ಮಸ್ಕಿ‌ ಹಳ್ಳ ದಂಡೆ ಸೇತುವೆ ಬಳಿ ಸಿಲುಕಿರುವ ವ್ಯಕ್ತಿಗಳು, ಪ್ರಾಣ ರಕ್ಷಣೆಗಾಗಿ ಪರದಾಟ

ರಾಯಚೂರು: ಮಸ್ಕಿ ಜಲಾಶಯಕ್ಕೆ 2,100 ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಳವಾಗಿದೆ. ಮಸ್ಕಿ ಡ್ಯಾಂನಿಂದ 1,600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪೋತ್ನಾಳ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಹಳ್ಳದ ದಂಡೆಗೆ ತೆರಳದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮಸ್ಕಿ ಹಳ್ಳದಲ್ಲಿ ಸಿಲುಕಿರುವ ವ್ಯಕ್ತಿ ಪರದಾಟ: ಇನ್ನು ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಹಳ್ಳದ ದಂಡೆ ಮುಳುಗಿ ಹೋಗಿದೆ. ದ್ವೀಪದಂತಾದ ಸೇತುವೆಯ ಕೆಳಗೆ ನಿಂತು ರಕ್ಷಣೆಗಾಗಿ ವ್ಯಕ್ತಿಗಳಿಬ್ಬರು ಪರದಾಡುತ್ತಿದ್ದಾರೆ. ಮಸ್ಕಿ ಹಳ್ಳದಲ್ಲಿ ಸಿಲುಕಿರುವ […]

ಮಸ್ಕಿ‌ ಹಳ್ಳ ದಂಡೆ ಸೇತುವೆ ಬಳಿ ಸಿಲುಕಿರುವ ವ್ಯಕ್ತಿಗಳು, ಪ್ರಾಣ ರಕ್ಷಣೆಗಾಗಿ ಪರದಾಟ

Updated on: Oct 11, 2020 | 1:20 PM

ರಾಯಚೂರು: ಮಸ್ಕಿ ಜಲಾಶಯಕ್ಕೆ 2,100 ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಳವಾಗಿದೆ. ಮಸ್ಕಿ ಡ್ಯಾಂನಿಂದ 1,600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪೋತ್ನಾಳ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಹಳ್ಳದ ದಂಡೆಗೆ ತೆರಳದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಸ್ಕಿ ಹಳ್ಳದಲ್ಲಿ ಸಿಲುಕಿರುವ ವ್ಯಕ್ತಿ ಪರದಾಟ:
ಇನ್ನು ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಹಳ್ಳದ ದಂಡೆ ಮುಳುಗಿ ಹೋಗಿದೆ. ದ್ವೀಪದಂತಾದ ಸೇತುವೆಯ ಕೆಳಗೆ ನಿಂತು ರಕ್ಷಣೆಗಾಗಿ ವ್ಯಕ್ತಿಗಳಿಬ್ಬರು ಪರದಾಡುತ್ತಿದ್ದಾರೆ. ಮಸ್ಕಿ ಹಳ್ಳದಲ್ಲಿ ಸಿಲುಕಿರುವ ವ್ಯಕ್ತಿಗಳು ರಕ್ಷಣೆಗಾಗಿ ಕೂಗಾಡುತ್ತಿದ್ದಾರೆ. ಸ್ಥಳೀಯರು ಸಹ ಹಗ್ಗಗಳನ್ನು ಬಳಸಿ ಸಿಲುಕಿರುವವರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ.

ಮಸ್ಕಿ‌ ಹಳ್ಳದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ:
ಸಿಪಿಐ ದೀಪಕ ನೇತೃತ್ವದಲ್ಲಿ ಅಗ್ನಿ ಶಾಮಕ ದಳದಿಂದ ಇಬ್ಬರು ವ್ಯಕ್ತಿಗಳ ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಹಗ್ಗ ಕೈ ತಪ್ಪಿ ಒಬ್ಬ ನೀರು ಪಾಲಾಗಿದ್ದ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಸಾಹಸದಿಂದ ಇಬ್ಬರೂ ಸೇಫ್ ಆಗಿದ್ದಾರೆ. ಅಲ್ಲದೆ ಸಿಲುಕಿದ್ದ ಮತ್ತೋರ್ವ ಯುವಕ ಜಲೀಲ ಎಂಬುವವನನ್ನು ಕ್ರೇನ್​ ಮೂಲಕ ರಕ್ಷಿಸಲಾಗಿದೆ.

Published On - 8:54 am, Sun, 11 October 20