ಮೈಸೂರು: ಬೊಲೆರೊ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಯಲಚಗೆರೆ ಬೋರೆ ಗ್ರಾಮದ ಬಳಿ ನಡೆದಿದೆ. ಪುಟ್ಟಸ್ವಾಮಿ(23), ನಾಗರಾಜ್(37) ಮೃತ ದುರ್ದೈವಿಗಳು. ಕೂಡ್ಲಾಪುರ ನಿವಾಸಿ ಪುಟ್ಟಸ್ವಾಮಿ ಮತ್ತು ನಾಗರಾಜ್ ಇಂದು ಬೆಳಗ್ಗೆ ಕೆಲಸಕ್ಕೆ ಎಂದು ಹೊರಟಿದ್ದರು. ಈ ವೇಳೆ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on
ಮೈಸೂರು: ಬೊಲೆರೊ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಯಲಚಗೆರೆ ಬೋರೆ ಗ್ರಾಮದ ಬಳಿ ನಡೆದಿದೆ. ಪುಟ್ಟಸ್ವಾಮಿ(23), ನಾಗರಾಜ್(37) ಮೃತ ದುರ್ದೈವಿಗಳು.
ಕೂಡ್ಲಾಪುರ ನಿವಾಸಿ ಪುಟ್ಟಸ್ವಾಮಿ ಮತ್ತು ನಾಗರಾಜ್ ಇಂದು ಬೆಳಗ್ಗೆ ಕೆಲಸಕ್ಕೆ ಎಂದು ಹೊರಟಿದ್ದರು. ಈ ವೇಳೆ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.