ಬಸ್ ಡಿಕ್ಕಿ, ಬೈಕ್‌ನಲ್ಲಿದ್ದ ಇಬ್ಬರು ಸವಾರರು ದುರ್ಮರಣ

ಮೈಸೂರು: ಬಸ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಹುಣಸೂರು ಹೊರವಲಯದ ಯಶೋಧರಪುರ ಗೇಟ್ ಬಳಿ ಸಂಭವಿಸಿದೆ. ಯಶೋಧರಪುರ ಗ್ರಾಮದ ಶಿವರಾಜ್(32), ಕಾರ್ತಿಕ್(20 ) ಮೃತ ದುರ್ದೈವಿಗಳು. ಬಸ್ ಡಿಕ್ಕಿಯಾದ ಪರಿಣಾಮ ಶಿವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ತಿಕ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಸ್ ಡಿಕ್ಕಿ, ಬೈಕ್‌ನಲ್ಲಿದ್ದ ಇಬ್ಬರು ಸವಾರರು ದುರ್ಮರಣ

Updated on: Sep 13, 2020 | 9:02 AM

ಮೈಸೂರು: ಬಸ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಹುಣಸೂರು ಹೊರವಲಯದ ಯಶೋಧರಪುರ ಗೇಟ್ ಬಳಿ ಸಂಭವಿಸಿದೆ. ಯಶೋಧರಪುರ ಗ್ರಾಮದ ಶಿವರಾಜ್(32), ಕಾರ್ತಿಕ್(20 ) ಮೃತ ದುರ್ದೈವಿಗಳು.

ಬಸ್ ಡಿಕ್ಕಿಯಾದ ಪರಿಣಾಮ ಶಿವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ತಿಕ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.