ಕೊವಿಡ್ ಸೋಂಕು ಉಂಟು ಮಾಡುತ್ತಿರುವ ಅವಾಂತರ ಒಂದೆರೆಡಲ್ಲ. ಈ ವೈರಾಣು ಒಮ್ಮೆ ದೇಹವನ್ನು ಪ್ರವೇಶಿಸಿದರೆ ನಮ್ಮ ಆರೋಗ್ಯ ವ್ಯವಸ್ಥೆಯನ್ನೇ ಅಲುಗಾಡಿಸಿ ಬಿಡುತ್ತದೆ. ಇತ್ತೀಚೆಗೆ ನಡೆದಿರುವ ಹೊಸ ಅಧ್ಯಯನವೊಂದರಲ್ಲಿ ಕೊರೊನಾದ ಇನ್ನೊಂದು ಗಂಭೀರ ಪರಿಣಾಮ ಪತ್ತೆಯಾಗಿದೆ.
ಅಮೆರಿಕಾದ ಖ್ಯಾತ ವೈದ್ಯೆ ಡೇನಾ ಗ್ರೇಸನ್ ಅವರ ಅಧ್ಯಯನದಲ್ಲಿ ಕೊರೊನಾ ಸೋಂಕಿಗೆ ಒಳಗಾದ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳು ಉಂಟಾಗಬಹುದು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೊವಿಡ್ಗೆ ತುತ್ತಾದವರು ತಕ್ಷಣವೇ ಗುಣಮುಖರಾದರೂ ಅದರ ಪರಿಣಾಮ ದೀರ್ಘಕಾಲಿಕವಾಗಿರಲಿದೆ ಎಂದು ಡೇನಾ ಗ್ರೇಸನ್ ಅಭಿಪ್ರಾಯಪಟ್ಟಿದ್ದಾರೆ.
ಕೊವಿಡ್ಗೆ ತುತ್ತಾಗುವ ಪುರುಷರಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಿದೆ. ವೀರ್ಯಾಣು ಉತ್ಪತ್ತಿಯಲ್ಲಿ ಕೊರತೆ, ನಿಮಿರುವಿಕೆಯ ಸಮಸ್ಯೆ ಸೇರಿದಂತೆ ಹಲವು ಬಗೆಯ ತೊಂದರೆ ಉಂಟಾಗಬಹುದು ಎಂದು ತಿಳಿಸಿದ್ದಾರೆ.
ಸೋಂಕಿನ ಬಗ್ಗೆ ನಿರ್ಲಕ್ಷ ವಹಿಸುವುದು ಒಳ್ಳೆಯದಲ್ಲ. ಸೋಂಕಿನಿಂದ ಗುಣಮುಖರಾಗಬಹುದು ಆದರೆ, ಅದರ ದೀರ್ಘಕಾಲಿಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ. ಲೈಂಗಿಕ ಸಮಸ್ಯೆಗಳು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಎಚ್ಚರಿಕೆ ಅಗತ್ಯ ಎಂದಿದ್ದಾರೆ.
ವೀರ್ಯಾಣುಗಳಲ್ಲಿ ಸೋಂಕು ಪತ್ತೆಯಾಗಿತ್ತು
ಈ ಹಿಂದೆ ಚೀನಾದ ವಿಜ್ಞಾನಿಗಳು ವೀರ್ಯಾಣುಗಳಲ್ಲಿ ಕೊರೊನಾ ವೈರಸ್ ಸೋಂಕು ಕಂಡುಬಂದಿತ್ತು ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ಅಮೆರಿಕಾದ ನಿಯತಕಾಲಿಕೆಯಲ್ಲಿ ಲೇಖನ ಪ್ರಕಟವಾಗಿತ್ತು. ಆದರೆ, ಕೊರೊನಾ ಸೋಂಕು ಲೈಂಗಿಕ ಕ್ರಿಯೆಯ ಮೂಲಕ ಹರಡುವ ಬಗ್ಗೆ ಯಾವುದೇ ಮಾಹಿತಿ ಪ್ರಕಟವಾಗಿರಲಿಲ್ಲ.
ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಅಡವಿ ಮಕ್ಕಳ ಕಲಿಕೆಗೆ ವನಬೆಳಕಿನ ನೆರವು
ಅತ್ಯಾಚಾರಿಗಳ ಕಾಮಾಸಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆಗೆ ಪಾಕ್ ಪ್ರಧಾನಿ ಅನುಮತಿ
Published On - 2:09 pm, Mon, 7 December 20