AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಶಂಕಿತ ಆದ ಎಸ್ಕೇಪ್​ ಮಾಂತ್ರಿಕ, ಒಂದೇ ದಿನದಲ್ಲಿ 2 ಬಾರಿ ಪರಾರಿಗೆ ಯತ್ನ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆಯಲ್ಲಿ ಕೋವಿಡ್ ಪರೀಕ್ಷೆಗೆ ಕರೆತರುವ ವೇಳೆ ಶಂಕಿತನೊಬ್ಬ ಎರಡು ಬಾರಿ ಪರಾರಿಯಾಗಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳ ಹಿಂದೆ ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯಕ್ರಿಯೆಯಲ್ಲಿ 150 ಜನ ಭಾಗಿಯಾಗಿದ್ದರು. ಹಾಗಾಗಿ, ಇವರೆಲ್ಲರನ್ನ ಪತ್ತೆಹಚ್ಚಿ ಕೋವಿಡ್​ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳು ಮುಂದಾದರು. ಹೀಗಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು THO ಮಂಜುನಾಥ್ ಪರೀಕ್ಷೆಗಾಗಿ ಕೋವಿಡ್​ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಶಂಕಿತ ಆಸ್ವತ್ರೆಯಲ್ಲಿ ಸಿಬ್ಬಂದಿಯನ್ನ ತಳ್ಳಿ ಎಸ್ಕೇಪ್ ಆಗಿ ಓಡಿಹೋದ.  ಹೀಗಾಗಿ, […]

ಕೊರೊನಾ ಶಂಕಿತ ಆದ ಎಸ್ಕೇಪ್​ ಮಾಂತ್ರಿಕ, ಒಂದೇ ದಿನದಲ್ಲಿ 2 ಬಾರಿ ಪರಾರಿಗೆ ಯತ್ನ
KUSHAL V
|

Updated on:Jun 26, 2020 | 10:13 AM

Share

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆಯಲ್ಲಿ ಕೋವಿಡ್ ಪರೀಕ್ಷೆಗೆ ಕರೆತರುವ ವೇಳೆ ಶಂಕಿತನೊಬ್ಬ ಎರಡು ಬಾರಿ ಪರಾರಿಯಾಗಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಕೆಲವು ದಿನಗಳ ಹಿಂದೆ ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯಕ್ರಿಯೆಯಲ್ಲಿ 150 ಜನ ಭಾಗಿಯಾಗಿದ್ದರು. ಹಾಗಾಗಿ, ಇವರೆಲ್ಲರನ್ನ ಪತ್ತೆಹಚ್ಚಿ ಕೋವಿಡ್​ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳು ಮುಂದಾದರು. ಹೀಗಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು THO ಮಂಜುನಾಥ್ ಪರೀಕ್ಷೆಗಾಗಿ ಕೋವಿಡ್​ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಶಂಕಿತ ಆಸ್ವತ್ರೆಯಲ್ಲಿ ಸಿಬ್ಬಂದಿಯನ್ನ ತಳ್ಳಿ ಎಸ್ಕೇಪ್ ಆಗಿ ಓಡಿಹೋದ.  ಹೀಗಾಗಿ, ದಿನವೆಲ್ಲಾ ಹುಡುಕಾಡಿದ ಪೊಲೀಸರು ಮತ್ತು ಅಧಿಕಾರಿಗಳು ಕೊನೆಗೂ ಆತನನ್ನು ಪತ್ತೆಹಚ್ಚಿ ಌಂಬುಲೆನ್ಸ್​ನಲ್ಲಿ ವಾಪಸ್ ಕರೆತರುತ್ತಿದ್ದರು.

ಌಂಬುಲೆನ್ಸ್​ನಿಂದ ಎರಡನೇ ಬಾರಿ ಎಸ್ಕೇಪ್​..! ಆದ್ರೆ ಌಂಬುಲೆನ್ಸ್​ನಲ್ಲಿ ಆತನನ್ನ ಆಸ್ಪತ್ರೆಗೆ ಕರೆತರುವ ವೇಳೆ ಟ್ರಾಫಿಕ್​ನಲ್ಲಿ ವಾಹನ ನಿಲ್ಲಿಸಿದ್ದಾಗ ಮತ್ತೊಮ್ಮೆ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಸ್ಥಳೀಯರ ಸಹಾಯದಿಂದ ಶಂಕಿತನನ್ನ ಸುಮಾರು ನಾಲ್ಕು ಕಿ.ಮಿ ಚೇಸ್ ಮಾಡಿದ ಅಧಿಕಾರಿಗಳು ಕೊನೆಗೂ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಪದೇಪದೇ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರಿಂದ ಶಂಕಿತನ ಕೈಗೆ ಕೋಳ ತೊಡಿಸಿ ಆಸ್ಪತ್ರೆಗೆ ಕರೆತಂದರು.

Published On - 10:10 am, Fri, 26 June 20

Follow Us
KUSHAL V
KUSHAL V
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್