ಉದ್ಯಮಿ ಕೊಲ್ಲಲು ಸುಪಾರಿ ಪಡೆದಿದ್ದ ಇಬ್ಬರು ಕಿಲ್ಲರ್ಗಳ ಮೇಲೆ ಪೊಲೀಸ್ ಫೈರಿಂಗ್
[lazy-load-videos-and-sticky-control id=”pgVtlCuL2VA”] ಬೆಂಗಳೂರು: ಭಾನುವಾರದ ಬೆಳಂ ಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಇಬ್ಬರು ಸುಪಾರಿ ಕಿಲ್ಲರ್ಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಪಾರಿ ಕಿಲ್ಲರ್ಸ್‌ಗಳಾದ ಭರತ್, ಅರುಣ್ ಮೇಲೆ ಫೈರಿಂಗ್ ಆಗಿದೆ. ಜಮೀನು ವಿಚಾರಕ್ಕೆ ಉದ್ಯಮಿ ರಾಜಶೇಖರ್ ಕೊಲೆಗೆ ಸುಪಾರಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರತ್ ಮತ್ತು ಅರುಣ್ ಇಬ್ಬರೂ ಉದ್ಯಮಿಯನ್ನು ಕೊಲ್ಲಲು 10 ಲಕ್ಷ ರೂಪಾಯಿಗೆ ಸುಪಾರಿ ಪಡೆದಿದ್ದರು. ಒಂದರ ನಂತರ ಒಂದು ಒಟ್ಟು […]
[lazy-load-videos-and-sticky-control id=”pgVtlCuL2VA”]
ಬೆಂಗಳೂರು: ಭಾನುವಾರದ ಬೆಳಂ ಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಇಬ್ಬರು ಸುಪಾರಿ ಕಿಲ್ಲರ್ಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಪಾರಿ ಕಿಲ್ಲರ್ಸ್‌ಗಳಾದ ಭರತ್, ಅರುಣ್ ಮೇಲೆ ಫೈರಿಂಗ್ ಆಗಿದೆ.
ಜಮೀನು ವಿಚಾರಕ್ಕೆ ಉದ್ಯಮಿ ರಾಜಶೇಖರ್ ಕೊಲೆಗೆ ಸುಪಾರಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರತ್ ಮತ್ತು ಅರುಣ್ ಇಬ್ಬರೂ ಉದ್ಯಮಿಯನ್ನು ಕೊಲ್ಲಲು 10 ಲಕ್ಷ ರೂಪಾಯಿಗೆ ಸುಪಾರಿ ಪಡೆದಿದ್ದರು. ಒಂದರ ನಂತರ ಒಂದು ಒಟ್ಟು 3 ಕೊಲೆ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಹೀಗಾಗಿ ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್ ಶಿವಸ್ವಾಮಿ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
Published On - 7:26 am, Sun, 26 July 20