‘ಏಯ್​.. ಯಾರೋ ಇವನು.. ಹೈವೇ ಮೇಲೇ ಈಜಾಡ್ತಿದ್ದಾನೆ!’

‘ಏಯ್​.. ಯಾರೋ ಇವನು.. ಹೈವೇ ಮೇಲೇ ಈಜಾಡ್ತಿದ್ದಾನೆ!’

ಮಂಡ್ಯ: ಮಳೆರಾಯನ ಅವಾಂತರಕ್ಕೆ ರಾಜ್ಯದ ಹಲವೆಡೆ ಜನರು ಪರದಾಡುತ್ತಿದ್ದರೆ ಇತ್ತ ಹೆದ್ದಾರಿಯಲ್ಲಿ ನಿಂತ ನೀರಿನಲ್ಲಿ ಯುವಕನೊಬ್ಬ ಈಜಾಟ ನಡೆಸಿ ಮಸ್ತಿ ಮಾಡಿರುವ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ನಡೆದಿದೆ. ಕೆ.ಎಂ.ದೊಡ್ಡಿಯ ಭಾರತಿ ಕಾಲೇಜು ಬಸ್ ನಿಲ್ದಾಣದ ಬಳಿ ಯುವಕ ಈಜಾಟ ನಡೆಸಿದ್ದಾನೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರವನ್ನು ಹಾದುಹೋಗುವ ಕೊಳ್ಳೇಗಾಲ-ಮದ್ದೂರು ಹೆದ್ದಾರಿಯಲ್ಲಿ ನೀರು ನಿಂತಿತ್ತು. ಹಾಗಾಗಿ, ರಸ್ತೆಯಲ್ಲಿ ನಿಂತ ಮಳೆನೀರಿನಲ್ಲೇ ಯುವಕ ಬಟ್ಟೆಬಿಚ್ಚಿ ಹಾಯಾಗಿ ಈಜಾಡಿದ್ದಾನೆ. ಇದನ್ನು ಕಂಡ ಸ್ಥಳೀಯರು […]

KUSHAL V

|

Oct 11, 2020 | 10:58 AM

ಮಂಡ್ಯ: ಮಳೆರಾಯನ ಅವಾಂತರಕ್ಕೆ ರಾಜ್ಯದ ಹಲವೆಡೆ ಜನರು ಪರದಾಡುತ್ತಿದ್ದರೆ ಇತ್ತ ಹೆದ್ದಾರಿಯಲ್ಲಿ ನಿಂತ ನೀರಿನಲ್ಲಿ ಯುವಕನೊಬ್ಬ ಈಜಾಟ ನಡೆಸಿ ಮಸ್ತಿ ಮಾಡಿರುವ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ನಡೆದಿದೆ. ಕೆ.ಎಂ.ದೊಡ್ಡಿಯ ಭಾರತಿ ಕಾಲೇಜು ಬಸ್ ನಿಲ್ದಾಣದ ಬಳಿ ಯುವಕ ಈಜಾಟ ನಡೆಸಿದ್ದಾನೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರವನ್ನು ಹಾದುಹೋಗುವ ಕೊಳ್ಳೇಗಾಲ-ಮದ್ದೂರು ಹೆದ್ದಾರಿಯಲ್ಲಿ ನೀರು ನಿಂತಿತ್ತು. ಹಾಗಾಗಿ, ರಸ್ತೆಯಲ್ಲಿ ನಿಂತ ಮಳೆನೀರಿನಲ್ಲೇ ಯುವಕ ಬಟ್ಟೆಬಿಚ್ಚಿ ಹಾಯಾಗಿ ಈಜಾಡಿದ್ದಾನೆ. ಇದನ್ನು ಕಂಡ ಸ್ಥಳೀಯರು ಆತನಿಗೆ ಬುದ್ಧಿ ಹೇಳೋಕೆ ಮುಂದಾದರು. ಜೊತೆಗೆ, ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲಿ ನಿಂತಿದ್ದ ಮಳೆ ನೀರನ್ನು ಕಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

Follow us on

Related Stories

Most Read Stories

Click on your DTH Provider to Add TV9 Kannada