ಗಲ್ಲಿಗಳಲ್ಲಿ ತರಕಾರಿ ಮಾರುತ್ತಿದ್ದವನಿಗೆ ಕೊರೊನಾ, ತರಕಾರಿ ಕೊಂಡವರಲ್ಲಿ ಹೆಚ್ಚಾಯ್ತು ಆತಂಕ

| Updated By:

Updated on: Jul 26, 2020 | 3:51 PM

ಹಾವೇರಿ: ಕೊರೊನಾ ಅಟ್ಯಾಕ್ ಮಾಡಿದ್ದೇ ಮಾಡಿದ್ದು, ತರಕಾರಿ ಕೊಳ್ಳೋದಕ್ಕೂ ಜನ ಬೆಚ್ಚಿಬೀಳುವ ಸ್ಥಿತಿ ಎದುರಾಗಿದೆ. ಎಲ್ಲಿ ತಮಗೂ ಮಹಾಮಾರಿ ಅಟ್ಯಾಕ್ ಆಗಿಬಿಡುತ್ತೋ ಅನ್ನೋ ಭಯ ಕಾಡುತ್ತಿದೆ. ಹೀಗೆ ಇಲ್ಲೊಂದು ಗ್ರಾಮದಲ್ಲಿ ತರಕಾರಿ ಕೊಂಡವರಿಗೆ ಹಗಲು-ರಾತ್ರಿ ನಿದ್ದೆ ಬಾರದಾಗಿದೆ. ಅಷ್ಟಕ್ಕೂ ತರಕಾರಿ ವ್ಯಾಪಾರ ಮಾಡಿ ಹೋಗಿದ್ದವನಿಗೆ ಸದ್ಯ ಸೋಂಕು ವಕ್ಕರಿಸಿರುವುದು ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗಿದೆ. ತರಕಾರಿ ಕೊಂಡವರಿಗೆ ನಿದ್ದೆಯೇ ಬರ್ತಿಲ್ಲ! ಹಾವೇರಿಯನ್ನು ಹೆಮ್ಮಾರಿ ಕೊರೊನಾ ಬಿಟ್ಟುಬಿಡದೆ ಕಾಡ್ತಿದೆ. ಅದರಲ್ಲೂ ಜಿಲ್ಲಾಡಳಿತ ಭವನದಿಂದ ಕೂಗಳತೆ ದೂರದಲ್ಲಿರುವ ದೇವಗಿರಿಗೆ ಹೆಮ್ಮಾರಿ ಎಂಟ್ರಿ […]

ಗಲ್ಲಿಗಳಲ್ಲಿ ತರಕಾರಿ ಮಾರುತ್ತಿದ್ದವನಿಗೆ ಕೊರೊನಾ, ತರಕಾರಿ ಕೊಂಡವರಲ್ಲಿ ಹೆಚ್ಚಾಯ್ತು ಆತಂಕ
Follow us on

ಹಾವೇರಿ: ಕೊರೊನಾ ಅಟ್ಯಾಕ್ ಮಾಡಿದ್ದೇ ಮಾಡಿದ್ದು, ತರಕಾರಿ ಕೊಳ್ಳೋದಕ್ಕೂ ಜನ ಬೆಚ್ಚಿಬೀಳುವ ಸ್ಥಿತಿ ಎದುರಾಗಿದೆ. ಎಲ್ಲಿ ತಮಗೂ ಮಹಾಮಾರಿ ಅಟ್ಯಾಕ್ ಆಗಿಬಿಡುತ್ತೋ ಅನ್ನೋ ಭಯ ಕಾಡುತ್ತಿದೆ. ಹೀಗೆ ಇಲ್ಲೊಂದು ಗ್ರಾಮದಲ್ಲಿ ತರಕಾರಿ ಕೊಂಡವರಿಗೆ ಹಗಲು-ರಾತ್ರಿ ನಿದ್ದೆ ಬಾರದಾಗಿದೆ. ಅಷ್ಟಕ್ಕೂ ತರಕಾರಿ ವ್ಯಾಪಾರ ಮಾಡಿ ಹೋಗಿದ್ದವನಿಗೆ ಸದ್ಯ ಸೋಂಕು ವಕ್ಕರಿಸಿರುವುದು ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗಿದೆ.

