AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020 ರೋಚಕ ಸುದ್ದಿಗಳು: ಮೊದಲ ಏಕದಿನ ಪಂದ್ಯದಲ್ಲಿ ಜಂಪಾ ಜಾದೂ

ಆರ್​ಸಿಬಿ ತಂಡದ ಸ್ಪಿನ್ನರ್ ಌಡಂ ಜಂಪಾ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4ವಿಕೆಟ್ ಪಡೆದು ಮಿಂಚಿದ್ರು. 10ಓವರ್​ಗಳಲ್ಲಿ 55ರನ್ ನೀಡಿದ ಜಂಪಾ 4ವಿಕೆಟ್ ಪಡೆದ್ರು. ಜಂಪಾ ಸ್ಪಿನ್ ಜಾದೂಗೆ ಆರ್​ಸಿಬಿ ಫ್ರಾಂಚೈಸಿ ಫುಲ್ ಖುಷ್ ಆಗಿದೆ. ಎಲ್ಲ ಆಟಗಾರರು ಫಿಟ್ ಆರ್​ಸಿಬಿ ತಂಡದ ಎಲ್ಲ ಆಟಗಾರರು ಉತ್ತಮ ಫಿಟ್ನೆಸ್ ಹೊಂದಿದ್ದಾರೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ಫಿಟ್ನೆಸ್ ದೃಷ್ಟಿಯಿಂದ ಎಲ್ಲರೂ ಉತ್ತಮವಾಗಿ ಕಾಣುತ್ತಿದ್ದಾರೆ. ಎಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ. ಕೋಟಿ ವೀರ ದುಬಾರಿ […]

IPL 2020 ರೋಚಕ ಸುದ್ದಿಗಳು: ಮೊದಲ ಏಕದಿನ ಪಂದ್ಯದಲ್ಲಿ ಜಂಪಾ ಜಾದೂ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Sep 13, 2020 | 10:10 AM

Share

ಆರ್​ಸಿಬಿ ತಂಡದ ಸ್ಪಿನ್ನರ್ ಌಡಂ ಜಂಪಾ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4ವಿಕೆಟ್ ಪಡೆದು ಮಿಂಚಿದ್ರು. 10ಓವರ್​ಗಳಲ್ಲಿ 55ರನ್ ನೀಡಿದ ಜಂಪಾ 4ವಿಕೆಟ್ ಪಡೆದ್ರು. ಜಂಪಾ ಸ್ಪಿನ್ ಜಾದೂಗೆ ಆರ್​ಸಿಬಿ ಫ್ರಾಂಚೈಸಿ ಫುಲ್ ಖುಷ್ ಆಗಿದೆ.

ಎಲ್ಲ ಆಟಗಾರರು ಫಿಟ್ ಆರ್​ಸಿಬಿ ತಂಡದ ಎಲ್ಲ ಆಟಗಾರರು ಉತ್ತಮ ಫಿಟ್ನೆಸ್ ಹೊಂದಿದ್ದಾರೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ಫಿಟ್ನೆಸ್ ದೃಷ್ಟಿಯಿಂದ ಎಲ್ಲರೂ ಉತ್ತಮವಾಗಿ ಕಾಣುತ್ತಿದ್ದಾರೆ. ಎಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಕೋಟಿ ವೀರ ದುಬಾರಿ ಈ ಬಾರಿಯ ಐಪಿಎಲ್​ನಲ್ಲಿ 15.50ಕೋಟಿಗೆ ಬಿಡ್ ಆಗಿದ್ದ ಪ್ಯಾಟ್ ಕಮ್ಮಿನ್ಸ್, ಮತ್ತೆ ದುಬಾರಿ ಬೌಲರ್ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10ಓವರ್​ಗಳಲ್ಲಿ 74ರನ್ ನೀಡಿದ ಕಮ್ಮಿನ್ಸ್, 1ವಿಕೆಟ್ ಪಡೆದ್ರು.

ಐಪಿಎಲ್​ನಲ್ಲಿ ಯುಎಸ್​ಎ ಆಟಗಾರ ಐಪಿಎಲ್​ಗೆ ಮೊದಲ ಯುಎಸ್​ಎ ಆಟಗಾರ ಎಂಟ್ರಿಕೊಟ್ಟಿದ್ದಾನೆ. ಕೆಕೆಆರ್ ತಂಡದ ಹ್ಯಾರಿ ಗರ್ನಿಯಿಂದ ಹೊರಬಿದ್ದಿದ್ದು, ಯುಎಸ್​ಎ ವೇಗಿ ಅಲಿ ಖಾನ್ ಖರೀದಿಸಲಾಗಿದೆ. ಅಲಿ ಖಾನ್ ಸಿಪಿಎಲ್ ಟೂರ್ನಿಯಲ್ಲಿ ಆಡಿದ್ರು.

ಸ್ಮಿತ್ ತಲೆಗೆ ಏಟು ಆಸಿಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್​ಗೆ, ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದಿದೆ. ನೆಟ್ಸ್​ನಲ್ಲಿ ಅಭ್ಯಾಸ ಮಾಡ್ತಿರೋ ವೇಳೆ ಥ್ರೋಡೌನ್ ಎಸೆತ, ರಭಸವಾಗಿ ಬಡಿದಿದೆ. ಇದ್ರಿಂದ ಸ್ಟೀವ್ ಸ್ಮಿತ್ ಮೊದಲ ಏಕದಿನ ಪಂದ್ಯಕ್ಕೆ ಗೈರಾಗಿದ್ರು.

