ಹುಳಿಮಾವು ಬಳಿ ನೈಸ್ ರಸ್ತೆಯಲ್ಲಿ ಮಳೆಗೆ ಜಾರಿ.. ತರಕಾರಿ ಸಾಗಿಸ್ತಿದ್ದ ಲಾರಿ ಪಲ್ಟಿ
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಗರದ ಹಲವು ಕಡೆ ಭಾರಿ ಮಳೆಯಾಗಿದೆ. ಈ ಪರಿಣಾಮ ಅನಾಹುತಗಳು ಸಹ ಸಂಭವಿಸುತ್ತಿವೆ. ನೈಸ್ ರಸ್ತೆಯಲ್ಲಿ ಅಪಘಾತ ನಡೆದ ಸಮಯದಲ್ಲಿ ಜೋರಾಗಿ ಮಳೆಯಾಗಿತ್ತು. ರಸ್ತೆ ಪೂರ್ತಿ ನೀರಿನಿಂದ ತೊಯ್ದಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ನೆಲಕ್ಕೆ ಉರುಳಿದೆ. ಸದ್ಯ ಅಪಘಾತವಾದರೂ ಯಾವುದೇ ಸಮಸ್ಯೆಯಾಗಿಲ್ಲ. ಸ್ಥಳಕ್ಕೆ ಹುಳಿಮಾವು ಸಂಚಾರಿ […]
Follow us on
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಗರದ ಹಲವು ಕಡೆ ಭಾರಿ ಮಳೆಯಾಗಿದೆ. ಈ ಪರಿಣಾಮ ಅನಾಹುತಗಳು ಸಹ ಸಂಭವಿಸುತ್ತಿವೆ. ನೈಸ್ ರಸ್ತೆಯಲ್ಲಿ ಅಪಘಾತ ನಡೆದ ಸಮಯದಲ್ಲಿ ಜೋರಾಗಿ ಮಳೆಯಾಗಿತ್ತು. ರಸ್ತೆ ಪೂರ್ತಿ ನೀರಿನಿಂದ ತೊಯ್ದಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ನೆಲಕ್ಕೆ ಉರುಳಿದೆ. ಸದ್ಯ ಅಪಘಾತವಾದರೂ ಯಾವುದೇ ಸಮಸ್ಯೆಯಾಗಿಲ್ಲ. ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.