ಉದ್ಘಾಟನೆಯಾದ ನಾಲ್ಕೇ ದಿನದಲ್ಲಿ ಒಡೆದುಹೋದ ಹೆದ್ದಾರಿ ಪೈಪ್‌ಲೈನ್, ಎಲ್ಲಿ?
ದಾವಣಗೆರೆ: ಕೆರೆ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುವ ದೃಶ್ಯ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಂಡುಬಂದಿತು. ಹರಿಹರ ದಾವಣಗೆರೆ ಮಾರ್ಗ ಮಧ್ಯೆ ಇರುವ ಹೆದ್ದಾರಿಯಲ್ಲಿ ಪೈಪ್‌ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿದ್ದ ದೃಶ್ಯವು ಹತ್ತಾರು ಕಿ.ಮಿ ದೂರದವರೆಗೂ ಕಾಣಸಿಗುತ್ತಿತ್ತು. ತುಂಗಭದ್ರಾ ನದಿಯಿಂದ ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಭಾಗವಾಗಿದ್ದ ಈ ಪೈಪಲೈನ್ಗೆ ಇದೇ ತಿಂಗಳ 22 ರಂದು ಚಾಲನೆ ಸಿಕ್ಕಿತ್ತು. ಕಳೆದ ಹತ್ತು ವರ್ಷಗಳ […]
ದಾವಣಗೆರೆ: ಕೆರೆ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುವ ದೃಶ್ಯ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಂಡುಬಂದಿತು. ಹರಿಹರ ದಾವಣಗೆರೆ ಮಾರ್ಗ ಮಧ್ಯೆ ಇರುವ ಹೆದ್ದಾರಿಯಲ್ಲಿ ಪೈಪ್‌ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿದ್ದ ದೃಶ್ಯವು ಹತ್ತಾರು ಕಿ.ಮಿ ದೂರದವರೆಗೂ ಕಾಣಸಿಗುತ್ತಿತ್ತು.
ತುಂಗಭದ್ರಾ ನದಿಯಿಂದ ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಭಾಗವಾಗಿದ್ದ ಈ ಪೈಪಲೈನ್ಗೆ ಇದೇ ತಿಂಗಳ 22 ರಂದು ಚಾಲನೆ ಸಿಕ್ಕಿತ್ತು. ಕಳೆದ ಹತ್ತು ವರ್ಷಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಇತ್ತೀಚೆಗಷ್ಟೇ ಮುಗಿದಿತ್ತು ಎಂದು ತಿಳಿದುಬಂದಿದೆ. ಉದ್ಘಾಟನೆಯಾಗಿ ಕೇವಲ ನಾಲ್ಕು ದಿನಗಳಲ್ಲಿ ಪೈಪ್‌ಲೈನ್ ಒಡೆದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 11:39 am, Fri, 26 June 20