ಚಾಲಕನ ನಿಯಂತ್ರಣ ತಪ್ಪಿ ಟಂ ಟಂ ಪಲ್ಟಿ: ಇಬ್ಬರು ಅಜ್ಜಿಯರ ದುರ್ಮರಣ

ಕೊಣ್ಣೂರಿನಿಂದ ಜಾಲವಾದ ಗ್ರಾಮಕ್ಕೆ ತೆರಳುವ ಹೊತ್ತಿಗೆ ಅವಘಡ ಸಂಭವಿಸಿದ್ದು,ಇಬ್ಬರು ವೃದ್ದೆಯರು ಸಾವಿಗೀಡಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಟಂ ಟಂ ಪಲ್ಟಿ:  ಇಬ್ಬರು ಅಜ್ಜಿಯರ ದುರ್ಮರಣ
ಕೊಣ್ಣೂರಿನಿಂದ ಜಾಲವಾದ ಗ್ರಾಮಕ್ಕೆ ತೆರಳುವಾಗ ಟಂಟಂ ವಾಹನ ಪಲ್ಟಿ
Updated By: ಸಾಧು ಶ್ರೀನಾಥ್​

Updated on: Dec 31, 2020 | 3:34 PM

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನ ಪಲ್ಟಿಯಾದ ಪರಿಣಾಮ ಇಬ್ಬರ ವೃದ್ಧೆಯರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಬಳಿ ನಡೆದಿದೆ.

ಕೊಣ್ಣೂರಿನಿಂದ ಜಾಲವಾದ ಗ್ರಾಮಕ್ಕೆ ತೆರಳುವಾಗ ಅವಘಡ ಸಂಭವಿಸಿದ್ದು, ತಿಪ್ಪವ್ವ ಕಮತಗಿ (60) ಹಾಗೂ ಗುರಬಾಯಿ ಗಣಿ (65) ಎಂಬ ಇಬ್ಬರು ವೃದ್ದೆಯರು ಸಾವಿಗೀಡಾಗಿದ್ದಾರೆ. ಟಂ ಟಂ ವಾಹನಲ್ಲಿದ್ದ 6 ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವನಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಳಿ ದೇವಿಯ ಬಗ್ಗೆ ಅವಹೇಳನಕಾರಿ ಪೋಸ್ಟ್: ಪ್ರಸಿದ್ದ ಜಾಲತಾಣ ಟ್ವೀಟರ್ ಸಂಸ್ಥೆ ಮೇಲೆ FIR ದಾಖಲು