ನಿಂತಿದ್ದ ಟ್ಯಾಂಕರ್‌ಗೆ ಅಂಚೆ ವಾಹನ ಡಿಕ್ಕಿ: ಟ್ಯಾಂಕರ್‌ ವಾಹನದಡಿ ಮಲಗಿದ್ದ ಇಬ್ಬರು ಸ್ಥಳದಲ್ಲೇ ಸಾವು

|

Updated on: Jan 17, 2021 | 10:12 AM

ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ ವಾಹನಕ್ಕೆ, ಅಂಚೆ ವಾಹನ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಟ್ಯಾಂಕರ್‌ ವಾಹನದಡಿ ಮಲಗಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

ನಿಂತಿದ್ದ ಟ್ಯಾಂಕರ್‌ಗೆ ಅಂಚೆ ವಾಹನ ಡಿಕ್ಕಿ: ಟ್ಯಾಂಕರ್‌ ವಾಹನದಡಿ ಮಲಗಿದ್ದ ಇಬ್ಬರು ಸ್ಥಳದಲ್ಲೇ ಸಾವು
ಸಾಂದರ್ಭೀಕ ಚಿತ್ರ
Follow us on

ಚಿತ್ರದುರ್ಗ: ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ ವಾಹನಕ್ಕೆ, ಅಂಚೆ ವಾಹನ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಟ್ಯಾಂಕರ್‌ ವಾಹನದಡಿ ಮಲಗಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಗ್ರಾಮದ ಬಳಿ ನಡೆದಿದೆ.

ತಡ ರಾತ್ರಿ ಟ್ಯಾಂಕರ್ ಲಾರಿ ಟೈರ್ ಬರ್ಸ್ಟ್ ಆಗಿದೆ. ಹೀಗಾಗಿ ರಸ್ತೆ ಬದಿ‌ಯಲ್ಲಿ ಟ್ಯಾಂಕರ್ ಲಾರಿ ನಿಲ್ಲಿಸಿ, ಲಾರಿ ಕೆಳಗೆ ಇಬ್ಬರು ಮಲಗಿದ್ದರು. ಈ ವೇಳೆ ವೇಗವಾಗಿ ಬಂದ ಅಂಚೆ ಇಲಾಖೆ ವಾಹನ, ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಲಾರಿ ಕೆಳಗೆ ಮಲಗಿದ್ದ ಕುಮಾರ್ (24), ವಿಜಯ್ (28) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮೂವರಿಗೆ ಗಂಭೀರಗಾಯಗಳಾಗಿದ್ದು, ಗಾಯಾಳುಗಳನ್ನು ಹಿರಿಯೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಧಾರವಾಡದ ದುರ್ಘಟನೆ: ಯೂಟ್ಯೂಬ್​ ಟ್ರೆಂಡಿಗ್​ನಲ್ಲಿ 2ನೇ ಸ್ಥಾನಕ್ಕೆ ತಲುಪಿದ ಟಿವಿ9 ಸುದ್ದಿ

Published On - 10:06 am, Sun, 17 January 21