ನಾಳೆಯಿಂದ ಅಂತಾರಾಜ್ಯ ಬಸ್ಗಳ ಸಂಚಾರ ಆರಂಭ, ಶುರುವಾಯ್ತು ಆತಂಕ!
ಬೆಂಗಳೂರು: ಕೊರೊನಾ ವೈರಸ್ ತನ್ನ ಕರಾಳ ಮುಖ ತೋರಿಸುತ್ತಿದೆ. ಕೊವಿಡ್ ಆರ್ಭಟ ಹೆಚ್ಚಾಗುತ್ತಿದೆ ಈ ನಡುವೆ ಕೆಎಸ್ಆರ್ಟಿಸಿ ಅಂತಾರಾಜ್ಯ ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮೇ 17ರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಬಸ್ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಂತಾರಾಜ್ಯಕ್ಕೆ ಪ್ರಯಾಣಿಸುವವರಿಗೆ ಈಗಾಗಲೇ ಬುಕಿಂಗ್ ಸೇವೆ ಆರಂಭಿಸಲಾಗಿದೆ. ಆದರೆ ಎಸಿ ಬಸ್ ಸಂಚಾರವಿಲ್ಲ, ಸಾಮಾನ್ಯ ಬಸ್ ಮಾತ್ರ ಸಂಚರಿಸಲಿದೆ ಎಂದು ಕೆಎಸ್ಆರ್ಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ ಈಗಾಗಲೇ ಟ್ರೈನ್ಗಳಿಂದ ಬರುತ್ತಿರುವ ಪ್ರಯಾಣಿಕರಿಂದ ಕೊರೊನಾ ದಿನೇ ದಿನೆ […]
ಬೆಂಗಳೂರು: ಕೊರೊನಾ ವೈರಸ್ ತನ್ನ ಕರಾಳ ಮುಖ ತೋರಿಸುತ್ತಿದೆ. ಕೊವಿಡ್ ಆರ್ಭಟ ಹೆಚ್ಚಾಗುತ್ತಿದೆ ಈ ನಡುವೆ ಕೆಎಸ್ಆರ್ಟಿಸಿ ಅಂತಾರಾಜ್ಯ ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮೇ 17ರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಬಸ್ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಅಂತಾರಾಜ್ಯಕ್ಕೆ ಪ್ರಯಾಣಿಸುವವರಿಗೆ ಈಗಾಗಲೇ ಬುಕಿಂಗ್ ಸೇವೆ ಆರಂಭಿಸಲಾಗಿದೆ. ಆದರೆ ಎಸಿ ಬಸ್ ಸಂಚಾರವಿಲ್ಲ, ಸಾಮಾನ್ಯ ಬಸ್ ಮಾತ್ರ ಸಂಚರಿಸಲಿದೆ ಎಂದು ಕೆಎಸ್ಆರ್ಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿ ಈಗಾಗಲೇ ಟ್ರೈನ್ಗಳಿಂದ ಬರುತ್ತಿರುವ ಪ್ರಯಾಣಿಕರಿಂದ ಕೊರೊನಾ ದಿನೇ ದಿನೆ ಹೆಚ್ಚುತ್ತಲೇ ಇದೆ. ರಾಜ್ಯದ ಅರ್ಧದಷ್ಟು ಸೋಂಕಿತರಿಗೆ ಹೊರ ಜಿಲ್ಲೆಗಳ, ರಾಜ್ಯಗಳ ನಂಟಿರುತ್ತೆ. ಇಂತಹ ಸಂದರ್ಭದಲ್ಲಿ ಆಂಧ್ರಗೆ ಬಸ್ ಸೇವೆ ಆರಂಭಿಸಿರುವುದು ಆತಂಕಕ್ಕೆ ಎಡೆ ಮಾಡಿದೆ. ಅದರಲ್ಲೂ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸೋಂಕು ಹೆಚ್ಚಾಗಿದೆ. ಕೊರೊನಾ ಹೆಚ್ಚಾಗ್ತಿರೋ ಈ ರಾಜ್ಯಗಳಿಗೆ ಬಸ್ ಸೇವೆ ಆರಂಭಿಸಿ ಮತ್ತಷ್ಟು ಅಪಾಯವನ್ನ ಆಹ್ವಾನಿಸಿದಂತಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
Published On - 7:51 am, Tue, 16 June 20