IPL 2020: CSKನ ಮೊದಲ ಆಯ್ಕೆ MS ಧೋನಿ ಆಗಿರಲಿಲ್ಲವಂತೆ, ಯಾಕೆ?

ಚೆನ್ನೈ ಸೂಪರ್ ಕಿಂಗ್ಸ್ IPL​ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗಿಂತ ಭಿನ್ನವಾದ ತಂಡ ಎಂಬುದು ಈಗಾಗಲೇ ಗೋಚರವಾಗಿದೆ. ಈ ತಂಡದ ಜನಪ್ರಿಯತೆ ಮತ್ತು ಯಶಸ್ಸಿಗೆ ಮಹೇಂದ್ರ ಸಿಂಗ್​ ಧೋನಿ ಅದರ ನಾಯಕರಾಗಿರುವುದೇ ಮುಖ್ಯ ಕಾರಣವಾಗಿದೆ. IPL ಮೊದಲ ಆವೃತಿಯಿಂದ ಧೋನಿ ತಂಡದ ಭಾಗವಾಗಿದ್ದಾರೆ. ಆದರೆ ಧೋನಿ ತಂಡದ ಮೊದಲ ಆಯ್ಕೆಯಾಗಿರಲಿಲ್ಲ ಎಂಬ ರೋಚಕ ಮಾಹಿತಿ ಈಗ ಹೊರಬಿದ್ದಿದೆ. ಚೆನ್ನೈ ಫ್ರ್ಯಾಂಚೈಸ್‌ನ ಆಡಳಿತ ಮಂಡಳಿಯು ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್​ರನ್ನು ಧೋನಿಯ ಬದಲು ನಾಯಕನನ್ನಾಗಿ ಮಾಡಲು ಬಯಸಿತು […]

IPL 2020: CSKನ ಮೊದಲ ಆಯ್ಕೆ MS ಧೋನಿ ಆಗಿರಲಿಲ್ಲವಂತೆ, ಯಾಕೆ?
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Sep 13, 2020 | 12:45 PM

ಚೆನ್ನೈ ಸೂಪರ್ ಕಿಂಗ್ಸ್ IPL​ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗಿಂತ ಭಿನ್ನವಾದ ತಂಡ ಎಂಬುದು ಈಗಾಗಲೇ ಗೋಚರವಾಗಿದೆ. ಈ ತಂಡದ ಜನಪ್ರಿಯತೆ ಮತ್ತು ಯಶಸ್ಸಿಗೆ ಮಹೇಂದ್ರ ಸಿಂಗ್​ ಧೋನಿ ಅದರ ನಾಯಕರಾಗಿರುವುದೇ ಮುಖ್ಯ ಕಾರಣವಾಗಿದೆ.

IPL ಮೊದಲ ಆವೃತಿಯಿಂದ ಧೋನಿ ತಂಡದ ಭಾಗವಾಗಿದ್ದಾರೆ. ಆದರೆ ಧೋನಿ ತಂಡದ ಮೊದಲ ಆಯ್ಕೆಯಾಗಿರಲಿಲ್ಲ ಎಂಬ ರೋಚಕ ಮಾಹಿತಿ ಈಗ ಹೊರಬಿದ್ದಿದೆ. ಚೆನ್ನೈ ಫ್ರ್ಯಾಂಚೈಸ್‌ನ ಆಡಳಿತ ಮಂಡಳಿಯು ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್​ರನ್ನು ಧೋನಿಯ ಬದಲು ನಾಯಕನನ್ನಾಗಿ ಮಾಡಲು ಬಯಸಿತು ಎಂಬ ವಿಚಾರವನ್ನು ಚೆನ್ನೈನ ಮಾಜಿ ಬ್ಯಾಟ್ಸ್‌ಮನ್ ಸುಬ್ರಮಣಿಯಂ ಬದ್ರಿನಾಥ್ ಬಹಿರಂಗಪಡಿಸಿದ್ದಾರೆ.

IPL ಪಂದ್ಯಾವಳಿಯ ಮೊದಲ ಹರಾಜಿನಲ್ಲಿ CSK ಫ್ರ್ಯಾಂಚೈಸ್‌ ಧೋನಿಯನ್ನು ಖರೀದಿಸಿತು. ಚೆನ್ನೈ ಹೊರತುಪಡಿಸಿ, ಎಲ್ಲಾ 7 ತಂಡಗಳು ಐಕಾನ್ ಆಟಗಾರರನ್ನು ತಮ್ಮ ನಾಯಕರನ್ನಾಗಿ ಮಾಡಿಕೊಂಡಿದ್ದವು. ಆದರೆ, ಚೆನ್ನೈಗೆ ಮಾತ್ರ ಐಕಾನ್ ಪ್ಲೇಯರ್ ಇರಲಿಲ್ಲ. ಇದರಿಂದಾಗಿ ಚೆನ್ನೈ ಸೆಹ್ವಾಗ್​ರನ್ನು ತಂಡದ ಐಕಾನ್ ಆಗಿ ಮಾಡಲು ನಿರ್ಧರಿಸಿತ್ತು. ಆದರೆ ಸೆಹ್ವಾಗ್ ಒಲವು ಬೇರೆ ಕಡೆ ಇರುವುದನ್ನು ಗಮನಿಸಿದ ಚೆನ್ನೈ ಧೋನಿಯನ್ನು ಹರಾಜಿನಲ್ಲಿ ಖರೀದಿಸಿದರು ಎಂದು ಬದ್ರಿನಾಥ್ ಹೇಳಿದ್ದಾರೆ.

ಸೆಹ್ವಾಗ್ ದೆಹಲಿಯಿಂದ ಆಡಲು ನಿರ್ಧರಿಸಿದ್ದರಿಂದ ಚೆನ್ನೈ ತನ್ನ ಆಯ್ಕೆಯನ್ನು ಬದಲಾಯಿಸಿ, ಧೋನಿಯನ್ನು ನಾಯಕನನ್ನಾಗಿ ಮಾಡಿತು ಎಂಬ ವಿಚಾರವನ್ನು ಬದ್ರಿನಾಥ್ ಬಿಚ್ಚಿಟ್ಟಿದ್ದಾರೆ.

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