ವಾಕಿಂಗ್​ ಹೋಗಿದ್ದ ಗರ್ಭಿಣಿಯ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಕೊಯ್ದ ದುಷ್ಕರ್ಮಿಗಳು

ಬೆಳಗಾವಿ: ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ಕತ್ತು ಕೊಯ್ದು ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಚ್ಚೆಯ ಲಕ್ಷ್ಮೀನಗರದಲ್ಲಿ ಬೆಳಕಿಗೆ ಬಂದಿದೆ. ಬಡಾವಣೆಯ ರಸ್ತೆಯ ಮೇಲೆ ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದ್ದು ಅದರಲ್ಲಿ ಓರ್ವ ಮಹಿಳೆ 5 ತಿಂಗಳ ಗರ್ಭಿಣಿಯಾಗಿದ್ದರು ಎಂದು ಹೇಳಲಾಗಿದೆ. ಮೃತ ಮಹಳೆಯರನ್ನು ರಾಜಶ್ರೀ ರವಿ ಬನ್ನೂರ್(21) ಮತ್ತು ರೋಹಿಣಿ ಗಂಗಪ್ಪ ಹುಲಿಮನಿ(21) ಎಂದು ಗುರುತಿಸಲಾಗಿದೆ. ಮೃತರು ಕಾಳೇವಾಡಿ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಮಹಿಳೆಯರು ವಾಕಿಂಗ್‌ಗೆ ಎಂದು ಮಚ್ಚೆಯ ಲಕ್ಷ್ಮೀನಗರದಲ್ಲಿರುವ ಬ್ರಹ್ಮದೇವರ […]

ವಾಕಿಂಗ್​ ಹೋಗಿದ್ದ ಗರ್ಭಿಣಿಯ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಕೊಯ್ದ ದುಷ್ಕರ್ಮಿಗಳು

Updated on: Sep 26, 2020 | 6:41 PM

ಬೆಳಗಾವಿ: ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ಕತ್ತು ಕೊಯ್ದು ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಚ್ಚೆಯ ಲಕ್ಷ್ಮೀನಗರದಲ್ಲಿ ಬೆಳಕಿಗೆ ಬಂದಿದೆ. ಬಡಾವಣೆಯ ರಸ್ತೆಯ ಮೇಲೆ ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದ್ದು ಅದರಲ್ಲಿ ಓರ್ವ ಮಹಿಳೆ 5 ತಿಂಗಳ ಗರ್ಭಿಣಿಯಾಗಿದ್ದರು ಎಂದು ಹೇಳಲಾಗಿದೆ.
ಮೃತ ಮಹಳೆಯರನ್ನು ರಾಜಶ್ರೀ ರವಿ ಬನ್ನೂರ್(21) ಮತ್ತು ರೋಹಿಣಿ ಗಂಗಪ್ಪ ಹುಲಿಮನಿ(21) ಎಂದು ಗುರುತಿಸಲಾಗಿದೆ. ಮೃತರು ಕಾಳೇವಾಡಿ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.

ಮಹಿಳೆಯರು ವಾಕಿಂಗ್‌ಗೆ ಎಂದು ಮಚ್ಚೆಯ ಲಕ್ಷ್ಮೀನಗರದಲ್ಲಿರುವ ಬ್ರಹ್ಮದೇವರ ದೇವಸ್ಥಾನದ ಬಳಿ ಬಂದಿದ್ದ ವೇಳೆ ಘಟನೆ ಸಂಭವಿಸಿದೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯರ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂದು ತಿಳಿದು ಬಂದಿಲ್ಲ.

ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಸಹ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.