AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿದ್ದಿಗೆ ಬಿದ್ದ ಭಾರತ-ಚೀನಾ ಸೇನೆಗಳಲ್ಲಿ ಯಾರ ಕೈ ಮೇಲು?

ದೆಹಲಿ: ಚೀನಿ ಸೈನಿಕರು ಕಾಲ್ಕೆರೆದು ಬರ್ತಿದ್ದಾರೆ. ಭಾರತೀಯ ಸೈನಿಕರು ಕೆರಳಿ ನಿಂತಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಎಂಥಾದ್ದೇ ಪರಿಸ್ಥಿತಿ ಎದುರಾದ್ರೂ ಎದೆಕೊಟ್ಟು ಹೋರಾಡೋಕೆ ಸನ್ನದ್ಧವಾಗಿ ನಿಂತಿವೆ. ಇದ್ರಿಂದಾಗೇ ಭಾರತ-ಚೀನಾ ಗಡಿಯಲ್ಲಿ ಅಕ್ಷರಶಃ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಭಾರತ-ಚೀನಾ ಗಡಿಯಲ್ಲಿ ಯುದ್ಧದ ವಾತಾವರಣ! ಯೆಸ್.. ಭಾರತ-ಚೀನಾ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಸೃಷ್ಟಿಯಾಗಿದೆ. ಆದ್ರೆ, ಈಗಿರೋ ಭಾರತ ಹಳೇಯ ಭಾರತವಲ್ಲ. ಅಂದ್ರೆ 1962 ರ ಭಾರತವಲ್ಲ. ಚೀನಾ ಸೇನೆ ಎಷ್ಟೇ ಬಲಿಷ್ಠವಾಗಿದ್ರೂ, ಅಂಕಿ ಸಂಖ್ಯೆಯಲ್ಲಿ ಎಷ್ಟೇ ಹೆಚ್ಚಾಗಿದ್ರೂ, ಎದೆಕೊಟ್ಟು […]

ಜಿದ್ದಿಗೆ ಬಿದ್ದ ಭಾರತ-ಚೀನಾ ಸೇನೆಗಳಲ್ಲಿ ಯಾರ ಕೈ ಮೇಲು?
ಆಯೇಷಾ ಬಾನು
|

Updated on:Jun 17, 2020 | 2:36 PM

Share

ದೆಹಲಿ: ಚೀನಿ ಸೈನಿಕರು ಕಾಲ್ಕೆರೆದು ಬರ್ತಿದ್ದಾರೆ. ಭಾರತೀಯ ಸೈನಿಕರು ಕೆರಳಿ ನಿಂತಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಎಂಥಾದ್ದೇ ಪರಿಸ್ಥಿತಿ ಎದುರಾದ್ರೂ ಎದೆಕೊಟ್ಟು ಹೋರಾಡೋಕೆ ಸನ್ನದ್ಧವಾಗಿ ನಿಂತಿವೆ. ಇದ್ರಿಂದಾಗೇ ಭಾರತ-ಚೀನಾ ಗಡಿಯಲ್ಲಿ ಅಕ್ಷರಶಃ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

ಭಾರತ-ಚೀನಾ ಗಡಿಯಲ್ಲಿ ಯುದ್ಧದ ವಾತಾವರಣ! ಯೆಸ್.. ಭಾರತ-ಚೀನಾ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಸೃಷ್ಟಿಯಾಗಿದೆ. ಆದ್ರೆ, ಈಗಿರೋ ಭಾರತ ಹಳೇಯ ಭಾರತವಲ್ಲ. ಅಂದ್ರೆ 1962 ರ ಭಾರತವಲ್ಲ. ಚೀನಾ ಸೇನೆ ಎಷ್ಟೇ ಬಲಿಷ್ಠವಾಗಿದ್ರೂ, ಅಂಕಿ ಸಂಖ್ಯೆಯಲ್ಲಿ ಎಷ್ಟೇ ಹೆಚ್ಚಾಗಿದ್ರೂ, ಎದೆಕೊಟ್ಟು ಹೋರಾಡುವ ತಾಕತ್ತು ಭಾರತೀಯ ಸೇನೆಗಿದೆ.

ಹಾಗಾದ್ರೆ, ಬಲಾಢ್ಯ ಚೀನಾದ ತಾಕತ್ತೇನು? ಭಾರತೀಯ ಸೇನೆಯ ಸಾಮರ್ಥ್ಯ ಎಂಥಾದ್ದು? ಚೀನಾದ ಬಳಿ ಎಷ್ಟು ಯುದ್ಧ ಟ್ಯಾಂಕ್​ಗಳಿವೆ? ಭಾರತದ ಬಳಿ ಯಾವೆಲ್ಲಾ ಅಸ್ತ್ರಗಳಿವೆ? ಎರಡೂ ದೇಶದ ಸೇನೆಗಳ ಬಲಾಬಲ ಏನು?

