AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ದಕ್ಷಿಣದಲ್ಲಿ ಎಚ್ಚರ ಎಚ್ಚರಾ! ಶರವೇಗದಲ್ಲಿ ಹರಡ್ತಿದೆ ಕೊರೊನಾ.. ಕಾರಣ ಏನು?

ಬೆಂಗಳೂರು: ದಕ್ಷಿಣ ವಲಯದಲ್ಲಿ ಶರವೇಗದಲ್ಲಿ ಹರಡ್ತಿದೆ ಕಿಲ್ಲರ್ ಕೊರೊನಾ. ಇಷ್ಟು ದಿನ ತಣ್ಣಗಿದ್ದ ಸೌತ್ ಜೋನ್ ಈಗ ರೆಡ್ ಜೋನ್ ಆಗಿ ಪರಿವರ್ತನೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೂನ್ 7ರ ತನಕ ಕೇವಲ 25 ಕೇಸ್​ಗಳು ಇದ್ದ ಕಡೆ ಇದೀಗ ಜೂನ್ 25 ರ ಅಂದರೆ ನಿನ್ನೆಯವರೆಗೆ 541 ಕೊರೊನಾ ಕೇಸ್​ಗಳು ದಾಖಲಾಗಿವೆ. ದಕ್ಷಿಣದಲ್ಲಿ ಹೆಜ್ಜೆ ಹೆಜ್ಜೆಗೂ ಸೋಂಕು ತಗುಲುವ ಭೀತಿ ಹೀಗಾಗಿ, ಬೆಂಗಳೂರು ದಕ್ಷಿಣದಲ್ಲಿ ಹೆಜ್ಜೆ ಹೆಜ್ಜೆಗೂ ಸೋಂಕು ತಗಲುವ ಭೀತಿ ಶುರುವಾಗಿದೆ. ಈ ಮಧ್ಯೆ […]

ಬೆಂಗಳೂರು ದಕ್ಷಿಣದಲ್ಲಿ ಎಚ್ಚರ ಎಚ್ಚರಾ! ಶರವೇಗದಲ್ಲಿ ಹರಡ್ತಿದೆ ಕೊರೊನಾ.. ಕಾರಣ ಏನು?
KUSHAL V
| Updated By: ಸಾಧು ಶ್ರೀನಾಥ್​|

Updated on:Jun 26, 2020 | 1:03 PM

Share

ಬೆಂಗಳೂರು: ದಕ್ಷಿಣ ವಲಯದಲ್ಲಿ ಶರವೇಗದಲ್ಲಿ ಹರಡ್ತಿದೆ ಕಿಲ್ಲರ್ ಕೊರೊನಾ. ಇಷ್ಟು ದಿನ ತಣ್ಣಗಿದ್ದ ಸೌತ್ ಜೋನ್ ಈಗ ರೆಡ್ ಜೋನ್ ಆಗಿ ಪರಿವರ್ತನೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೂನ್ 7ರ ತನಕ ಕೇವಲ 25 ಕೇಸ್​ಗಳು ಇದ್ದ ಕಡೆ ಇದೀಗ ಜೂನ್ 25 ರ ಅಂದರೆ ನಿನ್ನೆಯವರೆಗೆ 541 ಕೊರೊನಾ ಕೇಸ್​ಗಳು ದಾಖಲಾಗಿವೆ.

