ಕೊರಾನಾ ಟೆಸ್ಟ್ ಹೆಸರಲ್ಲಿ ಗೂಂಡಾಗಿರಿ, ಪಾಲಿಕೆ ಸಿಬ್ಬಂದಿ ದರ್ಪಾಧಿಕಾರಕ್ಕೆ ಕೆರಳಿದ ಬೆಂಗಳೂರು ಜನ

ಬೆಂಗಳೂರು: ಮಹಾಮಾರಿ ಕೊರೊನಾ ಈಗಾಗಲೇ ಜನರಿಗೆ ನರಕದ ದರ್ಶನ ಮಾಡಿಸುತ್ತಿದೆ. ಈ ನಡುವೆ BBMP ಸಿಬ್ಬಂದಿ ಕೊರೊನಾ ಟೆಸ್ಟಿಂಗ್ ಹೆಸರಲ್ಲಿ ದರ್ಪ , ದೌರ್ಜನ್ಯವೆಸಗುತ್ತಿದೆ. ಕೊರೊನಾ ಟೆಸ್ಟ್ ಮಾಡಿಸೋಕೆ ಒಪ್ಪಲಿಲ್ಲ ಅಂದ್ರೆ ದಂಡವಲ್ಲ ಬದಲಿಗೆ ಯಾಮಾರಿದ್ರೆ ಏಟು ಬೀಳುತ್ತೆ. ಬೆಂಗಳೂರಿನಲ್ಲಿ ಜನರನ್ನು ಹೆದರಿಸಿ BBMP ಸಿಬ್ಬಂದಿ ಟೆಸ್ಟ್ ಮಾಡ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿಯ ಈ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. HSR ಲೇಔಟ್​ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ BBMP ಸಿಬ್ಬಂದಿ ಕಿರಿಕಿರಿ ಮಾಡಿದ್ದಾರೆ. […]

ಕೊರಾನಾ ಟೆಸ್ಟ್ ಹೆಸರಲ್ಲಿ ಗೂಂಡಾಗಿರಿ, ಪಾಲಿಕೆ ಸಿಬ್ಬಂದಿ ದರ್ಪಾಧಿಕಾರಕ್ಕೆ ಕೆರಳಿದ ಬೆಂಗಳೂರು ಜನ
Follow us
ಆಯೇಷಾ ಬಾನು
|

Updated on: Oct 11, 2020 | 11:22 AM

ಬೆಂಗಳೂರು: ಮಹಾಮಾರಿ ಕೊರೊನಾ ಈಗಾಗಲೇ ಜನರಿಗೆ ನರಕದ ದರ್ಶನ ಮಾಡಿಸುತ್ತಿದೆ. ಈ ನಡುವೆ BBMP ಸಿಬ್ಬಂದಿ ಕೊರೊನಾ ಟೆಸ್ಟಿಂಗ್ ಹೆಸರಲ್ಲಿ ದರ್ಪ , ದೌರ್ಜನ್ಯವೆಸಗುತ್ತಿದೆ. ಕೊರೊನಾ ಟೆಸ್ಟ್ ಮಾಡಿಸೋಕೆ ಒಪ್ಪಲಿಲ್ಲ ಅಂದ್ರೆ ದಂಡವಲ್ಲ ಬದಲಿಗೆ ಯಾಮಾರಿದ್ರೆ ಏಟು ಬೀಳುತ್ತೆ. ಬೆಂಗಳೂರಿನಲ್ಲಿ ಜನರನ್ನು ಹೆದರಿಸಿ BBMP ಸಿಬ್ಬಂದಿ ಟೆಸ್ಟ್ ಮಾಡ್ತಿದ್ದಾರೆ.

ಬಿಬಿಎಂಪಿ ಸಿಬ್ಬಂದಿಯ ಈ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. HSR ಲೇಔಟ್​ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ BBMP ಸಿಬ್ಬಂದಿ ಕಿರಿಕಿರಿ ಮಾಡಿದ್ದಾರೆ. ಅದಕ್ಕೆ 5 ನಿಮಿಷ ಸಮಯ ಕೊಡಿ ಎಂದು ವಾಹನ ಚಾಲಕ ಕೇಳಿಕೊಂಡ್ರೂ ಅವಕಾಶ ಕೊಟ್ಟಿಲ್ಲವಂತೆ. ನಂತರ ಇವರ ನಡುವೆ ಜಗಳ ಶುರುವಾಗಿ ಪಾಲಿಕೆ ಸಿಬ್ಬಂದಿ ಶರ್ಟ್ ಹರಿದು ವಾಹನದ ಕೀ ಕಸಿದುಕೊಂಡು ದೌರ್ಜನ್ಯ ಮಾಡಿದ್ದಾರೆ ಅಂತಾ ನೊಂದವರು ಅಳಲು ತೋಡಿಕೊಂಡಿದ್ದಾರೆ.

ನಾನು ಈಗಾಗಲೇ ಟೆಸ್ಟ್ ಮಾಡಿಸಿಕೊಂಡಿದ್ದೇನೆ ನೆಗಟಿವ್ ಬಂದಿದೆ ಅಂದರು ಕೇಳದೇ ಹಲ್ಲೆ ಮಾಡಿದ್ದಾರೆ. ಈ ರೀತಿ ದೌರ್ಜನ್ಯದಿಂದ ಟೆಸ್ಟ್ ಮಾಡಿಸುವುದು ಸರಿಯಲ್ಲ. ನಮಗೆ ತುರ್ತು ಕೆಲಸವಿದೆ ಐದು ನಿಮಿಷ ಸಮಯ ಕೊಡಿ ಅಂದರು ಕೊಡಲಿಲ್ಲ. ಗುಂಡಾಗಳಂತೆ ನಾಲ್ಕೈದು ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ. ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದ್ರೂ ಬೆಡ್ ಸೌಲಭ್ಯವನ್ನೂ ಸಹ ಮಾಡಲ್ಲ. ಆದ್ರೆ ಸುಮ್ಮನೆ ಟೆಸ್ಟಿಂಗ್ ಅಂತಾ ಚೆನ್ನಾಗಿದ್ದವರ ಮೇಲೆ ಗದಾಪ್ರಹಾರ ಮಾಡ್ತಾರೆ. ಈ ರೀತಿ ದೌರ್ಜನ್ಯದಿಂದ ಟೆಸ್ಟ್ ಮಾಡಿಸುವುದು ಎಷ್ಟರಮಟ್ಟಿಗೆ ಸರಿ ಎಂದು ದೌರ್ಜನ್ಯಕ್ಕೆ ಒಳಗಾದವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇನ್ನು ಸಾರ್ವಜನಿಕರ ಮೇಲಿನ ದೌರ್ಜನ್ಯದ ವಿಡಿಯೋ ಟಿವಿ9 ಗೆ ಲಭ್ಯವಾಗಿದೆ.

ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