎರಡು ಕಡೆ ಸಾವು ಸಂಭವಿಸಿದೆ. ಗುಂಡಿನ ದಾಳಿ ನಡೆದಿಲ್ಲ. ಎರಡು ಕಡೆಯ ಸೈನಿಕರು ದೈಹಿಕ ಕುಸ್ತಿ ನಡೆಸಿದ್ದಾರೆ. ಕಲ್ಲಿನಲ್ಲಿ ಹೊಡೆದಾಡಿದ್ದಾರೆ‌. ಇದರಿಂದಾಗಿ ಸಾವು ಸಂಭವಿಸಿದೆ. ಭಾರತವೇ ಚೀನೀ ಸೈನಿಕರ ಮೇಲೆ ದಾಳಿ ನಡೆಸಿದೆ‌. ಚೀನಾ ಕಡೆಯೂ ಸಾವು ಸಂಭವಿಸಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.

Published On - 1:20 pm, Tue, 16 June 20