ಕೆಲಸಕ್ಕೆ ಅರ್ಜಿ ಹಾಕಿದ್ದೆ ಅಷ್ಟೇ! ಆದ್ರೆ ನನ್ನ ಹೆಸರಲ್ಲಿ 1 ಕೋಟಿ ಸಂಬಳ ಪಡೆದವರು ಯಾರೋ!?
ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ […]
ಲಕ್ನೋ: ಉತ್ತರ ಪ್ರದೇಶದ ಅನಾಮಿಕ ಶುಕ್ಲಾ ಹೆಸರಿನಲ್ಲಿ ನಡೆದಿದ್ದ ಒಂದು ಕೋಟಿ ಸಂಬಳದ ಹಗರಣ ಟ್ವಿಸ್ಟ್ ಪಡೆದುಕೊಂಡಿದೆ. 13 ಶಾಲೆಗಳಲ್ಲಿ ಅನಾಮಿಕ ಶುಕ್ಲಾ ಪದವಿ ದಾಖಲಾತಿ ಸಲ್ಲಿಸಿ ಉದ್ಯೋಗಕ್ಕೆ ಸೇರಿ ಒಂದು ಕೋಟಿ ಸಂಬಳ ಪಡೆಯಲಾಗಿತ್ತು. ಒಬ್ಬರೇ ಶಿಕ್ಷಕಿ ಏಕಕಾಲಕ್ಕೆ 13 ಶಾಲೆಗಳಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? 13 ತಿಂಗಳಲ್ಲಿ ಒಂದು ಕೋಟಿ ಸಂಬಳ ಪಡೆದಿದ್ದು ಹೇಗೆ ? ಈ ಬಗ್ಗೆ ತನಿಖೆಗೆ ಶಿಕ್ಷಣ ಇಲಾಖೆ ಆದೇಶ ನೀಡಿತ್ತು.
ಅಸಲಿ ಅನಾಮಿಕ ಶುಕ್ಲಾ ಈಗ ಗೊಂಡ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎದುರು ಪ್ರತ್ಯಕ್ಷವಾಗಿದ್ದು, ತನ್ನ ದಾಖಲೆಗಳನ್ನು ಅಧಿಕಾರಿಗೆ ಸಲ್ಲಿಸಿದ್ದಾರೆ. ತಾನು ನಿರುದ್ಯೋಗಿ, ಸರ್ಕಾರಿ ನೌಕರಿಗೆ ಸೇರಿಲ್ಲ ಎಂದಿದ್ದಾರೆ. ತಾನು ಗೃಹಿಣಿಯಾಗಿದ್ದು, ಶಿಕ್ಷಕಿ ಹುದ್ದೆಗೆ 5 ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ ಕೌನ್ಸ್ಲಿಂಗ್ಗೆ ಹಾಜರಾಗಿಲ್ಲ. ಕೆಲಸಕ್ಕೂ ಸೇರಿಲ್ಲ. ತನ್ನ ಶೈಕ್ಷಣಿಕ ದಾಖಲೆಗಳನ್ನು ಬೇರೆಯವರು ಫೋರ್ಜರಿ ನಡೆಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ಅನಾಮಿಕ ಶುಕ್ಲಾ ದೂರು ನೀಡಿದ್ದಾರೆ.