AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಚಾಂಪಿಯನ್ ಪಟ್ಟದ ಹಿಂದೆ ಬೆಸ ಸಂಖ್ಯೆಯ ರಹಸ್ಯ ಅಡಗಿದೆಯಾ? ಸಾಕ್ಷಿ ಇದೆ..

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನೋ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ, ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆ ಮುಂಬೈ ಇಂಡಿಯನ್ಸ್ ತಂಡಕ್ಕಿದೆ. ಐಪಿಎಲ್​ನ ಹಾಲಿ ಚಾಂಪಿಯನ್ ಆಗಿರೋ ಮುಂಬೈ ಇಂಡಿಯನ್ಸ್ ತಂಡ ಒಟ್ಟು ನಾಲ್ಕು ಬಾರಿ, ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ. ಆದ್ರೆ ಮುಂಬೈ ಇಂಡಿಯನ್ಸ್ ತಂಡದ ಈ ಚಾಂಪಿಯನ್​ ಪಟ್ಟದ ಹಿಂದೆ, ಬೆಸ ಸಂಖ್ಯೆಯ ರಹಸ್ಯ ಅಡಗಿದೆ. ಅಂದ್ರೆ ಬೆಸ ಸಂಖ್ಯೆಯ ವರ್ಷದಲ್ಲೇ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿರೋದು. ಬೆಸ ಸಂಖ್ಯೆಯ ವರ್ಷಕ್ಕೂ […]

ಮುಂಬೈ ಚಾಂಪಿಯನ್ ಪಟ್ಟದ ಹಿಂದೆ ಬೆಸ ಸಂಖ್ಯೆಯ ರಹಸ್ಯ ಅಡಗಿದೆಯಾ? ಸಾಕ್ಷಿ ಇದೆ..
ಮುಂಬೈ ಇಂಡಿಯನ್ಸ್​
ಸಾಧು ಶ್ರೀನಾಥ್​
|

Updated on: Sep 14, 2020 | 12:05 PM

Share

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನೋ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ, ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆ ಮುಂಬೈ ಇಂಡಿಯನ್ಸ್ ತಂಡಕ್ಕಿದೆ.

ಐಪಿಎಲ್​ನ ಹಾಲಿ ಚಾಂಪಿಯನ್ ಆಗಿರೋ ಮುಂಬೈ ಇಂಡಿಯನ್ಸ್ ತಂಡ ಒಟ್ಟು ನಾಲ್ಕು ಬಾರಿ, ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ. ಆದ್ರೆ ಮುಂಬೈ ಇಂಡಿಯನ್ಸ್ ತಂಡದ ಈ ಚಾಂಪಿಯನ್​ ಪಟ್ಟದ ಹಿಂದೆ, ಬೆಸ ಸಂಖ್ಯೆಯ ರಹಸ್ಯ ಅಡಗಿದೆ. ಅಂದ್ರೆ ಬೆಸ ಸಂಖ್ಯೆಯ ವರ್ಷದಲ್ಲೇ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿರೋದು.

ಬೆಸ ಸಂಖ್ಯೆಯ ವರ್ಷಕ್ಕೂ ಮುಂಬೈ ಇಂಡಿಯನ್ಸ್ ತಂಡದ ಚಾಂಪಿಯನ್ ಪಟ್ಟಕ್ಕೂ ಅವಿನಾಭಾವ ಸಂಬಂಧವಿದೆ ಅಂತಾ ಕಾಣುತ್ತೆ. ಐಪಿಎಲ್ ಮಾತ್ರವಲ್ಲ.. ಚಾಂಪಿಯನ್ಸ್ ಲೀಗ್​ನಲ್ಲೂ ಮುಂಬೈ ಇಂಡಿಯನ್ಸ್ ತಂಡ ಬೆಸ ಸಂಖ್ಯೆಯ ವರ್ಷದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದೆ.

2013, ಮೇ 26, ಭಾನುವಾರ ಚೆನ್ನೈ ಮಣಿಸಿ ಚಾಂಪಿಯನ್ 2013ರ ಐಪಿಎಲ್ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ, ಚೆನ್ನೈ ತಂಡವನ್ನ ಮಣಿಸಿ ಚೊಚ್ಚಲ ಚಾಂಪಿಯನ್ ಪಟ್ಟವನ್ನ ಅಲಂಕರಿಸಿತು.