ದಕ್ಷಿಣದಲ್ಲಿ ಹೆಜ್ಜೆ ಹೆಜ್ಜೆಗೂ ಸೋಂಕು ತಗುಲುವ ಭೀತಿ ಹೀಗಾಗಿ, ಬೆಂಗಳೂರು ದಕ್ಷಿಣದಲ್ಲಿ ಹೆಜ್ಜೆ ಹೆಜ್ಜೆಗೂ ಸೋಂಕು ತಗಲುವ ಭೀತಿ ಶುರುವಾಗಿದೆ. ಈ ಮಧ್ಯೆ ವಲಯದಕ್ಕೆ ಸೇರಿರುವ ಚಿಕ್ಕಪೇಟೆ ಕೊರೊನಾ ಸೋಂಕಿನ ಅಧಿಕೇಂದ್ರ ಆಗಿಬಿಟ್ಟಿದೆ. ಇತ್ತ ಕಲಾಸಿಪಾಳ್ಯದಲ್ಲೂ ಕೊರೊನಾ ಆರ್ಭಟ ಹೆಚ್ಚಾಗಿದೆ. ಜೊತೆಗೆ ಬಸವನಗುಡಿ, ಬನಶಂಕರಿ, ಕುಮಾರಸ್ವಾಮಿ ‌ಲೇಔಟ್, ಬಿಟಿಎಂ ಲೇಔಟ್, ಗುರಪ್ಪನಪಾಳ್ಯ, ಲಕ್ಕಸಂದ್ರ, ಪಾರ್ವತಿಪುರಗಳಿಂದ ನಿತ್ಯವೂ ಪಾಸಿಟಿವ್ ಕೇಸ್​ಗಳು ವರಿದಿಯಾಗುತ್ತಿವೆ.

ಇದರಲ್ಲಿ ಬಹುತೇಕ ಮಂದಿ ಚಿಕ್ಕಪೇಟೆ ಹಾಗೂ ಕಲಾಸಿಪಾಳ್ಯಕ್ಕೆ ಹೋಗಿ ಬಂದವರೇ ಅನ್ನೋದು ಗಮನಾರ್ಹ. ಜೊತೆಗೆ ರಾಗಿಗುಡ್ಡ, ಪಾರ್ವತಿಪುರ, ಸೋಮೇಶ್ವರ ಕಾಲೊನಿ ಹಾಗೂ ಗುಲ್ಬರ್ಗ ಕಾಲೋನಿಯ ಸ್ಲಂಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದು ಕೇಸ್ ಹೆಚ್ಚಾಗಲು ಇದು ಕೂಡ ಕಾರಣ ಎಂದು ತಿಳಿದುಬಂದಿದೆ.

ಆಸ್ಪತ್ರೆಗಳಿಗೂ ಕೊರೊನಾ ಕಂಟಕ ಇತ್ತ ದಕ್ಷಿಣ ವಲಯದ ಆಸ್ಪತ್ರೆಗಳಲ್ಲೂ ಸೋಂಕಿನ ಕಾಟ ಎದುರಾಗಿದೆ. ಕಿಮ್ಸ್ ಆಸ್ಪತ್ರೆಯ ನಾಲ್ಕೈದು ವೈದ್ಯರಿಗೆ ಸೋಂಕು‌ ತಗುಲಿದ್ದರೆ ಇತ್ತ ಜಯದೇವ ಆಸ್ಪತ್ರೆಯಲ್ಲೂ ವೈದ್ಯರು ಸೇರಿದಂತೆ ಕೆಲವು ಸಿಬ್ಬಂದಿಗೂ ಪಾಸಿಟಿವ್ ಬಂದಿದೆ. ಹಾಗಾಗಿ ಸದ್ಯ ಹೊರ ರೋಗಿಗಳ ವಿಭಾಗವನ್ನ ನಾಲ್ಕು ದಿನಗಳ ಮಟ್ಟಿಗೆ ಬಂದ್​ ಮಾಡಲಾಗಿದೆ.

ಅತ್ತ ನಿಮ್ಹಾನ್ಸ್​ನಲ್ಲೂ ಕೊರೊನಾ ಆರ್ಭಟ ಮುಂದುವರಿದಿದ್ದು ICU ಕ್ಲೋಸ್ ಮಾಡಲಾಗಿದೆ. ಇದರಿಂದ ನಗರದ ದಕ್ಷಿಣ ವಲಯದಲ್ಲಿ ಕೊರೊನಾ ಸಮುದಾಯ ಪ್ರಸರಣದ ಹಂತಕ್ಕೆ ಕಾಲಿಟ್ಟಿದ್ಯಾ ಅನ್ನೋ ಆತಂಕ ಎಲ್ಲರಲ್ಲಿ ಮನೆಮಾಡಿದೆ.

Published On - 12:50 pm, Fri, 26 June 20