ಬೆಂಗಳೂರು: ಪೋಷಕರಿಂದ ಕಡ್ಡಾಯವಾಗಿ ಶಾಲಾ ಫೀಸ್ ಪಡೆಯುವಂತಿಲ್ಲಾ ಅಂತಾ ಈ ಹಿಂದೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಆದರೆ, ನಗರದ ಕೆಲವು ಶಾಲೆಗಳು ಈ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದೆ. ಇವುಗಳಲ್ಲಿ ವಿಬ್‌ಗಯಾರ್ ಶಾಲೆ ಕೂಡ ಒಂದು.
ಸರ್ಕಾರದ ಆದೇಶ ಲೆಕ್ಕಿಸದ ಶಾಲೆಯ ಆಡಳಿತ ಮಂಡಳಿ ಪೂರ್ತಿ ಶುಲ್ಕ ಪಾವತಿಸಿ ಇಲ್ಲದಿದ್ದರೆ ಮಕ್ಕಳ ಅಡ್ಮಿಷನ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಗರದ ಹೊರಮಾವು ಬಳಿಯಿರುವ ವಿಬ್‌ಗಯಾರ್ ಶಾಲಾಡಳಿತದಿಂದ ಪೋಷಕರಿಗೆ ಕರೆಮಾಡಿ ಒತ್ತಡ ಹೇರುತ್ತಿದ್ದಾರೆ. ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಬೇಕಾದ್ರೂ ಫೀಸ್ ಕಟ್ಟಲೇಬೇಕು ಎಂದು ಸಹ ಹೇಳಿದೆ.