2015, ಮೇ 24, ಭಾನುವಾರ ಚೆನ್ನೈ ಮಣಿಸಿ ಚಾಂಪಿಯನ್ 2014ರ ಸಮ ಸಂಖ್ಯೆಯ ವರ್ಷದಲ್ಲಿ ಪ್ಲೇ ಆಫ್​ನಲ್ಲೇ ಹೊರ ನಡೆದ ಮುಂಬೈ ಇಂಡಿಯನ್ಸ್ ತಂಡ 2015ರಲ್ಲಿ ಮತ್ತೊಮ್ಮೆ ಚೆನ್ನೈ ತಂಡವನ್ನ ಮಣಿಸಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ರು.

2017, ಮೇ 21, ಭಾನುವಾರ ಪುಣೆ ಮಣಿಸಿ ಚಾಂಪಿಯನ್ 2016ರ ಲೀಗ್ ಸ್ಟೇಜ್​ನಲ್ಲೇ ಹೊರ ನಡೆದ ಮುಂಬೈ ಇಂಡಿಯನ್ಸ್ 107ರ ಬೆಸ ಸಂಖ್ಯೆಯ ವರ್ಷದಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡವನ್ನ ಮಣಿಸಿ 3ನೇ ಬಾರಿಗೆ ಚಾಂಪಿಯನ್ ಆಯ್ತು.

2019 ಮೇ 12 ಭಾನುವಾರ ಹಾಗೇ 2018ರಲ್ಲಿ ನಡೆದ ಐಪಿಎಲ್​ನಲ್ಲೂ ಲೀಗ್ ಸ್ಟೇಜ್​ನಲ್ಲೇ ಸುಸ್ತಾದ ಮುಂಬೈ 2019ರಲ್ಲಿ 3ನೇ ಬಾರಿ ಫೈನಲ್​ನಲ್ಲಿ ಚೆನ್ನೈ ತಂಡವನ್ನ ಮಣಿಸಿ 4ನೇ ಬಾರಿ ಐಪಿಎಲ್ ಕಿರೀಟವನ್ನ ಮುಡಿಗೇರಿಸಿಕೊಳ್ತು.

ಚಾಂಪಿಯನ್ಸ್ ಲೀಗ್ 2011-2013ರಲ್ಲಿ ಚಾಂಪಿಯನ್ ಐಪಿಎಲ್​ನಲ್ಲಷ್ಟೇ ಅಲ್ಲ.. ಚಾಂಪಿಯನ್ಸ್ ಲೀಗ್​ನಲ್ಲೂ ಮುಂಬೈ ತಂಡ ಬೆಸ ಸಂಖ್ಯೆಯ ವರ್ಷದಲ್ಲೇ ಚಾಂಪಿಯನ್ ಆಗಿದೆ. 2011ಮತ್ತು 2013ರಲ್ಲಿ ರೋಹಿತ್ ಬ್ರಿಗೇಡಿಯರ್ಸ್ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದಾರೆ.

ಹೀಗೆ ಮುಂಬೈ ಇಂಡಿಯನ್ಸ್ ತಂಡ ಬೆಸ ಸಂಖ್ಯೆಯ ವರ್ಷದಲ್ಲೇ, ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್​ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಹಿಂದಿನ ಸಮ ಸಂಖ್ಯೆಯ ವರ್ಷದಲ್ಲಿ ಮುಂಬೈ ಲೀಗ್ ಸ್ಟೇಜ್​ನಲ್ಲೇ ಹೊರ ಹೋಗಿದೆ.

ಹಾಗಂತ ಈ ಸಮ ಸಂಖ್ಯೆಯ ವರ್ಷದಲ್ಲಿ ಮುಂಬೈ ಪ್ಲಾಫ್ ಆಗುತ್ತೆ ಅನ್ನೋದನ್ನ ಹೇಳೋಕಾಗಲ್ಲ. ಆದ್ರೆ ಬೆಸ ಸಂಖ್ಯೆ ಮುಂಬೈ ಪಾಲಿಗೆ ಅದೃಷ್ಟದ ವರ್ಷ ಅನ್ನೋದ್ರಲ್ಲಿ ಎರಡು ಮಾತಿಲ್ಲ.

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್