ಆರೋಗ್ಯ ಇಲಾಖೆ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದುಬಿದ್ದ ಉ.ಕ. DC

|

Updated on: Jan 09, 2020 | 2:47 PM

ಕಾರವಾರ: ವಾರ್ತಾ ಇಲಾಖೆ ಕಾರ್ಯಕ್ರಮ ವೇಳೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕಾರವಾರ ನಗರದ ವಾರ್ತಾ ಇಲಾಖೆಯು ವಾರ್ತಾ ಸ್ಪಂದನ‌ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆರೋಗ್ಯ ಇಲಾಖೆ ವೈದ್ಯರ ಜೊತೆ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಸಿ ಡಾ ಹರೀಶ್ ಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಳಿತುಕೊಳ್ಳುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲ ಸಮಯದ ನಂತರ ಸುಧಾರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಪಾರ ಜನ ಪರ ಕಾಳಜಿಯ ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್‌ ಅವರು ಇತ್ತೀಚೆಗೆ ಉತ್ತರ ಕನ್ನಡ […]

ಆರೋಗ್ಯ ಇಲಾಖೆ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದುಬಿದ್ದ ಉ.ಕ. DC
Follow us on

ಕಾರವಾರ: ವಾರ್ತಾ ಇಲಾಖೆ ಕಾರ್ಯಕ್ರಮ ವೇಳೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕಾರವಾರ ನಗರದ ವಾರ್ತಾ ಇಲಾಖೆಯು ವಾರ್ತಾ ಸ್ಪಂದನ‌ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆರೋಗ್ಯ ಇಲಾಖೆ ವೈದ್ಯರ ಜೊತೆ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಸಿ ಡಾ ಹರೀಶ್ ಕುಮಾರ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕುಳಿತುಕೊಳ್ಳುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲ ಸಮಯದ ನಂತರ ಸುಧಾರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಪಾರ ಜನ ಪರ ಕಾಳಜಿಯ ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್‌ ಅವರು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಮೇದನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮವಾಸ್ತವ್ಯ ಕೈಗೊಂಡು ಗ್ರಾಮಸ್ಥರ ಅಳಲನ್ನು ಕೇಳಿದ್ದರು.

Published On - 1:44 pm, Thu, 9 January 20