45 ವರ್ಷಗಳಲ್ಲಿ ನಡೀದೇ ಇದ್ದಂಥ ಸಂಘರ್ಷ ಈಗ ಯಾಕೆ? ಚೀನಾ ಕ್ಯಾತೆ ತೆಗೆಯಲು ಅಸಲಿ ಸತ್ಯ..

ದೆಹಲಿ: ಅಸಲಿಗೆ ಚೀನಾ ಕ್ಯಾತೆ ತೆಗೆಯುತ್ತಿರೋದೇಕೆ. 45 ವರ್ಷಗಳಲ್ಲಿ ನಡೀದೇ ಇದ್ದಂಥ ಸಂಘರ್ಷ ನಡೆದಿದ್ದೇಕೆ. ಅದ್ಯಾವ ಕಾರಣಕ್ಕೆ ಈ ಡ್ರ್ಯಾಗನ್ ದೇಶ ಹೀಗೆ ಭಾರತದ ವಿರುದ್ಧ ಹಲ್ಲು ಮಸೆಯುತ್ತಿದೆ. ಲಡಾಖ್​ನ ಸುಂದರ ಕಣಿವೆಗಳ ಮಧ್ಯೆ ಇರೋ ಕರಾಳ ಕೆಂಡದ ಸ್ಟೋರಿ ಏನು? ಇಲ್ಲಿ ಓದಿ.. ಜಮ್ಮು-ಕಾಶ್ಮೀರ ಅಂದ್ರೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಯ್ ಚಿನ್ ಎರಡೂ ಜಮ್ಮು ಕಾಶ್ಮೀರದ ಭಾಗವೇ. ಜಮ್ಮು ಕಾಶ್ಮೀರ ಗಡಿಯಲ್ಲಿ ಪಾಕ್​ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಯ್ ಚಿನ್ ಸಹ ಸೇರುತ್ತೆ. […]

45 ವರ್ಷಗಳಲ್ಲಿ ನಡೀದೇ ಇದ್ದಂಥ ಸಂಘರ್ಷ ಈಗ ಯಾಕೆ? ಚೀನಾ ಕ್ಯಾತೆ ತೆಗೆಯಲು ಅಸಲಿ ಸತ್ಯ..
Follow us
ಆಯೇಷಾ ಬಾನು
|

Updated on:Jun 17, 2020 | 2:39 PM

ದೆಹಲಿ: ಅಸಲಿಗೆ ಚೀನಾ ಕ್ಯಾತೆ ತೆಗೆಯುತ್ತಿರೋದೇಕೆ. 45 ವರ್ಷಗಳಲ್ಲಿ ನಡೀದೇ ಇದ್ದಂಥ ಸಂಘರ್ಷ ನಡೆದಿದ್ದೇಕೆ. ಅದ್ಯಾವ ಕಾರಣಕ್ಕೆ ಈ ಡ್ರ್ಯಾಗನ್ ದೇಶ ಹೀಗೆ ಭಾರತದ ವಿರುದ್ಧ ಹಲ್ಲು ಮಸೆಯುತ್ತಿದೆ. ಲಡಾಖ್​ನ ಸುಂದರ ಕಣಿವೆಗಳ ಮಧ್ಯೆ ಇರೋ ಕರಾಳ ಕೆಂಡದ ಸ್ಟೋರಿ ಏನು? ಇಲ್ಲಿ ಓದಿ..

ಜಮ್ಮು-ಕಾಶ್ಮೀರ ಅಂದ್ರೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಯ್ ಚಿನ್ ಎರಡೂ ಜಮ್ಮು ಕಾಶ್ಮೀರದ ಭಾಗವೇ. ಜಮ್ಮು ಕಾಶ್ಮೀರ ಗಡಿಯಲ್ಲಿ ಪಾಕ್​ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಯ್ ಚಿನ್ ಸಹ ಸೇರುತ್ತೆ. ಅದಕ್ಕಾಗಿ ನಮ್ಮ ಪ್ರಾಣವನ್ನೇ ಕೊಡ್ತೇವೆ. ಯಾವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಮಾತನ್ನ ಹೇಳಿದ್ರೋ, ಅಂದೇ, ಆವತ್ತೇ ಚೀನಾಗೆ ಉರಿ ಹತ್ಕೊಂಡಿತ್ತು. ಅದೇ ಉರಿ ಇಂದು ಗಡಿಯಲ್ಲಿ ನಡೀತಿರೋ ಸಂಘರ್ಷಕ್ಕೆ ಕಾರಣ. ಹಾಗಾದ್ರೆ, 45 ವರ್ಷಗಳ ಬಳಿಕ ಚೀನಾ ಸೈನಿಕರು ನಮ್ಮ ಯೋಧರ ಜೊತೆ ಕಾದಾಟಕ್ಕಿಳಿಯುವ ಭಂಡ ಧೈರ್ಯ ಮಾಡಿದ್ದೇಕೆ. ಭಾರತ-ಚೀನಾ ನಡುವೆ ಗಡಿ ಉದ್ವಿಗ್ನತೆ ಶುರುವಾಗಿದ್ದು ಎಲ್ಲಿ. ಲಡಾಖ್​ನ ಸುಂದರ ಕಣಿವೆಗಳ ಮಧ್ಯೆ ಇರೋ ಕರಾಳ ಕೆಂಡದ ಸ್ಟೋರಿ ಇಲ್ಲಿದೆ ಓದಿ.