ಐಪಿಎಲ್​ನಿಂದ ಸ್ಮಿತ್ ಮಿಸ್? ಸ್ಟೀವ್ ಸ್ಮಿತ್​ಗೆ ತೀವ್ರ ಗಾಯವಾಗಿರೋದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ತಂದಿದೆ. ಸ್ಮಿತ್, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಆದ್ರಿಂದ, ಸ್ಮಿತ್ ವಿಶ್ರಾಂತಿ ಪಡೆಯಬೇಕಾಗಿದ್ದು, ಕೆಲ ಐಪಿಎಲ್ ಪಂದ್ಯ ಮಿಸ್ ಮಾಡಿಕೊಳ್ಳೋ ಸಾಧ್ಯತೆಯಿದೆ.

ಯುವಿ ನಿರ್ಧಾರದಿಂದ ಗೌತಿ ಖುಷ್! ಯುವರಾಜ್ ಸಿಂಗ್ ನಿವೃತ್ತಿಯನ್ನ ವಾಪಸ್ ಪಡೆಯೋ ನಿರ್ಧಾರ ಮಾಡಿರೋದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ಗೆ ಖುಷಿ ನೀಡಿದೆ. ಯುವಿ ಮತ್ತೆ ಕ್ರಿಕೆಟ್ ಅಂಗಳಕ್ಕಿಳಿದು ಆಡಿದರೆ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.

ಉತ್ತಮ ಪ್ರದರ್ಶನದ ವಿಶ್ವಾಸ ಈ ಬಾರಿಯ ಐಪಿಎಲ್​ನಲ್ಲೂ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ನಾಥನ್ ಕೌಲ್ಟರ್ ನೈಲ್ ಹೇಳಿದ್ದಾರೆ. ಯುಎಇ ಪಿಚ್ ನನ್ನ ಬೌಲಿಂಗ್​ಗೆ ಪೂರಕವಾಗಿದೆ. ಹೆಚ್ಚು ಪಡೆಯೋದು ನನ್ನ ಗುರಿಯಾಗಿದೆ ಅಂತ ನೈಲ್ ತಿಳಿಸಿದ್ದಾರೆ.

ಕುಲ್​ದೀಪ್ ಆತ್ಮವಿಶ್ವಾಸದ ಆಟಗಾರ ಕುಲ್​ದೀಪ್ ಯಾದವ್ ಆತ್ಮವಿಶ್ವಾಸ ಆಟಗಾರ ಎಂದು ಕೆಕೆಆರ್ ಕೋಚ್ ಡೇವಿಡ್ ಹಸ್ಸಿ ಹೇಳಿದ್ದಾರೆ. ಚೆಂಡಿನೊಂದಿಗೆ ಏನು ಮಾಡ್ವೇಕು, ಏನು ಮಾಡಲು ಸಾಧ್ಯವಿಲ್ಲ ಅನ್ನೋದು ಗೊತ್ತಿಲ್ಲ. ಆತ ಅಸಾಧಾರಣ ಆಟಗಾರ ಎಂದಿದ್ದಾರೆ.

ಮೊದಲ ಪಂದ್ಯಕ್ಕೆ ಮಾರ್ಗನ್, ಕಮ್ಮಿನ್ಸ್ ಮುಂಬೈ ವಿರುದ್ಧದ ಕೆಕೆಆರ್ ಮೊದಲ ಪಂದ್ಯಕ್ಕೆ ಆಸಿಸ್, ಇಂಗ್ಲೆಂಡ್ ಆಟಗಾರರು ಲಭ್ಯವಾಗಲಿದ್ದಾರೆ ಎಂದು ಕೆಕೆಆರ್ ಫ್ರಾಂಚೈಸಿ ತಿಳಿಸಿದೆ. ಇಂಗ್ಲೆಂಡ್​ನ ಇಯಾನ್ ಮಾರ್ಗನ್, ಪ್ಯಾಟ್ ಕಮಿನ್ಸ್ ಮೊದಲ ಪಂದ್ಯವಾಡಲಿದ್ದಾರೆ.

ಬಿಸಿಲಿಗೆ ಬಸವಳಿದ ಆಟಗಾರರು ದುಬೈ ಬಿಸಿಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಅಕ್ಷಶಃ ಬಳಲಿ ಹೋಗಿದ್ದಾರೆ. 36ಡಿಗ್ರಿ ಬಿಸಿಲಿನಲ್ಲಿ ಪ್ರಾಕ್ಟೀಸ್ ಮುಗಿಸಿ ಫಾಫ್ ಡುಪ್ಲೆಸಿಸ್, ತಣ್ಣಗಿರೋ ನೀರನ್ನ ಮುಖದ ಮೇಲೆ ಸುರುದುಕೊಂಡು ರಿಲ್ಯಾಕ್ಸ್ ಆದ್ರು…

Published On - 8:41 am, Sun, 13 September 20

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