
ಬೆಳಗಾವಿ: ಸವದತ್ತಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅವಾಂತರಗಳು ಸಹ ಸಂಭವಿಸುತ್ತಿವೆ. ಈ ನಡುವೆ ವರವಿಕೊಳ್ಳ ಜಲಪಾತದಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ವೈಭವ ಸೃಷ್ಟಿಯಾಗಿದೆ.
ಭಾರಿ ಪ್ರಮಾಣದ ಮಳೆ ನೀರಿನಿಂದಾಗಿ ಸುತ್ತಮುತ್ತ ರಸ್ತೆಗಳೇ ಕಾಣಿಸುತ್ತಿಲ್ಲ. ಜೋರಾದ ಗಾಳಿಗೆ ಜಲಪಾತದ ನೀರು ಚಿಮ್ಮುತ್ತಿದೆ. ಅಪಾಯದ ಮಧ್ಯೆಯೇ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಮಳೆ ಸಂದರ್ಭದಲ್ಲಿ ಈ ಜಲಪಾತ ನೋಡುವುದೇ ನಯನ ಮನೋಹರ.