ಬೆಂಗಳೂರು: ಕೊವಿಡ್ ವಿರುದ್ಧ ಹೋರಾಡುತ್ತಿದ್ದ ಕೊರೊನಾ ವಾರಿಯರ್ಸ್‌ಗೆ ಸೋಂಕಿನ ಭೀತಿ ಶುರುವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಮೂವರು ಸ್ಟಾಫ್ ನರ್ಸ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸ್ಟಾಫ್ ನರ್ಸ್‌ಗಳು ಕೊವಿಡ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗಂಟಲು ದ್ರವ ಪರೀಕ್ಷೆ ವೇಳೆ ಇವರಿಗೆ ಸೋಂಕು ಇರುವುದ ದೃಢವಾಗಿದೆ.
ಕೊರೊನಾ ವಾರಿಯರ್ಸ್‌ಗೆ ಕಿಲ್ಲರ್ ಕೊರೊನಾ ಬಿಟ್ಟೂ ಬಿಡದೇ ಕಾಡ್ತಿದೆ. ಸೋಂಕಿತರನ್ನ ಗುಣಪಡಿಸುವ ಮಹತ್ವದ ಸೇವೆಯಲ್ಲಿರುವವರಿಗೆ ಆ ಕೊರೊನಾ ಕರುಣೆಯಿಲ್ಲದೆ ಅವರ ದೇಹ ಸೇರುತ್ತಿದೆ. ಕೆಲ ದಿನಗಳ ಹಿಂದೆ ವೈದ್ಯರು ಧರಿಸುತ್ತಿರುವ ಪಿಪಿಇ ಕಿಟ್ಗಳ ಗುಣಮಟ್ಟ ಸರಿಯಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಈಗ ನರ್ಸ್ಗಳಿಗೆ ಕೊರೊನಾ ತಗುಲುತ್ತಿರುವುದು ವೈದ್ಯ ಸಿಬ್ಬಂದಿಗೆ ಆತಂಕ ತಂದಿದೆ.
Published On - 8:37 am, Tue, 16 June 20