ಕಾಟಾಚಾರಕ್ಕೆ ಪ್ರವಾಹ ಪರಿಶೀಲನೆ ನಡೆಸಿದ R ಅಶೋಕ್

| Updated By: ಸಾಧು ಶ್ರೀನಾಥ್​

Updated on: Oct 19, 2020 | 3:19 PM

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ವರುಣನ ದರ್ಶನ ವಿಕೋಪಕ್ಕೆ ತಿರುಗಿದೆ. ಹೀಗಾಗಿ ಜನ ಸಂಕಷ್ಟದಲ್ಲೇ ಜೀವನ ಸಾಗಿಸುವಂತಾಗಿದೆ. ಬೆಳೆ, ಮನೆ, ರಸ್ತೆ ಎಲ್ಲವೂ ನೀರಿನಲ್ಲಿ ಮುಳುಗಿದೆ. ಆದ ಕಾರಣ ಕಂದಾಯ ಸಚಿವ R. ಅಶೋಕ್ ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ್ರು. ಆದರೆ ಕಾಟಾಚಾರದ ಪ್ರವಾಹ ಪರಿಶೀಲನೆ ನಡೆಸಿದ್ದಾರೆ ಎಂದು ಸಂತ್ರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. R.ಅಶೋಕ್ ಕಾಟಾಚಾರದ ಭೇಟಿ: ಸಚಿವ R.ಅಶೋಕ್ ಕಾಟಾಚಾರಕ್ಕೆ ತಮ್ಮ ಪ್ರವಾಸವನ್ನು ಕೈಗೊಂಡಂತಿದೆ. ಏಕೆಂದರೆ ಪ್ರವಾಹದ ಕಾರಣ 50 ಮನೆ ಕುಸಿದಿದ್ರೂ ಒಂದು ಮನೆಗೂ ಸಚಿವರು […]

ಕಾಟಾಚಾರಕ್ಕೆ ಪ್ರವಾಹ ಪರಿಶೀಲನೆ ನಡೆಸಿದ R ಅಶೋಕ್
Follow us on

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ವರುಣನ ದರ್ಶನ ವಿಕೋಪಕ್ಕೆ ತಿರುಗಿದೆ. ಹೀಗಾಗಿ ಜನ ಸಂಕಷ್ಟದಲ್ಲೇ ಜೀವನ ಸಾಗಿಸುವಂತಾಗಿದೆ. ಬೆಳೆ, ಮನೆ, ರಸ್ತೆ ಎಲ್ಲವೂ ನೀರಿನಲ್ಲಿ ಮುಳುಗಿದೆ. ಆದ ಕಾರಣ ಕಂದಾಯ ಸಚಿವ R. ಅಶೋಕ್ ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ್ರು. ಆದರೆ ಕಾಟಾಚಾರದ ಪ್ರವಾಹ ಪರಿಶೀಲನೆ ನಡೆಸಿದ್ದಾರೆ ಎಂದು ಸಂತ್ರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

R.ಅಶೋಕ್ ಕಾಟಾಚಾರದ ಭೇಟಿ:
ಸಚಿವ R.ಅಶೋಕ್ ಕಾಟಾಚಾರಕ್ಕೆ ತಮ್ಮ ಪ್ರವಾಸವನ್ನು ಕೈಗೊಂಡಂತಿದೆ. ಏಕೆಂದರೆ ಪ್ರವಾಹದ ಕಾರಣ 50 ಮನೆ ಕುಸಿದಿದ್ರೂ ಒಂದು ಮನೆಗೂ ಸಚಿವರು ಭೇಟಿ ನೀಡಿಲ್ಲ. ರಸ್ತೆ ಪಕ್ಕದ ನಾಲಾ, ಗ್ಯಾರೇಜ್ ಪರಿಶೀಲಿಸಿ ಚಿಕ್ಕೋಡಿಯತ್ತ ತೆರಳಿದ್ದಾರೆ. ಮಳೆಯಿಂದ ಗ್ಯಾರೇಜ್ ಕುಸಿದು ವ್ಯಕ್ತಿ ಮೃತಪಟ್ಟಿದ್ದರು. ಕುಸಿದ ಗ್ಯಾರೇಜ್ ಸ್ಥಳಕ್ಕೆ ಭೇಟಿ ನೀಡಿ ಅಶೋಕ್ ತೆರಳಿದ್ದಾರೆ. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿಲ್ಲ.

ಹುಕ್ಕೇರಿಯ ಕಂಬಾರಗಲ್ಲಿಯಲ್ಲಿ ಅತಿ ಹೆಚ್ಚು ಹಾನಿ ಆಗಿತ್ತು. ಸಚಿವರು ನಮ್ಮ ಬಳಿ ಬರ್ತಾರೆ. ನಮ್ಮ ಕಷ್ಟಗಳನ್ನು ಆಲಿಸುತ್ತಾರೆ ಎಂದು ಕಾದು ಕುಳಿತಿದ್ದ ಜನರಿಗೆ ನಿರಾಸೆಯಾಗಿದೆ. ನಾನೂ ಕೂಡ ಪ್ರವಾಹದ ಸಮಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ ಎಂದು ಹೇಳಿಕೊಳ್ಳುವುದಕ್ಕಾಗಿ ಬಂದು ಹೋದಂತೆ ಬಂದು ಹೋಗಿದ್ದಾರೆ. R. ಅಶೋಕ್ ಭೇಟಿ ವ್ಯರ್ಥ ಎಂದು ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಅಶೋಕಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಉಮೇಶ ಕತ್ತಿ ಸಾಥ್ ನೀಡಿದ್ದರು.