ಬೆಂಗಳೂರಲ್ಲಿ ಪಾರ್ಕಿಂಗ್ಗೆ ಮೀಸಲಾದ ಜಾಗದಲ್ಲಿ ನಿಲ್ಲಿಸಿದ ವಾಹನಗಳನ್ನೂ ಟೋ ಮಾಡಿಕೊಂಡು ಹೋಗಲಾಗುತ್ತಿದೆ
ಹಾಗೆ ನೋಡಿದರೆ, ಟೋ ಮಾಡುವ ಮೊದಲು ಪೊಲೀಸರು ಆ ವಾಹನದ ನಂಬರ್ ಕೂಗಿ ಇದು ಯಾರಿಗೆ ಸೇರಿದ್ದು ಅಂತ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಬೇಕು. ಯಾರೂ ಬಾರದ, ಪ್ರತಿಕ್ರಿಯೆ ನೀಡದ ಪಕ್ಷದಲ್ಲಿ ಮಾತ್ರ ವಾಹನವನ್ನು ಟೋ ಮಾಡುವಂತೆ ತಮ್ಮ ಟೋ ಸಿಬ್ಬಂದಿಗೆ ಸೂಚಿಸಬೇಕು.
ನಿಮ್ಮ ದ್ವಿಚಕ್ರ ವಾಹನ ಇಲ್ಲವೇ ಕಾರನ್ನು ಪಾರ್ಕಿಂಗ್ (parking) ಅಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದರೆ ಆ ಏರಿಯಾದ ಸಂಚಾರಿ ಪೊಲೀಸ್ ಠಾಣೆಯ ಟೋಯಿಂಗ್ ಸಿಬ್ಬಂದಿಯು ಪೊಲೀಸರ ನಿರ್ದೇಶನದ ಮೇರೆಗೆ ಅದನ್ನು ಟೋ (tow) ಮಾಡಿಕೊಂಡು ಸ್ಟೇಷನ್ ಒಯ್ಯುತ್ತಾರೆ. ಅದು ಕ್ರಮವೂ ಹೌದು. ವಿಷಯ ಗೊತ್ತಾದ ಮೇಲೆ ನೀವು ಸ್ಟೇಷನ್ ಗೆ ಹೋಗಿ ಜುಲ್ಮಾನೆ (penalty) ತೆತ್ತು ವಾಹನವನ್ನು ಬಿಡಿಸಿಕೊಳ್ಳಬೇಕು. ಪೊಲೀಸರು ನಿಮ್ಮ ವಾಹನವನ್ನು ಯಾವುದೋ ಓಪನ್ ಜಾಗದಲ್ಲಿ ನಿಲ್ಲಿಸಿರುತ್ತಾರೆ. ಯಾಕೆಂದರೆ ಬೆಂಗಳೂರಿನ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಯ ವಾಹನಗಳನ್ನೇ ಪಾರ್ಕ್ ಮಾಡಲು ಸ್ಥಳಾವಕಾಶ ಇರೋದಿಲ್ಲ. ಈ ವಿಡಿಯೋನಲ್ಲಿ ಇಲೆಕ್ಟ್ರಾನಿಕ್ ಸಿಟಿ (Electronic City) ಸಂಚಾರಿ ಪೊಲೀಸ್ ಠಾಣೆಯ ಟೋಯಿಂಗ್ ಸಿಬ್ಬಂದಿ ನಡೆಸುತ್ತಿರುವ ವಿವೇಕಹೀನ ಕೆಲಸವನ್ನು ತೋರಿಸುತ್ತಿದ್ದೇವೆ. ಇಲ್ಲಿನ ನೀಲಾದ್ರಿ ರಸ್ತೆಯಲ್ಲಿರುವ ಹೈಪರ್ ಮಾರ್ಕೆಟ್ ಮುಂದೆ ಪಾರ್ಕಿಂಗ್ ಗೆ ಮೀಸಲಾಗಿರುವ ಸ್ಥಳದಿಂದ ದ್ವಿಚಕ್ರ ವಾಹನಗಳನ್ನು ಅವರು ತೆಗೆದುಕೊಂಡು ಹೋಗುತ್ತಿದ್ದಾರೆ.
ಹಾಗೆ ನೋಡಿದರೆ, ಟೋ ಮಾಡುವ ಮೊದಲು ಪೊಲೀಸರು ಆ ವಾಹನದ ನಂಬರ್ ಕೂಗಿ ಇದು ಯಾರಿಗೆ ಸೇರಿದ್ದು ಅಂತ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಬೇಕು. ಯಾರೂ ಬಾರದ, ಪ್ರತಿಕ್ರಿಯೆ ನೀಡದ ಪಕ್ಷದಲ್ಲಿ ಮಾತ್ರ ವಾಹನವನ್ನು ಟೋ ಮಾಡುವಂತೆ ತಮ್ಮ ಟೋ ಸಿಬ್ಬಂದಿಗೆ ಸೂಚಿಸಬೇಕು.
ಆದರೆ ಇಲ್ಲಿ ಅಂಥದ್ದೇನೂ ನಡೆಯುತ್ತಿಲ್ಲ. ಟ್ರಾಫಿಕ್ ಪೊಲೀಸರು ಸೀನಲ್ಲೇ ಇಲ್ಲ ಮಾರಾಯ್ರೇ. ಕೇವಲ ಟೋಯಿಂಗ್ ಸಿಬ್ಬಂದಿ ಮಾತ್ರ ಅವಸವರದಲ್ಲಿ ಬೈಕ್ಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ.
ಟೋಯಿಂಗ್ ಒಂದು ಮಾಫಿಯಾ ಆಗಿ ಮಾರ್ಪಟ್ಟಿದೆ. ನಿಮ್ಮ ವಾಹನ ಟೋ ಆಗಿ ಹೋಗಿದ್ದರೆ ಸ್ಟೇಷನ್ ಹತ್ತಿರ ಈ ಸಿಬ್ಬಂದಿಯೇ ಡೀಲಿಗಳಿಯುತ್ತಾರೆ. ಜುಲ್ಮಾನೆ ರೂ. 500 ಇದ್ದರೆ ರೂ. 300 ರಲ್ಲಿ ಸೆಟ್ಲ್ ಮಾಡಿಸುತ್ತೇವೆ ಅಂತ ಹೇಳುತ್ತಾರೆ. ನೀವು ರೂ. 200 ಉಳಿಯುತಲ್ಲ ಅಂತ ಅವರಿಗೆ ರೂ. 300 ಕೊಟ್ಟರೆ ಅದರಲ್ಲಿ ಅರ್ಧ ಭಾಗ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೆ ಹೋಗುತ್ತದೆ. ಉಳಿದರ್ಧವನ್ನು ಟೋಯಿಂಗ್ ಸಿಬ್ಬಂದಿ ಹಂಚಿಕೊಳ್ಳುತ್ತಾರೆ.
ಕೆಲವಷ್ಟೇ ಜನ ಮಾತ್ರ ಸರಿಯಾದ ದಂಡ ತೆತ್ತು ಅದಕ್ಕೆ ರಸೀತಿ ಪಡೆಯುತ್ತಾರೆ.
ಇದನ್ನೂ ಓದಿ: ಒಂಟೆ ಏರಿ ಹವಾಮಾನ ವರದಿ ಮಾಡಿದ ಪಾಕಿಸ್ತಾನ ಪತ್ರಕರ್ತ ಚಾಂದ್ ನವಾಬ್; ವಿಡಿಯೋ ವೈರಲ್