ಚೀನಾ ಕ್ಯಾತೆ ತೆಗೆಯಲು ಕಾರಣವೇನು? ಅಂದಹಾಗೆ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ದಶಕಗಳಷ್ಟು ಹಳೆಯದು. ಲಡಾಖ್‌ನ ಉತ್ತರ ಭಾಗದಲ್ಲಿ ಗಾಲ್ವಾನ್​ ಅನ್ನೋ ಹೆಸರಿನ ನದಿ ಹರಿಯುತ್ತೆ. 1962ರಲ್ಲಿ ಇದೇ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಪೋಸ್ಟ್‌ಗಳನ್ನು ನಿರ್ಮಾಣ ಮಾಡಿತ್ತು. ಈ ಪೋಸ್ಟ್‌ಗಳನ್ನು ಚೀನಾದ ಸೈನಿಕರು ಸುತ್ತುವರಿದಿದ್ದರು. ಇದು 1962ರಲ್ಲಿ ಭಾರತ-ಚೀನಾ ಯುದ್ಧಕ್ಕೆ ನಾಂದಿ ಹಾಡಿತ್ತು.

ಈಗ ಇದೇ ಗಾಲ್ವಾನ್ ಕಣಿವೆಯಲ್ಲಿ ಚೀನಿ ಸೇನೆ ಟೆಂಟ್‌ಗಳನ್ನ ನಿರ್ಮಿಸಿದೆ. ಇದು ಭಾರತದ ಆಕ್ಷೇಪಕ್ಕೆ ಕಾರಣವಾಗಿದೆ. ಇದ್ರ ಜೊತೆ ಭಾರತ ಲೇಹ್‌ ಬಳಿ ಇರುವ ದರ್ಬುಕ್‌ ನಿಂದ ದೌಲತ್‌ ಬೇಗ್‌ ಓಲ್ಡಿವರೆಗೂ ರಸ್ತೆ ನಿರ್ಮಾಣ ಮಾಡ್ತಿದೆ. ದೌಲತ್ ಬೇಗ್‌ ಓಲ್ಡಿ ಅತಿ ಎತ್ತರದ ಸ್ಥಳವಾಗಿದ್ದು ಇದನ್ನು ತಲುಪಲು ರಸ್ತೆ ನಿರ್ಮಾಣ ಮಾಡ್ತಿರುವುದು ಚೀನಾದ ಆಕ್ಷೇಪಕ್ಕೆ ಕಾರಣವಾಗಿದೆ.

ಅಲ್ದೆ ಕಳೆದ ವರ್ಷ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ್ದಕ್ಕೂ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಇದು ಭಾರತದ ಮೇಲೆ ಚೀನಾ ಉರಿದು ಬೀಳುವಂತೆ ಮಾಡಿದೆ. ಹೀಗಾಗೇ, ಚೀನಾ ಕಳೆದ ಮೇ 5 ರಿಂದ ಒಂದಲ್ಲ ಒಂದು ರೀತಿ ಕ್ಯಾತೆ ತೆಗೆಯುತ್ತಿದೆ. ಭಾರತೀಯ ಸೇನೆ ಕೂಡಾ ಇದಕ್ಕೆ ತಿರುಗೇಟು ನೀಡುತ್ತಲೇ ಬರುತ್ತಿದೆ.

