ಕಲಬುರಗಿ: ಬಾಡೂಟ ಸವಿಯುವ ಭರದಲ್ಲಿದ್ದ ಪಶುವೈದ್ಯರು ಸಾಮಾಜಿಕ ಅಂತರವನ್ನೇ ಮರೆತ ಘಟನೆ ಕಲಬುರಗಿ ನಗರದ ಪಶು ಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಕಂಡುಬಂದಿದೆ. ಪಶುಸಂಗೋಪನಾ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪಶು ವೈದ್ಯರ ತಾಂತ್ರಿಕ ಸಮ್ಮೇಳನದಲ್ಲಿ ಈ ಘಟನೆ ನಡೆದಿದೆ.
ಇಲಾಖೆ ಕರೆದಿದ್ದ ಸಭೆಯಲ್ಲಿ ನೂರಾರು ಪಶು ವೈದ್ಯರು ಭಾಗಿಯಾಗಿದ್ದರು. ಈ ಮಧ್ಯೆ ಸಮ್ಮೇಳನದಲ್ಲಿ ಸಿದ್ಧಪಡಿಸಲಾಗಿದ್ದ ಚಿಕನ್ ಬಿರಿಯಾನಿ ಭೋಜನ ಸವಿಯಲು ಇವರೆಲ್ಲರು ಮುಂದಾಗಿದ್ದರು. ಭೂರಿ ಭೋಜನ ಸವಿಯುವ ಭರದಲ್ಲಿ ಸಾಮಾಜಿಕ ಅಂತರವನ್ನೆ ಕಾದುಕೊಳ್ಳಲಿಲ್ಲ. ಸರ್ಕಾರಿ ಇಲಾಖೆಯ ಕಾರ್ಯಕ್ರಮದಲ್ಲಿ ಇಂಥ ಲೋಪ ಕಂಡುಬಂದಿದ್ದು ನಿಜಕ್ಕೂ ವಿಪರ್ಯಾಸ. ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನೇ ಗಾಳಿಗೆ ತೂರಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಭಾಸವಾಗುತ್ತಿದೆ.
Published On - 4:29 pm, Wed, 10 June 20