ಭಾರತ-ಚೀನಾ ಸೇನಾಬಲ ಭಾರತೀಯ ರಕ್ಷಣಾ ಬಜೆಟ್ 55.2 ಬಿಲಿಯನ್ ಡಾಲರ್ ಇದ್ರೆ, ಚೀನಾ ರಕ್ಷಣಾ ಬಜೆಟ್ 224 ಬಿಲಿಯನ್ ಡಾಲರ್​ನಷ್ಟಿದೆ. ಭಾರತೀಯ ಸೇನೆಯಲ್ಲಿ 34 ಲಕ್ಷದ 62 ಸಾವಿರದ 50 ಸೈನಿಕರಿದ್ರೆ, ಚೀನಾ ಸೇನೆಗೆ 26 ಲಕ್ಷದ 93 ಸಾವಿರ ಸೈನಿಕರ ಬಲ ಇದೆ.

ಇಂಡಿಯನ್ ಆರ್ಮಿಯಲ್ಲಿ 2082ವಿಮಾನಗಳಿದ್ರೆ, ಚೀನಾ ಬಳಿ 3,187 ವಿಮಾನಗಳ ಶಕ್ತಿ ಇದೆ.. ಭಾರತದ ಬತ್ತಳಿಕೆಯಲ್ಲಿ 692 ಹೆಲಿಕಾಪ್ಟರ್​ಗಳಿದ್ರೆ, ಚೀನಾ ಬಳಿ 1,004 ಹೆಲಿಕಾಪ್ಟರ್​ಗಳ ಬಲ ಇದೆ. ಅಲ್ದೆ, ಭಾರತದಲ್ಲಿ 520 ಫೈಟರ್‌ ಜೆಟ್​ಗಳಿದ್ರೆ ಚೀನಾದ ಬಳಿ 1,222 ಇಂಟರ್‌ಸೆಪ್ಟರ್​ಗಳಿವೆ. ಭಾರತಕ್ಕೆ 694 ಯುದ್ಧವಿಮಾನಗಳ ಆನೆ ಬಲ ಇದ್ರೆ, ಚೀನಾ ಬಳಿ 1564 ಯುದ್ಧ ವಿಮಾನಗಳ ಶಕ್ತಿ ಇದೆ. ಭಾರತದಲ್ಲಿ 17 ಯುದ್ಧಹೆಲಿಕಾಪ್ಟರ್​ಗಳಿದ್ರೆ, ಚೀನಾದಲ್ಲಿ 281 ಯುದ್ಧ ಹೆಲಿಕಾಪ್ಟರ್​ಗಳಿವೆ.

ಭಾರತದ ಬತ್ತಳಿಕೆಯಲ್ಲಿ 4,184 ಯುದ್ಧಟ್ಯಾಂಕರ್​ಗಳಿದ್ರೆ, ಚೀನಾಗೆ ಬಳಿ 13,050 ಯುದ್ಧಟ್ಯಾಂಕರ್​ಗಳ ಬಲ ಇದೆ. ಇಂಡಿಯಾದಲ್ಲಿ 2,815 ಶಸ್ತ್ರಸಜ್ಜಿತ ವಾಹನಗಳಿದ್ರೆ, ಚೀನಾದಲ್ಲಿ 40 ಸಾವಿರ ಶಸ್ತ್ರಸಜ್ಜಿತ ವಾಹನಗಳಿವೆ. ಭಾರತೀಯ ನೌಕಾಪಡೆಯಲ್ಲಿ ಡೆಸ್ಟ್ರಾಯರ್, ಫ್ರಿಗೇಟ್ಸ್ ಸೇರಿ 295 ಬ್ರಹ್ಮಾಸ್ತ್ರಗಳಿದ್ರೆ, ಚೀನಾ ಬಳಿ 714 ಅಸ್ತ್ರಗಳಿವೆ. ಇದಿಷ್ಟೇ ಅಲ್ದೆ, ಭಾರತಕ್ಕೆ 16 ಸಬ್‌ಮರೀನ್‌ಗಳ ಆನೆ ಬಲ ಇದ್ರೆ, ಚೀನಾಗೆ 76 ಸಬ್​ಮರೀನ್​ಗಳ ಶಕ್ತಿ ಇದೆ.

ಮೇಲ್ನೋಟಕ್ಕೆ ಚೀನಾ ಎಲ್ಲ ವಿಭಾಗದಲ್ಲೂ ಭಾರತಕ್ಕಿಂತ ಬಲಿಷ್ಠ ಆಗಿರಬಹುದು. ಭಾರತಕ್ಕಿಂತ ಹೆಚ್ಚು ಶಕ್ತಿಶಾಲಿ ಇರಬಹುದು. ಆದ್ರೆ, 1962ರ ಸಂದರ್ಭದಲ್ಲಿದ್ದ ಭಾರತ ಈಗಿಲ್ಲ. ಸೇನಾ ಬಲ ಕಡಿಮೆ ಇದ್ರೂ ಕೆಣಕಿದವರನ್ನು ಸುಮ್ಮನೆ ಬಿಡಲ್ಲ. ಮುಟ್ಟಿ ನೋಡಿಕೊಳ್ಳುವಂತೆ ಹೊಡೆತ ಕೊಡುವ ತಾಕತ್ತು, ಶಕ್ತಿ ಭಾರತೀಯ ಸೇನೆಗಿದೆ. ಸೈನಿಕರ ಈ ಪವರ್​ನಿಂದಲೇ ಭಾರತ ಜಗತ್ತಿನ ಗಮನ ಸೆಳೆದಿದ್ದಂತೂ ಸತ್ಯ.

Published On - 6:52 am, Wed, 17 June 20