ಮೇ 10, ಮೇ 21 ರಂದು ಗಾಲ್ವನ್ ಕಣಿವೆಯಲ್ಲಿ ಸೈನಿಕರ ಘರ್ಷಣೆ ಅಂದಹಾಗೆ ಭಾರತ-ಚೀನಾದ ನಡುವೆ ಕಳೆದ 5 ವಾರದಿಂದ ಸಂಘರ್ಷದ ವಾತಾವರಣ ಇದೆ. ಮೇ, 5 ರಂದು ಮೊದಲಿಗೆ ಚೀನಾದ ಸೈನಿಕರು ಸಿಕ್ಕಿಂನ ನಾಥು ಲಾ ಬಳಿ ಭಾರತೀಯ ಸೈನಿಕರ ಜೊತೆಗೆ ಘರ್ಷಣೆಗೆ ಇಳಿದಿದ್ದರು. ಆಗ ಭಾರತೀಯ ಸೇನೆ ಸಿಕ್ಕಿಂನತ್ತ ಹೆಚ್ಚಿನ ಸೈನಿಕರನ್ನು ಕಳಿಸಿ ಹೆಚ್ಚಿನ ಗಮನ ನೀಡಿತ್ತು.

ಬಳಿಕ ಇದ್ದಕ್ಕಿದ್ದಂತೆ ಚೀನಾ ಲಡಾಖ್‌ನ ಗಾಲ್ವಾನ್ ಕಣಿವೆ, ಪಾತ್ಸಾಂಗೋ ತೋ ಲೇಕ್‌ ಹಾಗೂ ಪೆಟ್ರೋಲಿಂಗ್ ಪಾಯಿಂಟ್ 14, 15, 16ರ ಬಳಿ ಹೆಚ್ಚಿನ ಸೈನಿಕರನ್ನು ಅಂದ್ರೆ ಆರು ಸಾವಿರ ಸೈನಿಕರನ್ನ ಜಮಾವಣೆ ಮಾಡಿತ್ತು. ಭಾರತದ ಭೂಭಾಗ ಅತಿಕ್ರಮಿಸಲು ಪ್ರಾರಂಭಿಸಿತು. ತಕ್ಷಣವೇ ಎಚ್ಚೆತ್ತ ಭಾರತೀಯ ಸೇನೆಯೂ ಪ್ರತಿಯಾಗಿ 6 ಸಾವಿರ ಸೈನಿಕರನ್ನ ಜಮಾವಣೆ ಮಾಡಿದೆ. ಇದರಿಂದಾಗಿ ಆಗ್ಗಾಗ್ಗೆ ಎರಡೂ ದೇಶಗಳ ಸೈನಿಕರು ಪರಸ್ಪರ ತಳ್ಳಾಟ, ನೂಕಾಟ ನಡೆಸುತ್ತಲೇ ಇದ್ದಾರೆ. ಮೇ 10, ಮೇ 21 ರಂದು ಗಾಲ್ವನ್ ಕಣಿವೆಯಲ್ಲಿ ಘರ್ಷಣೆ ನಡೆದಿತ್ತು.

ಇಂದು ಇದೇ ಘರ್ಷಣೆಯಲ್ಲಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ರೆ, ಭಾರತೀಯ ಸೈನಿಕರು ಐವರು ಚೀನಿ ಸೈನಿಕರನ್ನ ಹೊಡೆದುರುಳಿಸಿದ್ದಾರೆ. ಘಟನೆ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಡಿಎಸ್ ಬಿಪಿನ್ ರಾವತ್, ಮೂರು ಸೇನೆಗಳ ಮುಖ್ಯಸ್ಥರು, ವಿದೇಶಾಂಗ ಸಚಿವ ಜೈಶಂಕರ್ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಪ್ರಧಾನಿ ಮೋದಿಗೆ ರಾಜನಾಥ್ ಸಿಂಗ್ ಗಡಿಯ ಪರಿಸ್ಥಿತಿ ಬಗ್ಗೆ ಖುದ್ದು ಭೇಟಿಯಾಗಿ ವಿವರಣೆ ನೀಡಿದ್ದಾರೆ.

ಅದೇನೆ ಆಗಲಿ, ಚೀನಾ ಬಲಿಷ್ಠ ರಾಷ್ಟ್ರವಾಗಿರಬಹುದು. ಸೇನಾ ಶಕ್ತಿಯಲ್ಲಿ ಮೊದಲ ಸ್ಥಾನದಲ್ಲಿರಬಹುದು. ಆದ್ರೆ, ಈ ರೀತಿ ಕಾಲ್ಕೆರೆದು ಜಗಳಕ್ಕೆ ನಿಲ್ಲೋದನ್ನ ಯಾರೂ ಒಪ್ಪಲ್ಲ. ಅದ್ರಲ್ಲೂ, ಭಾರತದಂಥ ನೆರೆ ರಾಷ್ಟ್ರದ ವಿರುದ್ಧ ಕಿರಿಕ್ ಮಾಡೋದು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತೆ.

Published On - 7:47 am, Wed, 17 June 20

ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