AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಮಲದಲ್ಲಿ ಇಂದಿನಿಂದ ಸರ್ವ ದರ್ಶನ ಆರಂಭ

ಹೈದರಾಬಾದ್: ಕೊರೊನಾ ಲಾಕ್‍ಡೌನ್​ನಿಂದಾಗಿ ಬಂದ್ ಆಗಿದ್ದ ಪ್ರಸಿದ್ಧ ಹಾಗೂ ಶ್ರೀಮಂತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11 ರಿಂದ ಭಕ್ತರಿಗೆ ಸರ್ವ ದರ್ಶನ ಆರಂಭವಾಗಲಿದೆ. ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಇಂದಿನಿಂದ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಸಿಗಲಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನಕ್ಕೆ 6 ಸಾವಿರ ಮಂದಿಗೆ ಮಾತ್ರ ದೇವರ ದರ್ಶನ ಭಾಗ್ಯ. ಜೂನ್ 8ರಿಂದ ತಿರುಮಲದಲ್ಲಿ ಪ್ರಾರಂಭಿಕ ದರ್ಶನ ಕಾರ್ಯವನ್ನು ಆರಂಭಿ, ಮೊದಲು ಸ್ಥಳೀಯರಿಗೆ ಹಾಗೂ […]

ತಿರುಮಲದಲ್ಲಿ ಇಂದಿನಿಂದ ಸರ್ವ ದರ್ಶನ ಆರಂಭ
ಆಯೇಷಾ ಬಾನು
|

Updated on:Jun 11, 2020 | 4:03 PM

Share

ಹೈದರಾಬಾದ್: ಕೊರೊನಾ ಲಾಕ್‍ಡೌನ್​ನಿಂದಾಗಿ ಬಂದ್ ಆಗಿದ್ದ ಪ್ರಸಿದ್ಧ ಹಾಗೂ ಶ್ರೀಮಂತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11 ರಿಂದ ಭಕ್ತರಿಗೆ ಸರ್ವ ದರ್ಶನ ಆರಂಭವಾಗಲಿದೆ. ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಇಂದಿನಿಂದ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಸಿಗಲಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನಕ್ಕೆ 6 ಸಾವಿರ ಮಂದಿಗೆ ಮಾತ್ರ ದೇವರ ದರ್ಶನ ಭಾಗ್ಯ.

ಜೂನ್ 8ರಿಂದ ತಿರುಮಲದಲ್ಲಿ ಪ್ರಾರಂಭಿಕ ದರ್ಶನ ಕಾರ್ಯವನ್ನು ಆರಂಭಿ, ಮೊದಲು ಸ್ಥಳೀಯರಿಗೆ ಹಾಗೂ ಟಿಟಿಡಿ ಸಿಬ್ಬಂದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿತ್ತು. ಟಿಟಿಡಿ ಉದ್ಯೋಗಿಗಳು, ಸ್ಥಳೀಯ ಭಕ್ತರ‌ ಟ್ರಯಲ್‌ ರನ್ ಯಶಸ್ಸಿನಿಂದಾಗಿ ಇಂದಿನಿಂದ ಟಿಟಿಡಿ ಸಮಿತಿ ಸರ್ವ ದರ್ಶನ ಸೇವೆಯನ್ನು ಆರಂಭಿಸಿದೆ. ಆನ್‍ಲೈನ್‍ನಲ್ಲಿ ದರ್ಶನದ ಟಿಕೆಟ್ ಸೇವೆಗಳು ಬುಕ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಲಾಗಿದೆ.

ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡಲಾಗುತ್ತದೆ. ಕೇಂದ್ರ ಸೂಚನೆ ಅನ್ವಯ 10 ವರ್ಷಕ್ಕಿಂತ ಕೆಳಗಿನ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವಿವರಿಸಿದ್ದಾರೆ.

Published On - 8:13 am, Thu, 11 June 20