ಟಿಶ್ಯೂ ಪೇಪರ್ ಮೇಲೆ ಕೃಷ್ಣನ ಫೋಟೋ ಪ್ರಿಂಟ್ ಮಾಡುತ್ತಿದ್ದ ಟ್ರೇಡರ್ಸ್ ಮೇಲೆ ವಿಎಚ್.ಪಿ ದಾಳಿ

ಟಿಶ್ಯೂ ಪೇಪರ್ ಮೇಲೆ ಕೃಷ್ಣನ ಫೋಟೋ ಪ್ರಿಂಟ್ ಮಾಡುತ್ತಿದ್ದ ರಾಜ್ ಟ್ರೇಡರ್ಸ್ ಮೇಲೆ ಇಂದು (ಅ.19) ವಿಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

ಟಿಶ್ಯೂ ಪೇಪರ್ ಮೇಲೆ ಕೃಷ್ಣನ ಫೋಟೋ ಪ್ರಿಂಟ್ ಮಾಡುತ್ತಿದ್ದ ಟ್ರೇಡರ್ಸ್ ಮೇಲೆ ವಿಎಚ್.ಪಿ ದಾಳಿ
ರಾಜ್ ಟ್ರೇಡರ್ಸ್ ಮೇಲೆ ವಿಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರ ದಾಳಿ
Updated By: ವಿವೇಕ ಬಿರಾದಾರ

Updated on: Oct 19, 2022 | 10:22 PM

ಗದಗ: ಟಿಶ್ಯೂ ಪೇಪರ್ ಮೇಲೆ ಕೃಷ್ಣನ ಫೋಟೋ ಪ್ರಿಂಟ್ ಮಾಡುತ್ತಿದ್ದ ರಾಜ್ ಟ್ರೇಡರ್ಸ್ ಮೇಲೆ ಇಂದು (ಅ.19) ವಿಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಲವು ಹೋಟೆಲ್​ಗಳಲ್ಲಿ ಕೃಷ್ಣನ ಪೋಟೋ ಇರುವ ಟಿಶ್ಯೂ ಪೇಪರ್​ಗಳು ಗ್ರಾಹಕರಿಗೆ ನೀಡಲಾಗುತ್ತಿದೆ. ಇದನ್ನು ಗಮನಿಸಿದ ವಿಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಟಿಶ್ಯೂ ಪೇಪರ್ ಎಲ್ಲಿಂದ ಸರಬರಾಜು ಆಗುತ್ತಿದೆ ಎಂದು ಪತ್ತೆ ಹಚ್ಚಿದ್ದಾರೆ. ಬಳಿಕ ಬಸವೇಶ್ವರ ಸರ್ಕಲ್ ಬಳಿಯ ಹೋಲಸೆಲ್ ಮಾರಾಟಗಾರ ರಾಜ್ ಟ್ರೇಡರ್ಸ್ ಮೇಲೆ ದಾಳಿ ಮಾಡಿದ್ದಾರೆ.

ರಾಜ್ ಟ್ರೇಡರ್ಸ್ ಮೇಲೆ ದಾಳಿ ಮಾಡಿದಾಗ ಅಪಾರ ಪ್ರಮಾಣದ ಕೃಷ್ಣನ ಫೋಟೋ ಇರುವ ಟಿಶ್ಯೂ ಪೇಪರ್ ಪತ್ತೆಯಾಗಿದೆ. ಇದನ್ನು ಕಂಡ ವಿಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಮಾಲೀಕ ಇಂದ್ರಮಲ್ಲ ಜೈನ್​ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಒತ್ತಾಯಿಸಿದ್ದು, ಹಿಂದೂ ದೇವತೆಗಳಿಗೆ ಅವಮಾನ ಮಾಡಲಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ರಾಜ್ ಟ್ರೇಡರ್ಸ್ ಮಾಲೀಕ ಇಂದ್ರಮಲ್ಲ ಮಾತನಾಡಿ ಲಾಟ್​​ನಲ್ಲಿ ತರಿಸಿದ್ದೇವೆ ನಾನು ಕೃಷ್ಣನ ಫೋಟೋ ಇದ್ದಿದ್ದು ನೋಡಿಲ್ಲ. ಈಗ ಇವರು ಬಂದ ಮೇಲೆ ಗೋತ್ತಾಗಿದೆ. ಬೆಂಗಳೂರಿನಿಂದ ತರಿಸಲಾಗಿದೆ. ನಮ್ಮದೇನು ತಪ್ಪಿಲ್ಲ ಅಂತ ಕ್ಷಮೆ ಕೇಳಿದ್ದಾನೆ. ಸ್ಥಳಕ್ಕೆ ಶಹರ ಪೊಲೀಸರು ಭೇಟಿ ನೀಡಿ ಅಂಗಡಿ ಬೀಗ ಹಾಕಿಸಿ‌ ಮಾಲೀಕ್ ಇಂದ್ರಮಲ್ಲನ್ನು ಠಾಣೆಗೆ ಕರೆದ್ಯೊಯ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.