ಬೆಂಗಳೂರು: ಕರ್ನಾಟಕದಲ್ಲಿ BJP ಸರ್ಕಾರ 5 ವರ್ಷ ಗಟ್ಟಿಯಾಗಿ ಇರುತ್ತದೆ ಎಂದು ವಿಧಾನಸೌಧದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರದ ಆಡಳಿತವೇ ಬರುತ್ತೆ ಎಂದು ಹೇಳಿದರು.
ಪೂರ್ಣ ಬಹುಮತದಲ್ಲಿ ಬಿಜೆಪಿ ಸರ್ಕಾರ ಬರುತ್ತೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅವಧಿ ಪೂರೈಸುತ್ತದೆ. ಬಿಎಸ್‌ವೈ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಪ್ರಗತಿ ಕಂಡಿದೆ. ಕರ್ನಾಟಕಕ್ಕೆ ಮೋದಿಯಿಂದಲೂ ಹಲವು ಸ್ಕೀಮ್ ದೊರೆತಿದೆ. ಆದ್ದರಿಂದ ಕಾಂಗ್ರೆಸ್ಸಿಗರ ಸುಳ್ಳು ಹೇಳಿಕೆ ಫಲಿಸಲ್ಲ. BJP ಸರ್ಕಾರ ಪತನವಾಗತ್ತೆಂಬ ಅವರ ಕನಸು ನನಸಾಗಲ್ಲ ಎಂದು ಕಾಂಗ್ರೆಸ್ ಟೀಕೆಗಳಿಗೆ ಅಮಿತ್ ಶಾ ತಿರುಗೇಟು ಕೊಟ್ಟರು.
ಜೊತೆಗೆ, ಕರ್ನಾಟಕದ ಮುಖ್ಯಮಂತ್ರಿಗಳ ಜೊತೆಗೆ ಕೇಂದ್ರ ಸರ್ಕಾರ ಯಾವತ್ತೂ ಇದ್ದೇ ಇರುತ್ತದೆ ಎಂದು ಯಡಿಯೂರಪ್ಪ ಸರ್ಕಾರದ ಕಾರ್ಯವೈಖರಿಯನ್ನು ಪ್ರಶಂಸೆ ಮಾಡಿದರು. ಬಿಎಸ್‌ವೈ ನೇತೃತ್ವದಲ್ಲಿ ಯಶಸ್ವಿ ಕಾರ್ಯನಿರ್ವಹಣೆ ಆಗುತ್ತಿದೆ. ಕೊರೊನಾ ವಿರುದ್ಧ ಅತ್ಯಂತ ಯಶಸ್ವಿ ಕಾರ್ಯಪ್ರಗತಿ ಕಂಡಿದೆ ಎಂದು ಬಿಎಸ್‌ವೈ ಕಾರ್ಯವೈಖರಿಗೆ ಅಮಿತ್ ಶಾ ಪ್ರಶಂಸೆ ಮಾಡಿದರು.
Published On - 8:26 pm, Sat, 16 January 21