IPL 2020: ಪ್ರಾಕ್ಟೀಸ್​ ವೇಳೆ ವಿರಾಟ್ ಹೊಡೆದ ‘ನಟರಾಜ ಶಾಟ್’​ ಹೇಗಿದೆ ಗೊತ್ತಾ? ವಿಡಿಯೋ ನೋಡಿ

IPL 2020: ಪ್ರಾಕ್ಟೀಸ್​ ವೇಳೆ ವಿರಾಟ್ ಹೊಡೆದ ‘ನಟರಾಜ ಶಾಟ್’​ ಹೇಗಿದೆ ಗೊತ್ತಾ? ವಿಡಿಯೋ ನೋಡಿ

ಮರಳುಗಾಡಿನ IPL ಮಹಾ ಸಂಗ್ರಾಮಕ್ಕಾಗಿ RCB ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸುತ್ತಿದ್ದು, ನಟರಾಜನ ನಾಟ್ಯವೈಭವದಂತೆ ವಿರಾಟ್, ಇರೋ ಬರೋ ಶಾಟ್​ಗಳನ್ನೆಲ್ಲಾ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

IPL​ಗಾಗಿ ವಿರಾಟ್ ನೆಟ್ಸ್​​ನಲ್ಲಿ ಭರ್ಜರಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲ. ಐದು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಪಾಲ್ಗೊಂಡಿರೋ ವಿರಾಟ್, ಆರಂಭದಲ್ಲಿ ಬ್ಯಾಟಿಂಗ್ ಮಾಡೋವಾಗ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ.

ಆರಂಭದ ಕೆಲ ದಿನಗಳಲ್ಲಿ ನೀವು ನಿಮ್ಮ ಕಣ್ಣಿನಿಂದ ವಸ್ತುಗಳನ್ನ ನಿಖರವಾಗಿ ಗುರುತಿಸಿಕೊಳ್ಳಲೇಬೇಕು. ಐದು ತಿಂಗಳ ನಂತರ ಬಂದಿರೋದ್ರಿಂದ ಆಗುತ್ತಿರುವ ಅನುಭವ ಸ್ವಲ್ಪ ವಿಭಿನ್ನವಾಗಿದೆ. ಸ್ಫರ್ಧೆಯಲ್ಲಿ ನೀವು ಮೊದಲಿನಂತೆ ಸಾಮಾನ್ಯವಾಗಿರೋದಕ್ಕೆ ಬಯಸುತ್ತೀರಿ. ಆದ್ರೆ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ವಿರಾಟ್​ ಹೇಳಿದರು.

ಐದು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಆಡ್ತೀರೊ ವಿರಾಟ್, ಆರಂಭದಲ್ಲಿ ಸ್ವಲ್ಪ ತಡವರಿಸಿದ್ದಾರೆ. ಆರಂಭದಲ್ಲೇ, ದೊಡ್ಡ ದೊಡ್ಡ ಶಾಟ್​ಗಳನ್ನ ಹೊಡೆಯದೇ ಬ್ಯಾಕ್ ಫುಟ್ ಡಿಫೆನ್ಸ್, ಫಾರ್ವರ್ಡ್ ಡಿಫೆನ್ಸ್ ಶಾಟ್​ಗಳನ್ನ ಅಭ್ಯಾಸ ಮಾಡುತ್ತಿದ್ದಾರೆ.

ವಿರಾಟ್​ರ ನಟರಾಜ ಶಾಟ್ ತುಂಬಾನೇ ಅದ್ಭುತ
ಆರಂಭದಲ್ಲಿ ಕ್ರೀಸ್​ಗೆ ಸೆಟಲ್ ಆಗೋದಕ್ಕಾಗಿ ವಿರಾಟ್, ಕೂಲ್ ಆಗಿ ಬ್ಯಾಟ್ ಬೀಸಿದ್ದಾರೆ. ಆದ್ರೆ ಸ್ವಲ್ಪ ಸಮಯದ ಬಳಿಕ ಕೊಹ್ಲಿ ತಮ್ಮ ವಿರಾಟ ರೂಪ ತೋರಿಸಿದ್ರು. ಅದ್ರಲ್ಲೂ ವಿರಾಟ್ ಹೊಡೆದ ನಟರಾಜಾ ಶಾಟ್ ತುಂಬಾನೇ ಅದ್ಭುತವಾಗಿತ್ತು. ಧಮಾಕೆದಾರ್ ಶಾಟ್​ಗಳನ್ನ ಹೊಡೆದ ವಿರಾಟ್ ಮೊಗದಲ್ಲಿ ಮಂದಹಾಸ ಮೂಡಿತ್ತು. ಇದು ಫಾರ್ಮ್​ಗೆ ಬಂದೆ ಅನ್ನೋ ಖುಷಿಯಲ್ಲ. ಮರಳುಗಾಡಿನ ಪಿಚ್​ಗಳು ಹೇಗಿದೆ. ಅದರ ಮೇಲೆ ಹೇಗೆ ಬ್ಯಾಟಿಂಗ್ ಮಾಡ್ಬೇಕು. ಬ್ಯಾಟಿಂಗ್ ಮಾಡೋವಾಗ, ಯಾವ ಌಂಗಲ್​ನಲ್ಲಿ ಬಾಲ್​ ಪ್ಲೇಸ್​ಮೆಂಟ್ ಮಾಡ್ಬೇಕು ಅನ್ನೊದು ಕೊಹ್ಲಿಗೆ ಗೊತ್ತಾಗಿದೆ.

RCB ತಂಡದ ಆಟಗಾರರೆಲ್ಲಾ ಸದ್ಯ ದುಬೈನ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಪ್ರಾಕ್ಟೀಸ್ ಸೆಷನ್​ನಲ್ಲಿ ಪ್ರತಿಯೊಬ್ಬ ಆಟಗಾರನು, ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾನೆ. ಇದು ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಖುಷಿ ಹೆಚ್ಚಾಗುವಂತೆ ಮಾಡಿದೆ.

Click on your DTH Provider to Add TV9 Kannada