ತರಕಾರಿ ಕೊಂಡವರಿಗೆ ನಿದ್ದೆಯೇ ಬರ್ತಿಲ್ಲ!
ಹಾವೇರಿಯನ್ನು ಹೆಮ್ಮಾರಿ ಕೊರೊನಾ ಬಿಟ್ಟುಬಿಡದೆ ಕಾಡ್ತಿದೆ. ಅದರಲ್ಲೂ ಜಿಲ್ಲಾಡಳಿತ ಭವನದಿಂದ ಕೂಗಳತೆ ದೂರದಲ್ಲಿರುವ ದೇವಗಿರಿಗೆ ಹೆಮ್ಮಾರಿ ಎಂಟ್ರಿ ಕೊಟ್ಟಿದೆ. ಗ್ರಾಮದ ಯಲ್ಲಮ್ಮನ ಗುಡಿ ಓಣಿ ನಿವಾಸಿಗೆ ಡೆಡ್ಲಿ ಸೋಂಕು ವಕ್ಕರಿಸಿದೆ. ತರಕಾರಿ ವ್ಯಾಪಾರ ಮಾಡುತ್ತಿದ್ದ ಈತ, ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ದೃಢಪಟ್ಟಿದೆ. ತರಕಾರಿ ವ್ಯಾಪಾರಿಗೆ ಸೋಂಕು ದೃಢಪಡ್ತಿದ್ದಂತೆ ಗ್ರಾಮಸ್ಥರಿಗೆ ಶಾಕ್ ಆಗಿದೆ.

ಸೋಂಕಿತ ಓಣಿ ಓಣಿ ತಿರುಗಾಡಿ ತರಕಾರಿ ಮಾರಾಟ ಮಾಡ್ತಿದ್ದ. ತಳ್ಳುವ ಗಾಡಿ ಮೂಲಕ ತರಕಾರಿ ಸೇಲ್ ಮಾಡ್ತಿದ್ದ. ಈಗ ತರಕಾರಿ ಮಾರಾಟ ಮಾಡ್ತಿದ್ದವನಿಗೆ ಕೊರೊನಾ ವಕ್ಕರಿಸಿದ್ದು, ಜನರಲ್ಲಿ ತಳಮಳ ಶುರು ಮಾಡಿದೆ. ಅದರಲ್ಲೂ ಸೋಂಕಿತನ ಬಳಿ ತರಕಾರಿ ಖರೀದಿಸಿದ್ದವರಿಗೆ ಒಳಗೊಳಗೆ ಹೆಮ್ಮಾರಿ ಭಯ ಕಾಡ್ತಿದೆ. ಈವರೆಗೂ ಗ್ರಾಮದಲ್ಲಿ ಒಂದೇ ಒಂದು ಪ್ರಕರಣ ಇರಲಿಲ್ಲ. ಈಗ ತರಕಾರಿ ವ್ಯಾಪಾರಿ ಮೂಲಕ ಹೆಮ್ಮಾರಿ ದೇವಗಿರಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ.

ಸಂಪರ್ಕಿತರ ಮೇಲೆ ಹದ್ದಿನ ಕಣ್ಣು!
ಸೋಂಕಿತ ತರಕಾರಿ ವ್ಯಾಪಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ತಿದ್ದಾನೆ. ಆತನ ಜತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಿದೆ. ಉಳಿದಂತೆ ಯಾಱರು ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗ್ತಿದೆ.

ಒಟ್ನಲ್ಲಿ ಕಂಟ್ರೋಲ್​ಗೆ ಸಿಗದ ಕೊರೊನಾ ದೇಶದ ಮೂಲೆ ಮೂಲೆಗೂ ಹಬ್ಬುತ್ತಿದೆ. ಅದರಲ್ಲೂ ಗ್ರಾಮಗಳಿಗೂ ಹೆಮ್ಮಾರಿಯ ಭಯ ಶುರುವಾಗಿದೆ. ಮೆಲ್ಲಗೆ ಹಳ್ಳಿಗಳಲ್ಲೂ ಹಬ್ಬುತ್ತಿರುವ ಈ ಡೆಡ್ಲಿ ಸೋಂಕು, ಅಪಾಯ ಮುನ್ಸೂಚನೆ ನೀಡುತ್ತಿದೆ. ಹೀಗಾಗಿ ಜನರು ತಪ್ಪದೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.

Published On - 8:01 am, Sun, 26 July 20